ETV Bharat / bharat

ಮಹಿಳಾ T20 ಸೆಮಿಫೈನಲ್‌: ಟೀಂ ಇಂಡಿಯಾ ವಿರುದ್ಧ ಟಾಸ್​​​​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್

author img

By

Published : Feb 23, 2023, 6:02 PM IST

Updated : Feb 23, 2023, 6:30 PM IST

ಅನಾರೋಗ್ಯ ಕಾರಣದಿಂದ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಿಂದ ಆಲ್​ರೌಂಡರ್​ ಪೂಜಾ ವಸ್ತ್ರಾಕರ್ ಹೊರಗುಳಿದಿದ್ದಾರೆ.

ಭಾರತದ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಆಸೀಸ್
ಭಾರತದ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಆಸೀಸ್

ಕೇಪ್​ಟೌನ್​ (ದಕ್ಷಿಣ ಆಫ್ರಿಕಾ): ಮಹಿಳಾ T20 ವಿಶ್ವಕಪ್​ ಸೆಮಿಫೈನಲ್‌ ಇಂದಿನ ಪಂದ್ಯದಲ್ಲಿ ಟಾಸ್​ಗೆದ್ದ ಆಸ್ಟ್ರೇಲಿಯಾ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಇನ್ನು ಅನಾರೋಗ್ಯದಿಂದ ಬಳಲುತ್ತಿರುವ ವೇಗಿ ಪೂಜಾ ವಸ್ತ್ರಾಕರ್ ಇಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಅಲ್ಲದೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹರ್ಮನ್​ ಪ್ರೀತ್​ ಕೌರ್​ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಾಯಕಿ ಸ್ಥಾನದಲ್ಲಿ ಪಂದ್ಯವನ್ನು ಮುನ್ನಡೆಸಲಿದ್ದಾರೆ. ​​

ಬುಧವಾರದಂದು ಹರ್ಮನ್​ ಪ್ರೀತ್ ​ಕೌರ್​​, ಪೂಜಾ ವಸ್ತ್ರಾಕರ್ ಮತ್ತು ಎಡಗೈ ಸ್ಪಿನ್ನರ್ ರಾಧಾ ಯಾದವ್ ಸ್ಥಳೀಯ ಆಸ್ಪತ್ರೆಗೆ ತೆರಳಿ ಆರೋಗ್ಯದ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಹರ್ಮನ್​ ಪ್ರೀತ್​ ಕೌರ್ ಜ್ವರದಿಂದ ಬಳಲಿದರೆ, ಪೂಜಾ ವಸ್ತ್ರಾಕರ್​ ಜ್ವರದೊಂದಿಗೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಸೆಮಿಫೈನಲ್​ ಪಂದ್ಯದಿಂದ ಅವರನ್ನು ಕೈಬಿಡಲಾಗಿದೆ. ಪೂಜಾ ವಸ್ತ್ರಾಕರ್ ಸ್ಥಾನಕ್ಕೆ ಆಲ್‌ರೌಂಡರ್​​ ಸ್ನೇಹ ರಾಣ ಅವರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 47 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸ್ನೇಹ ರಾಣಾ, ಈ ಪೈಕಿ 24 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ: ಏಕದಿನ ಸರಣಿಗೆ ಆಸೀಸ್​ ತಂಡ ಪ್ರಕಟ: ಗಾಯಾಳುಗಳಾದ ಮ್ಯಾಕ್ಸಿ, ಮಾರ್ಷ್, ರಿಚರ್ಡ್​ಸನ್​ ವಾಪಸ್​

Last Updated : Feb 23, 2023, 6:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.