ETV Bharat / bharat

ಹಿಮಾಚಲ ಚುನಾವಣೆ ಕಣದಲ್ಲಿ ವೈದ್ಯ: ಪ್ರಚಾರದ ಮಧ್ಯೆ ರೋಗಿಯನ್ನು ಪರೀಕ್ಷಿಸಿದ ಬಿಜೆಪಿ ಅಭ್ಯರ್ಥಿ

ಸರಿಯಾದ ವೈದ್ಯಕೀಯ ಉಪಕರಣದ ಅನುಪಸ್ಥಿತಿಯಲ್ಲಿ, ಡಾ. ಜನಕ್ ರಾಜ್ ರೋಗಿಯ ನರಗಳನ್ನು ಪರೀಕ್ಷಿಸಲು ಮೊಬೈಲ್ ಫೋನ್ ಬಳಸಿದರು. ರೋಗಿಯ ಸಂಬಂಧಿಕರು ಉನ್ನತ ಚಿಕಿತ್ಸೆಗಾಗಿ ಡಾ. ಜನಕ್ ರಾಜ್ ಅವರಿಂದ ವೈದ್ಯಕೀಯ ಮಾರ್ಗದರ್ಶನ ಪಡೆದರು.

Himachal election: BJP candidate Janak Raj seeing patients while on campaign trail
ಹಿಮಾಚಲ ಚುನಾವಣೆ ಕಣದಲ್ಲಿ ವೈದ್ಯ: ಪ್ರಚಾರದ ಮಧ್ಯೆ ರೋಗಿಯನ್ನು ಪರೀಕ್ಷಿಸಿದ ಬಿಜೆಪಿ ಅಭ್ಯರ್ಥಿ
author img

By

Published : Oct 29, 2022, 4:33 PM IST

ಶಿಮ್ಲಾ (ಹಿಮಾಚಲ ಪ್ರದೇಶ): 2022 ರಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನಾಲ್ವರು ಅಲೋಪತಿ ಮತ್ತು ಇಬ್ಬರು ಆಯುರ್ವೇದ ವೈದ್ಯರು ಕಣದಲ್ಲಿದ್ದಾರೆ. ವೈದ್ಯರು ತಮ್ಮ ಚುನಾವಣಾ ಪ್ರಚಾರದ ಹಾದಿಯಲ್ಲಿ ರಾಜಕಾರಣಿಗಳಾಗಿ ಮಾರ್ಪಟ್ಟಿದ್ದಾರೆ. ಅಗತ್ಯವಿರುವ ವ್ಯಕ್ತಿಗಳಿಗೆ ವೈದ್ಯಕೀಯ ನೆರವು ನೀಡಲು ಯಾವಾಗಲೂ ಸಿದ್ಧರಾಗಿರುತ್ತಿದ್ದ ಇವರು, ಸದ್ಯ ರಾಜಕಾರಣಿಯಾಗಿ ಮಾರ್ಪಟ್ಟಿದ್ದಾರೆ.

ಶುಕ್ರವಾರ ಹಿಮಾಚಲ ಪ್ರದೇಶದ ಚಂಬಾದ ಭರ್ಮೌರ್‌ ಕ್ಷೇತ್ರದಲ್ಲಿ ಖ್ಯಾತ ನರಶಸ್ತ್ರಚಿಕಿತ್ಸಕ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಜನಕ್ ರಾಜ್ ಬಾಂಡ್ಲಾ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಈ ನಡುವೆ ಬೆನ್ನು ನೋವಿನಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ನೀಡುವಂತೆ ವೈದ್ಯರ ಮೊರೆ ಹೋದರು. ಪ್ರಚಾರದ ಜನಜಂಗುಳಿಯ ಮಧ್ಯೆ ಡಾ. ಜನಕ್ ರಾಜ್ ವೃದ್ಧೆಯ ವೈದ್ಯಕೀಯ ವರದಿಗಳನ್ನು ಕೂಡ ಪರಿಶೀಲಿಸಿದರು. ರೋಗಿಯನ್ನು ಪರೀಕ್ಷಿಸಿದ ನಂತರ ಡಾ. ಜನಕ್ ರಾಜ್ ಕಾಗದದ ಮೇಲೆ ಕೆಲವು ಔಷಧಿಗಳನ್ನು ಬರೆದರು. ಅಲ್ಲದೆ ಮುಂದಿನ ಚಿಕಿತ್ಸೆಗೆ ಸಲಹೆ ನೀಡಿದರು.

ಸರಿಯಾದ ವೈದ್ಯಕೀಯ ಉಪಕರಣದ ಅನುಪಸ್ಥಿತಿಯಲ್ಲಿ, ಡಾ.ಜನಕ್ ರಾಜ್ ರೋಗಿಯ ನರಗಳನ್ನು ಪರೀಕ್ಷಿಸಲು ಮೊಬೈಲ್ ಫೋನ್ ಬಳಸಿದರು. ರೋಗಿಯ ಸಂಬಂಧಿಕರು ಉನ್ನತ ಚಿಕಿತ್ಸೆಗಾಗಿ ಡಾ. ಜನಕ್ ರಾಜ್ ಅವರಿಂದ ವೈದ್ಯಕೀಯ ಮಾರ್ಗದರ್ಶನ ಪಡೆದರು. ಪ್ರಸ್ತುತ ರೋಗಿಯು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಡಾ. ರಾಜೇಂದ್ರ ಪ್ರಸಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಕೀಯ ಸೇರ್ಪಡೆ ಕುರಿತು ಮಾತನಾಡಿದ ಡಾ.ಜನಕ್, ನಾನು ಮೊದಲಿನಿಂದಲೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿದ್ದೇನೆ. ಸಾರ್ವಜನಿಕ ಸಭೆಗಳಲ್ಲಿ ಜನರೊಂದಿಗೆ ಸಂವಹನ ನಡೆಸುವಾಗ ನಾನು ಯಾವಾಗಲೂ ಅವರಿಗೆ ಭರಮೌರ್ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂದು ಹೇಳುತ್ತಿದ್ದೆ. ದೊಡ್ಡ ಸಂಬಳ ನನಗೆ ಸಿಗುತ್ತಿದ್ದರೂ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ವೈದ್ಯಕೀಯ ವೃತ್ತಿಯನ್ನು ತೊರೆದಿದ್ದೇನೆ ಎಂದರು.

ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿ - ಕಾಂಗ್ರೆಸ್​ಗೆ ಬಂಡಾಯದ ಬಿಸಿ, ತಪ್ಪಿದ ಲೆಕ್ಕಾಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.