ETV Bharat / bharat

ವಿಶೇಷ ಚೇತನ ಬಾಲಕಿ ಮೇಲೆ ಹೋಮ್​ಗಾರ್ಡ್​ ಲೈಂಗಿಕ ದೌರ್ಜನ್ಯ ​: ಕಾಮುಕನಿಗೆ 30 ವರ್ಷ ಕಠಿಣ ಶಿಕ್ಷೆ

author img

By

Published : Aug 4, 2021, 5:48 PM IST

ವಿಶೇಷಚೇತನ ಬಾಲಕಿಯನ್ನು ಗೃಹ ಬಂಧನದಲ್ಲಿಟ್ಟು, ಲೈಂಗಿಕ ದೌರ್ಜನ್ಯವೆಸಗಿದ ಹೋಮ್​ಗಾರ್ಡ್​ ಗೆ ನ್ಯಾಯಾಲಯ ಬರೋಬ್ಬರಿ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ.

home-guard
ಹೋಮ್​ಗಾರ್ಡ್

ಹೈದರಾಬಾದ್​: ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಶೇಷ ಚೇತನ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಹೋಮ್​ಗಾರ್ಡ್​ವೊಬ್ಬನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಸ್ಥಳೀಯ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಮೊದಲ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶೆ ಸುನಿತಾ ಕುಂಚಲಾ ಅವರು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ, 2015 ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ, 2015 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಠಿಣ ಜೀವಾವಧಿ ಶಿಕ್ಷೆ, ಪೋಕ್ಸೊ ಕಾಯ್ದೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಲಯವು ಅಪರಾಧಿಗೆ ಒಟ್ಟು 50,000 ರೂ. ದಂಡ ವಿಧಿಸಿದೆ. ಪ್ರಾಸಿಕ್ಯೂಷನ್ ಪ್ರಕಾರ, ಪೋಷಕರು ಇಲ್ಲದಿರುವ ಸಮಯ ನೋಡಿ ದಿನಸಿ ವಸ್ತುಗಳನ್ನು ನೀಡುವ ನೆಪದಲ್ಲಿ ಅಕ್ಟೋಬರ್ 2020 ರಲ್ಲಿ ಹುಡುಗಿಯ ಮನೆಗೆ ನುಸುಳಿ ಅತ್ಯಾಚಾರ ಎಸಗಿದ್ದಾನೆ.

ಎಸ್‌ಟಿ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ಹೋಮ್​ಗಾರ್ಡ್​ ತನ್ನ ಮನೆಯಲ್ಲಿ ಎರಡು ದಿನಗಳ ಕಾಲ ಗೃಹಬಂಧನದಲ್ಲಿಟ್ಟು, ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ ನಂತರ ಆಕೆ ಐದು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ. ನಂತರ ಆರೋಪಿಯನ್ನು ಬಂಧಿಸಲಾಗಿತ್ತು.

ಓದಿ: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಮೃತದೇಹ ಮರಕ್ಕೆ ಕಟ್ಟಿ ಹಾಕಿದ ಕಾಮುಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.