ETV Bharat / bharat

UP Election : ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಎಸ್​ಪಿ.. ರ್ಯಾಲಿಯಲ್ಲಿ ಸಾವಿರಾರು ಮಂದಿ ಭಾಗಿ..

author img

By

Published : Oct 9, 2021, 5:16 PM IST

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಎಸ್‌ಪಿ ಮತ್ತು ಕಾಂಗ್ರೆಸ್‌ನ ಹಣಿಯಲು ಬಿಎಸ್​ಪಿ ರಣತಂತ್ರ ಹೆಣೆಯುತ್ತಿದೆ. ಶತಾಯಗತಾಯ ಬಿಜೆಪಿ ನೇತೃತ್ವದ ಸರ್ಕಾರವನ್ನು ಉರುಳಿಸಿ, ಮತ್ತೆ ರಾಜ್ಯದಲ್ಲಿ ಬಿಎಸ್​ಪಿ ಅಧಿಕಾರಕ್ಕೆ ತರಲು ಮಾಯಾವತಿ ಕಸರತ್ತು ನಡೆಸುತ್ತಿದ್ದಾರೆ..

ಮಾಯಾವತಿ
ಮಾಯಾವತಿ

ಲಖನೌ : ಬಿಎಸ್​ಪಿ ಸಂಸ್ಥಾಪಕ ಕಾನ್ಶಿರಾಮ್​ ಪುಣ್ಯಸ್ಮರಣೆ ಹಿನ್ನೆಲೆ ಇಂದು ಅವರ ಸ್ಮಾರಕಕ್ಕೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಗೌರವ ಸಲ್ಲಿಸಿದ್ರು. ಈ ವೇಳೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕರ್ತರನ್ನೆಲ್ಲ ಉದ್ದೇಶಿಸಿ ಮಾಯಾವತಿ ಮಾತನಾಡಿದ್ರು.

ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಎಸ್​ಪಿ

ಕಾರ್ಯಕ್ರಮದ ವೇಳೆ ಎಲ್ಲೆಲ್ಲೂ ಪಕ್ಷದ ಚಿಹ್ನೆ ಆನೆಯ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಮಾಯಾವತಿ ಪರ ಜಯಘೋಷಗಳು ಮೊಳಗಿದವು. 2022ರ ಆರಂಭದಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಇರುವುದರಿಂದ ರ್ಯಾಲಿ ಆಯೋಜಿಸುವುದರ ಮೂಲಕ ಬಿಎಸ್​ಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಎಸ್‌ಪಿ ಮತ್ತು ಕಾಂಗ್ರೆಸ್‌ನ ಹಣಿಯಲು ಬಿಎಸ್​ಪಿ ರಣತಂತ್ರ ಹೆಣೆಯುತ್ತಿದೆ. ಶತಾಯಗತಾಯ ಬಿಜೆಪಿ ನೇತೃತ್ವದ ಸರ್ಕಾರವನ್ನು ಉರುಳಿಸಿ, ಮತ್ತೆ ರಾಜ್ಯದಲ್ಲಿ ಬಿಎಸ್​ಪಿ ಅಧಿಕಾರಕ್ಕೆ ತರಲು ಮಾಯಾವತಿ ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 10 ರಿಂದ 13 ರವರೆಗೆ ಜೈ ಶಂಕರ್​​ ಕಿರ್ಗಿಸ್ತಾನ್, ಕಜಕಿಸ್ತಾನ್ ಅರ್ಮೇನಿಯಾಕ್ಕೆ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.