ETV Bharat / bharat

ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವಕ

author img

By

Published : Dec 7, 2022, 5:12 PM IST

Updated : Dec 7, 2022, 5:29 PM IST

ಸಾಲಬಾಧೆಯಿಂದ ಬೇಸತ್ತು ಯುವಕಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಆಳ್ವಾರ್‌ ಜಿಲ್ಲೆಯ ನಹರ್‌ಪುರ ಗ್ರಾಮದಲ್ಲಿ ನಡೆದಿದೆ.

Youth troubled by debt commits suicide in Alwar
ಸಾಲಬಾಧೆ ತಾಳಲಾರದೆ ಯುವಕ ಆತ್ಮಹತ್ಯೆ

ಆಳ್ವಾರ್(ರಾಜಸ್ಥಾನ): ಸಾಲಬಾಧೆಯಿಂದ ಬೇಸತ್ತು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಆಳ್ವಾರ್‌ ಜಿಲ್ಲೆಯ ನಹರ್‌ಪುರ ಗ್ರಾಮದಲ್ಲಿ ನಡೆದಿದೆ. ಇಮಾಮು ಖಾನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ತನ್ನ ಸಹೋದರ ಜಾವೇದ್ ಮನೆಗೆ ಹಿಂದಿರುಗಿದಾಗ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್​ ತಿಳಿಸಿದ್ದಾರೆ.

ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾಹುಲ್‌ನಿಂದ ಕಳೆದ ವರ್ಷ ಇಮಾಮು 35,000 ರೂಪಾಯಿ ಸಾಲ ಪಡೆದಿದ್ದ ಎಂದು ಸಹೋದರ ಜಾವೇದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಾಹುಲ್ ಸಾಲ ಪಡೆದ ಮೊತ್ತಕ್ಕೆ ಬಡ್ಡಿ ಸೇರಿಸಿ ಇಮಾಮುಗೆ 4.5 ಲಕ್ಷ ರೂ. ಸಾಲ ತೀರಿಸುವಂತೆ ಬೆದರಿಕೆ ಹಾಕುತ್ತಿದ್ದನಂತೆ.

ಈ ವಿಷಯದ ಬಗ್ಗೆ ಇಮಾಮು ತೀವ್ರ ಅಸಮಾಧಾನ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪ್ರತಿನಿತ್ಯ ಸಾಲ ಕೇಳುವವರು ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಜಾಹುಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್​ ಪುಖರಾಜ್ ಹೇಳಿದರು.

ಇದನ್ನೂ ಓದಿ:ಕೌಟುಂಬಿಕ ಕಲಹ: ಬಾವಿಗೆ ಹಾರಿ ಸಹೋದರಿಯರ ಸಾವು

Last Updated : Dec 7, 2022, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.