ETV Bharat / bharat

ಮಲಗಿದ್ದಾಗ ಆಯುಧದಿಂದ ಹಲ್ಲೆ ಮಾಡಿ ಹೆಂಡತಿ-ಮಗಳ ಕೊಲೆಗೈದ ವ್ಯಕ್ತಿ

author img

By

Published : Nov 12, 2021, 5:36 PM IST

ತಡರಾತ್ರಿ ಭಾಸ್ಕರ್ ಏಕಾಏಕಿಯಾಗಿ ಪತ್ನಿ ಹಾಗೂ ಮಗಳ ಮೇಲೆ ಹರಿತವಾದ ಆಯುಧದಿಂದ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ಹೊರ ಹೋಗಿದ್ದಾನೆ. ಈ ದೃಶ್ಯವನ್ನ ಮಗ ರೋಹಿತ್ ನೋಡಿದ್ದಾನೆ. ತಕ್ಷಣವೇ ಅಜ್ಜಿಗೆ ಮಾಹಿತಿ ನೀಡಿದ್ದಾನೆ..

Husband brutally murders his wife and daughter
Husband brutally murders his wife and daughter

ಪಂಢರಪುರ(ಮಹಾರಾಷ್ಟ್ರ): ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗಳ ತಲೆಗೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಂಢರಪುರದ ಭಿಲರ್ವಾಡಿಯಲ್ಲಿ ನಡೆದಿದೆ. ಇಬ್ಬರು ರಾತ್ರಿ ಕೋಣೆಯಲ್ಲಿ ಮಗಲಿದ್ದಾಗ ಹಲ್ಲೆ ನಡೆಸಲಾಗಿದೆ.

ಘಟನೆಯಲ್ಲಿ ಮೃತರನ್ನ ಲಕ್ಷ್ಮಿ(30) ಹಾಗೂ ಶೃತಿ(12) ಎಂದು ಗುರುತಿಸಲಾಗಿದೆ. ಭಾಸ್ಕರ್ ಈ ಕೃತ್ಯವೆಸಗಿರುವುದಾಗಿ ವರದಿಯಾಗಿದೆ. ಈಗಾಗಲೇ ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಭಾಸ್ಕರ್​ ತನ್ನ ಕುಟುಂಬದೊಂದಿಗೆ ಭಿಲರ್ವಾಡಿಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಪತ್ನಿ ಲಕ್ಷ್ಮಿ ಹಾಗೂ ಪುತ್ರಿ ಶೃತಿ ಒಂದು ಕೋಣೆಯಲ್ಲಿ ಮಲಗಿದ್ದರು. ಮತ್ತೊಂದು ಕೋಣೆಯಲ್ಲಿ ಪುತ್ರ ರೋಹಿತ್ ತನ್ನ ಅಜ್ಜಿ ಜೊತೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದ.

ತಡರಾತ್ರಿ ಭಾಸ್ಕರ್ ಏಕಾಏಕಿಯಾಗಿ ಪತ್ನಿ ಹಾಗೂ ಮಗಳ ಮೇಲೆ ಹರಿತವಾದ ಆಯುಧದಿಂದ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ಹೊರ ಹೋಗಿದ್ದಾನೆ. ಈ ದೃಶ್ಯವನ್ನ ಮಗ ರೋಹಿತ್ ನೋಡಿದ್ದಾನೆ. ತಕ್ಷಣವೇ ಅಜ್ಜಿಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿರಿ: ಟೀಂ ಇಂಡಿಯಾದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ವೆಂಕಟೇಶ್​ ಅಯ್ಯರ್ ಜೊತೆ Etv ಭಾರತ ಸಂದರ್ಶನ

ಘಟನಾ ಸ್ಥಳಕ್ಕೆ ತೆರಳುವಷ್ಟರಲ್ಲಿ ಲಕ್ಷ್ಮಿ ಹಾಗೂ ಶ್ರುತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.​​ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಆರೋಪಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದರ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಮೃತದೇಹಗಳನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.