ETV Bharat / bharat

ಸಂಸತ್​ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ ಗುರುಪತ್ವಂತ್​ ಸಿಂಗ್ ಪನ್ನುನ್!

author img

By ETV Bharat Karnataka Team

Published : Dec 6, 2023, 10:13 AM IST

Gurpatwant Singh Pannun threatens to attack Parliament: ಸಂಸತ್ತಿನ ಮೇಲೆ ದಾಳಿ ಮಾಡುತ್ತೇನೆ ಎಂದು ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಅಮೆರಿಕ ಮೂಲದ ಸಿಖ್ಸ್ ಫಾರ್ ಜಸ್ಟಿಸ್ (ಎಸ್​ಎಫ್​ಜೆ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. 2001ರ ಸಂಸತ್ತಿನ ದಾಳಿಯ ಅಪರಾಧಿ ಅಫ್ಜಲ್ ಗುರು ಪೋಸ್ಟರ್ ಒಳಗೊಂಡಿರುವ ವಿಡಿಯೋ ಶೀರ್ಷಿಕೆಯಲ್ಲಿ 'ದೆಹಲಿ ಬನೇಗಾ ಖಲಿಸ್ತಾನ್' ಎಂದು ಬರೆಯಲಾಗಿದೆ. 'ತನ್ನನ್ನು ಕೊಲ್ಲುವ ಸಂಚು ವಿಫಲವಾಗಿದೆ' ಎಂದು ಪನ್ನುನ್ ವಿಡಿಯೋದಲ್ಲಿ ತಿಳಿಸಿದ್ದಾನೆ.

threatens to attack Parliament
ಸಂಸತ್ತಿನ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ ಗುರುಪತ್‌ವಂತ್ ಸಿಂಗ್ ಪನ್ನುನ್!

ನವದೆಹಲಿ: ಗುರುಪತ್ವಂತ್ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವರದಿ ಕೆಲವು ದಿನಗಳ ಹಿಂದೆ ಹೊರಬಿದ್ದಿತ್ತು. ಪ್ರಸ್ತುತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಡಿಸೆಂಬರ್ 13ರಂದು ಸಂಸತ್ತಿ ಮೇಲೆ ದಾಳಿ ನಡೆದು 22 ವರ್ಷಗಳು ಮುಗಿಯಲಿದೆ. ಅದಕ್ಕೂ ಮುನ್ನವೇ ಉಗ್ರ ಪನ್ನುನ್ ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸುವುದಾಗಿ ವಿಡಿಯೋದಲ್ಲಿ ಬೆದರಿಕೆ ಹಾಕಿದ್ದಾನೆ.

ಪನ್ನುನ್ ಅಮೆರಿಕ ಮೂಲದ ಸಿಖ್ಸ್ ಫಾರ್ ಜಸ್ಟಿಸ್ (ಎಸ್​ಎಫ್​ಜೆ) ಮುಖ್ಯಸ್ಥನಾಗಿದ್ದಾನೆ. ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಪನ್ನುನ್ ಬಿಡುಗಡೆ ಮಾಡಿರುವ ವಿಡಿಯೋದ ಪೋಸ್ಟರ್​ನಲ್ಲಿ 2001 ರ ಸಂಸತ್ತಿನ ದಾಳಿಯ ಅಪರಾಧಿ ಅಫ್ಜಲ್ ಗುರು ಫೋಟೋ ಇದೆ. 'ದೆಹಲಿ ಬನೇಗಾ ಖಲಿಸ್ತಾನ್' ಎಂಬ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಭಾರತೀಯ ಏಜೆನ್ಸಿಗಳು ತನ್ನನ್ನು ಕೊಲ್ಲುವ ಸಂಚು ವಿಫಲವಾಗಿದೆ ಎಂದು ಪನ್ನುನ್ ಸಂತೋಷಪಟ್ಟಿದ್ದಾನೆ. ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸುವುದಾಗಿ ಪನ್ನುನ್ ಘೋಷಣೆ ಮಾಡಿದ್ದಾನೆ.

ಸೋಮವಾರ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 22 ರವರೆಗೆ ನಡೆಯಲಿದೆ. ಈ ಮಧ್ಯೆ ಭಯೋತ್ಪಾದಕ ಪನ್ನುನ್ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ವಿಡಿಯೋ ಬಿಡುಗಡೆ ನಂತರ, ಭದ್ರತಾ ಸಂಸ್ಥೆಗಳು ಹೈ ಅಲರ್ಟ್‌ ಆಗಿವೆ. ''ಭದ್ರತಾ ಏಜೆನ್ಸಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ನ ಕೆ-2 (ಕಾಶ್ಮೀರ- ಖಾಲಿಸ್ತಾನ್) ಭಾರತ ವಿರೋಧಿ ಧೋರಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿ ಮುಂದುವರಿಸಲು ಗುರುಪತ್ವಂತ್ ಸಿಂಗ್ ಪನ್ನುನ್‌ಗೆ ಸೂಚಿಸಲಾಗಿದೆ'' ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ.

ಇತ್ತೀಚೆಗೆ ವಿಮಾನ ಪ್ರಯಾಣಿಕರಿಗೂ ಜೀವ ಬೆದರಿಕೆ ಹಾಕಿದ್ದ ಪನ್ನುನ್​: ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಖ್ಸ್‌ ಫಾರ್ ಜಸ್ಟಿಸ್​ನ (ಎಸ್‌ಎಫ್‌ಜೆ) ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್​ ಏರ್ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಿದ್ದ ವಿಡಿಯೋ ಪರಿಗಣಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ಪ್ರಕರಣ ದಾಖಲಿಸಿಕೊಂಡಿತ್ತು. ವಿಡಿಯೋದಲ್ಲಿ ಆರೋಪಿ ಪನ್ನುನ್​, ಏರ್ ಇಂಡಿಯಾದಲ್ಲಿ ಪ್ರಯಾಣಿಸುವ ಜನರಿಗೆ ಜಾಗತಿಕ ದಿಗ್ಬಂಧನ ಹಾಗೂ ವಿಮಾನಯಾನ ಕಾರ್ಯಾಚರಣೆ ಬಂದ್​ ಮಾಡುವ ಬಗ್ಗೆ ಬೆದರಿಕೆ ಹಾಕಿದ್ದನು. ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಹಲವು ಸೆಕ್ಷನ್‌ಗಳ ಅಡಿ ಭಯೋತ್ಪಾದಕ ಪನ್ನುನ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ರಕ್ತಸಿಕ್ತವಾದ ಖಾನ್​ ಯೂನಿಸ್​ ನಗರ: ಹೆಚ್ಚಿದ ಸಾವು ನೋವು, ಸುರಂಗಗಳಲ್ಲಿ ನೀರು ತುಂಬಿಸುತ್ತಿರುವ ಇಸ್ರೇಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.