ETV Bharat / bharat

ದಶಕದಿಂದಲೂ ದೇಶ-ವಿದೇಶಕ್ಕೆ ಹರಿಯಾಣ ಹುಕ್ಕಾ ಕಿಕ್​... ಈ ಗ್ರಾಮದ ಹುಕ್ಕಾ ಎಲ್ಲೆಲ್ಲೂ ಫೇಮಸ್​​!

author img

By

Published : Jul 14, 2021, 6:09 AM IST

ಈ ಹುಕ್ಕಾಗಳು 3 ಸಾವಿರ ರೂಪಾಯಿಯಿಂದ ಮಾರಾಟಕ್ಕೆ ಲಭ್ಯವಾಗುತ್ತವೆ. ಆದರೆ ಭೈನ್ಸ್ವಾಲ್​ ಗ್ರಾಮದಲ್ಲಿ ವಿಶೇಷವಾಗಿ ತಯಾರಾದ ಹುಕ್ಕಾಗಳು 9 ಸಾವಿರ ರೂಪಾಯಿಯಿಂದ ಆರಂಭಗೊಂಡು 27 ಸಾವಿರ ರೂಪಾಯಿವರೆಗೂ ಮಾರಾಟವಾಗುತ್ತವೆ.

haryana-hookah-now-famous-in-abroad
ಈ ಗ್ರಾಮದ ಹುಕ್ಕಾ ಎಲ್ಲೆಲ್ಲೂ ಫೇಮಸ್​​..!

ಚಂಡೀಗಢ (ಹರಿಯಾಣ): ಇಲ್ಲಿನ ಸೋಣಿಪತ್ ಅನೇಕ ವಿಷಯಗಳಿಗೆ ಫೇಮಸ್ ಆಗಿದೆ. ಅದ್ರಲ್ಲೂ ಜಿಲೇಬಿ ಹಾಗೂ ಇಲ್ಲಿ ಬೆಳೆಯಲಾಗುವ ಕ್ಯಾರೆಟ್ ದೇಶವ್ಯಾಪಿ ಪ್ರಸಿದ್ಧಿ ಪಡೆದಿದೆ. ಅದರತೆ ಸೋಣಿಪತ್​ನ ಗೋಹಾನಾ ಪ್ರದೇಶ ಹುಕ್ಕಾ ತಯಾರಿಕೆಗೂ ಪ್ರಸಿದ್ಧ ನಗರವಾಗಿದ್ದು, ಇಲ್ಲಿನ ಹುಕ್ಕಾಗಳಿಗೆ ದೇಶ ಮಾತ್ರವಲ್ಲ ವಿದೇಶದಲ್ಲೂ ಬೇಡಿಕೆ ಹೆಚ್ಚಿದೆ.

ಇಲ್ಲಿನ ಭೈನ್ಸ್ವಾಲ್​ ಗ್ರಾಮದಲ್ಲಿ ದಶಕಗಳಿಂದ ಹುಕ್ಕಾ ತಯಾರಿಕೆ ನಡೆಯುತ್ತಿದೆ. ಗೋಹಾನಾ ನಗರದಿಂದ ಸುಮಾರು 10ಕಿ.ಮೀಟರ್​ ಸಾಗಿದರೆ ಒಲಿಂಪಿಕ್ಸ್​​​ ಕುಸ್ತಿಪಟು ಯೋಗೇಶ್ವರ್ ದತ್ ಹುಟ್ಟೂರಾದ ಭೈನ್ಸ್ವಾಲ್​​​​​ನಲ್ಲಿ ಹುಕ್ಕಾ ತಯಾರಾಗುತ್ತದೆ. ಈ ಹುಕ್ಕಾ ಕೊಳ್ಳಲು ಗ್ರಾಹಕರು ಏನಂದರೂ 3 ತಿಂಗಳ ಕಾಲ ಕಾಯಬೇಕಿದೆ.

ಈ ಗ್ರಾಮದ ಹುಕ್ಕಾ ಎಲ್ಲೆಲ್ಲೂ ಫೇಮಸ್​​..!

ಈ ಹುಕ್ಕಾದ ವಿಶೇಷವೆಂದರೆ ಸಾಮಾನ್ಯ ಹುಕ್ಕಾಗಳಿಗಿಂತ 10 ಕೆಜಿ ತೂಕವಿದೆ. ಅಲ್ಲದೆ ಮುಂದಿನ 50 ವರ್ಷದವರೆಗೂ ಇದು ಬಾಳಿಕೆ ಬರಲಿದೆಯಂತೆ. ಇದನ್ನು ಸುಮಾರು 4 ತಲೆಮಾರುಗಳಿಂದ ಈ ಗ್ರಾಮದಲ್ಲಿ ತಯಾರಿಸಿಕೊಂಡು ಬರಲಾಗುತ್ತಿದೆಯಂತೆ. ಈ ಹುಕ್ಕಾಗಳು 3 ಸಾವಿರ ರೂಪಾಯಿಯಿಂದ ಮಾರಾಟಕ್ಕೆ ಲಭ್ಯವಾಗುತ್ತವೆ. ಆದರೆ ಭೈನ್ಸ್ವಾಲ್​ ಗ್ರಾಮದಲ್ಲಿ ವಿಶೇಷವಾಗಿ ತಯಾರಾದ ಹುಕ್ಕಾಗಳು 9 ಸಾವಿರ ರೂಪಾಯಿಯಿಂದ ಆರಂಭಗೊಂಡು 27 ಸಾವಿರ ರೂಪಾಯಿವರೆಗೂ ಮಾರಾಟವಾಗುತ್ತವೆ.

ಹುಕ್ಕಾ ತಯಾರಿಕೆಗೆ ವಿಶೇಷ ಮರ ಬಳಸಲಾಗುತ್ತದೆ. ಸಂಪೂರ್ಣ ಕೈಯಿಂದಲೇ ತಯಾರಾಗುವ ಈ ಹುಕ್ಕಾ ಬಹಳ ಕಾಲ ಬಾಳಿಕೆ ಬರಲಿದೆ. ಜೊತೆಗೆ ಹಿತ್ತಾಳೆಯ ಬಳಕೆ, ತಾಮ್ರದ ತಂತಿಗಳ ಬಳಸಿ ಈ ಹುಕ್ಕಾ ತಯಾರಾಗುತ್ತದೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಹುಕ್ಕಾ ಇಂದಿಗೂ ಒಂದು ದೊಡ್ಡ ಉದ್ಯಮವಾಗಿದೆ. ಅಲ್ಲದೆ ಭೈನ್ಸ್ವಾಲ್ ಹುಕ್ಕಾ ವಿದೇಶದಲ್ಲೂ ಖ್ಯಾತಿ ಪಡೆದಿದೆ. ಹೀಗಾಗಿ ಇಲ್ಲಿ ತಯಾರಾಗುವ ಹುಕ್ಕಾ ಖರೀದಿಸಲು ಜನರು ತಿಂಗಳುಗಳ ಕಾಲ ಕಾಯುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.