ETV Bharat / bharat

ಇಲಿ ಆಟಕ್ಕೆ ಹೊತ್ತಿ ಉರಿದ ಮನೆ.. 2 ಲಕ್ಷ ನಗದು ಸೇರಿ ಇಡೀ ಮನೆ ಸುಟ್ಟು ಭಸ್ಮ!

author img

By

Published : Apr 7, 2022, 8:00 AM IST

Updated : Apr 7, 2022, 9:24 AM IST

ಇಲಿ ಆಟದಿಂದ ಇಲ್ಲಿ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿದ್ದ 2 ಲಕ್ಷ ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಹಮದಾಬಾದ್​ನಲ್ಲಿ ಈ ಘಟನೆ ನಡೆದಿದೆ.

Rat sets fire to house
ಮನೆಗೆ ಇಲಿ ಬೆಂಕಿ

ಅಹಮದಾಬಾದ್(ಗುಜರಾತ್​): ಮನೆಗಳಲ್ಲಿ ಇಲಿಗಳ ಕಾಟ ಸಾಮಾನ್ಯ. ಆದ್ರೆ ಇಲ್ಲೊಂದು ಇಲಿ ಮಾಡಿದ ಎಡವಟ್ಟಿನಿಂದ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ. ಹೌದು, ಗುಜರಾತ್​ನ ಅಹಮದಾಬಾದ್ ಬಳಿ ಕರ್ಮಭೂಮಿ ಸೊಸೈಟಿಯಲ್ಲಿರುವ ಉದ್ಯಮಿ ವಿನೋದ್ ಅವರ ಮನೆ ಬುಧವಾರ ಬೆಳಗ್ಗೆ ಇಲಿಯಿಂದ ಬೆಂಕಿಗೆ ಆಹುತಿಯಾಗಿದೆ.

ಬುಧವಾರ ಬೆಳಗ್ಗೆ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡಿ ದೀಪ ಹಚ್ಚಲಾಗಿತ್ತು. ಆದ್ರೆ ಬಳಿಕ ದೀಪದ ಬತ್ತಿಯನ್ನು ಇಲಿ ಎಳೆದುಕೊಂಡು ಮನೆತುಂಬಾ ಓಡಾಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಬಟ್ಟೆಗಳಿಗೂ ಬೆಂಕಿ ತಗುಲಿ ಇಡೀ ಮನೆಗೆ ಜ್ವಾಲೆ ಆವರಿಸಿ, 2 ಲಕ್ಷ ನಗದು ಸೇರಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಹೋಗಿವೆ. ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಆದ್ರೆ ಅದಾಗಲೇ ಮನೆ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿತ್ತು.

ಇಲಿ ಆಟಕ್ಕೆ ಹೊತ್ತಿ ಉರಿದ ಮನೆ

ಬುಧವಾರ ಬೆಳಗ್ಗೆ 10 ಗಂಟೆಗೆ ದೇವರ ಮನೆಯಲ್ಲಿ ದೀಪ ಹಚ್ಚಿದ್ದೆವು. ಬಳಿಕ ಉರಿಯುತ್ತಿದ್ದ ದೀಪದ ಬತ್ತಿಯನ್ನು ಇಲಿ ಎಳೆದುಕೊಂಡ ಮನೆಯಲ್ಲಿ ಓಡಾಡಿದ್ದರಿಂದ ಬೆಂಕಿ ಹೊತ್ತುಕೊಂಡಿತು. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾಗೂ 2 ಲಕ್ಷ ನಗದು ಸುಟ್ಟು ಹೋಗಿದೆ. ಆದ್ರೆ ಯಾರಿಗೂ ಗಾಯಗಳಾಗಿಲ್ಲ ಎಂದು ಮನೆಯ ಮಾಲೀಕ ವಿನೋದ್ ತಿಳಿಸಿದ್ದಾರೆ.

(ಇದನ್ನೂ ಓದಿ: ಹಾವನ್ನೇ ಹಿಡಿದು ಎಳೆದೊಯ್ದ ಇಲಿ: ಹಾವು-ಇಲಿ ಕಾದಾಟದ ವಿಡಿಯೋ ವೈರಲ್​​)

Last Updated :Apr 7, 2022, 9:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.