ETV Bharat / bharat

ಹಿಂದೂಗಳು ಸ್ವಾರ್ಥಿ ಎಂದ ಗುಜರಾತ್ ರಾಜ್ಯಪಾಲ

author img

By

Published : Sep 8, 2022, 1:42 PM IST

Updated : Sep 8, 2022, 1:53 PM IST

ಹಿಂದೂಗಳು ನಂ.1 ಸ್ವಾರ್ಥಿ ಎಂದು ಕರೆದ ಗುಜರಾತ್ ರಾಜ್ಯಪಾಲರ ಹೇಳಿಕೆ ವಿವಾದಕ್ಕೀಡಾಗಿದೆ. ಹಾಲು ನೀಡುವವರೆಗೆ ಮಾತ್ರ ಹಸುವನ್ನು ಇಟ್ಟುಕೊಂಡು ನಂತರ ಅವನ್ನು ರಸ್ತೆಗೆ ಬಿಡುವ ಹಿಂದೂಗಳು ಸ್ವಾರ್ಥಿಗಳು ಎಂದು ಅವರು ಹೇಳಿದ್ದಾರೆ.

Gujarat Governor calls Hindus biggest bigots
ಹಿಂದೂಗಳು ಸ್ವಾರ್ಥಿ ಎಂದ ಗುಜರಾತ್ ರಾಜ್ಯಪಾಲ

ರಾಜಪಿಪ್ಲಾ (ನರ್ಮದಾ) : ಹಿಂದೂಗಳನ್ನು ಸ್ವಾರ್ಥಿಗಳು ಎಂದು ಕರೆದ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಹೇಳಿಕೆ ಭಾರಿ ವಿವಾದ ಹುಟ್ಟುಹಾಕಿದೆ. ನರ್ಮದಾ ಜಿಲ್ಲೆಯ ಪೊಯಿಚಾ ಗ್ರಾಮದಲ್ಲಿ ‘ಪ್ರಕೃತಿಯ ಮಡಿಲಲ್ಲಿ ಸಾವಯವ ಕೃಷಿ’ ವಿಚಾರ ಸಂಕಿರಣದಲ್ಲಿ ಬುಧವಾರ ಅವರು ಈ ಹೇಳಿಕೆ ನೀಡಿದ್ದಾರೆ.

ರಾಜ್ಯದ ಎರಡು ಪ್ರಮುಖ ಪತ್ರಿಕೆಗಳು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಉಲ್ಲೇಖಿಸಿವೆ. ಜನರು ಜೈ ಗೋಮಾತಾ ಎಂದು ಜಪಿಸುತ್ತಾರೆ. ಆದರೆ ಅವರು ಹಾಲು ನೀಡುವವರೆಗೆ ಮಾತ್ರ ಹಸುವನ್ನು ತಮ್ಮ ಲಾಯದಲ್ಲಿ ಇಟ್ಟುಕೊಳ್ಳುತ್ತಾರೆ. ಹಾಲು ನೀಡುವುದನ್ನು ನಿಲ್ಲಿಸಿದ ನಂತರ ಅದನ್ನು ರಸ್ತೆಗೆ ಬಿಡುತ್ತಾರೆ. ಅದಕ್ಕಾಗಿಯೇ ಹಿಂದೂಗಳು ಸ್ವಾರ್ಥಿ ನಂಬರ್ 1 ಎಂದು ನಾನು ಹೇಳುತ್ತೇನೆ. ಹಿಂದೂ ಧರ್ಮ ಮತ್ತು ಗೋವು ಪರಸ್ಪರ ಸಂಬಂಧ ಹೊಂದಿವೆ. ಆದರೆ ಇಲ್ಲಿ ಜನರು ಸ್ವಾರ್ಥದಿಂದ ಜೈ ಗೋಮಾತಾ ಎಂದು ಜಪಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಜನರು ದೇವರನ್ನು ಪ್ರಾರ್ಥಿಸಲು ದೇವಾಲಯ, ಮಸೀದಿ, ಚರ್ಚ್, ಗುರುದ್ವಾರಗಳಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ದೇವರು ಅವರನ್ನು ಆಶೀರ್ವದಿಸುತ್ತಾನೆ. ನೀವು ಸಾವಯವ ಕೃಷಿಗೆ ಮರಳಿದರೆ, ದೇವರು ನಿಮ್ಮೊಂದಿಗೆ ತಾನಾಗಿಯೇ ಸಂತೋಷಪಡುತ್ತಾನೆ ಎಂದು ನಾನು ವೈಜ್ಞಾನಿಕ ಪುರಾವೆಗಳೊಂದಿಗೆ ಘೋಷಿಸುತ್ತೇನೆ. ರಾಸಾಯನಿಕ ಗೊಬ್ಬರ ಹಾಕಿ ದನಗಳನ್ನು ಕೊಲ್ಲುತ್ತಿರುವಿರಿ. ಸಾವಯವ ಕೃಷಿಗೆ ಮುಂದಾದರೆ ಜಾನುವಾರುಗಳಿಗೆ ಜೀವ ತುಂಬಿದಂತಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Last Updated : Sep 8, 2022, 1:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.