ETV Bharat / bharat

ಎಣ್ಣೆ ಏಟಿನಲ್ಲಿ ತನ್ನ ಮದುವೆಗೆ ಹೋಗಲು ಮರೆತ ವರ..!

author img

By

Published : Mar 16, 2023, 10:59 PM IST

ವಾಸ್ತವವಾಗಿ ವಧು ವೇಷದಲ್ಲಿ ಯುವತಿಯೊಬ್ಬರು ತನ್ನ ವರನಿಗಾಗಿ ಕಾಯುತ್ತಿದ್ದಳು. ಆದರೆ, ವರ ಮಹಾಶಯ ತನ್ನ ಮದುವೆಗೆ ಹೋಗುವುದನ್ನು ಮರೆತು ಬಿಟ್ಟಿದ್ದಾನೆ. ಬಿಹಾರ ರಾಜ್ಯದ ಸುಲ್ತಂಗಂಜ್ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.

groom forgot to go to his wedding IN Bhagalpur
ತನ್ನ ಮದುವೆಗೆ ಹೋಗಲು ಮರೆತ ವರ

ಭಾಗಲ್ಪುರ(ಬಿಹಾರ): ಬಿಹಾರ ರಾಜ್ಯದಲ್ಲಿ ಹಲವು ವಿಚಿತ್ರ ಪ್ರಕರಣಗಳು ಮುನ್ನೆಲೆಗೆ ಬರುವುದು ಸಾಮಾನ್ಯವಾಗಿದೆ. ಈ ಸ್ಟೋರಿ ನೋಡಿದರೆ, ಎಲ್ಲರಿಗೂ ಆಶ್ಚರ್ಯ ಉಂಟಾಗುತ್ತದೆ. ಹೌದು, ನಿಜವಾಗಿಯೂ ಇಂತಹದ್ದೊಂದು ಘಟನೆ ಸಂಭವಿಸಿದೆ. ವಾಸ್ತವವಾಗಿ ವಧು ವೇಷದಲ್ಲಿ ಯುವತಿಯೊಬ್ಬರು ತನ್ನ ವರನಿಗಾಗಿ ಕಾಯುತ್ತಿದ್ದಳು. ಆದರೆ, ವರ ಮಹಾಶಯ ತನ್ನ ಮದುವೆಗೆ ಹೋಗುವುದನ್ನೇ ಮರೆತು ಬಿಟ್ಟಿದ್ದಾನೆ.

ಮದುವೆಗೆ ಹೋಗುವುದನ್ನೇ ಮರೆತ ವರ: ಸುಲ್ತಾನ್​​ಗಂಜ್​ ಗ್ರಾಮವೊಂದರಲ್ಲಿ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕಹಲ್‌ಗಾಂವ್‌ನ ಅಂತಿಚಾಕ್‌ನಿಂದ ಮದುವೆ ಮೆರವಣಿಗೆ ಬರಬೇಕಿತ್ತು. ಆದರೆ, ಮದುವೆಗೂ ಮುನ್ನ ವರ ಕಂಠಪೂರ್ತಿ ಕುಡಿದಿದ್ದಾನೆ. ಮತ್ತೊಂದೆಡೆ ಅಂತಿಚಾಕ್ ಗ್ರಾಮದಲ್ಲಿ, ಇಡೀ ಕುಟುಂಬ ಮತ್ತು ವಧುವಿನ ಅತಿಥಿಗಳು ಮದುವೆಗಾಗಿ ಕಾಯುತ್ತಿದ್ದರು. ಆದರೆ, ವರನು ಮದುವೆ ಕಾರ್ಯಕ್ರಮಕ್ಕೆ ಬರಲೇ ಇಲ್ಲ.

ಮದುವೆಯಾಗಲು ನಿರಾಕರಿಸಿದ ಯುವತಿ: ವರ ಮಿಯಾನ್ ಕುಡಿದು ಬಂದಿದ್ದ ವೇಳೆ, ಆತನಿಗೆ ದೊಡ್ಡ ಆಘಾತವಾಗಿದೆ. ನಂತರ ವರನು ತನ್ನ ವಧುವನ್ನು ಮದುವೆಯಾಗಲು ಬಂದಿದ್ದ. ಆದರೆ, ಈ ಹುಡುಗ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುವುದಿಲ್ಲ ಹಾಗೂ ಇಡೀ ಜೀವನವನ್ನು ಕುಡುಕನೊಂದಿಗೆ ಕಳೆಯುವುದು ಸುಲಭವಲ್ಲ ಎಂದು ವಧು ಅರಿತುಕೊಂಡಿದ್ದಾಳೆ. ಅದಕ್ಕಾಗಿಯೇ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಾಳೆ.

ವರನ ಹಾಗೂ ಆತನ ಸಂಬಂಧಿಕರು ಒತ್ತೆಯಾಳಾಗಿ ಇರಿಸಲಾಗಿತ್ತು: ಇದೇ ವೇಳೆ ಮದುವೆಗೆ ತಗಲುವ ವೆಚ್ಚವನ್ನು ವಾಪಸ್ ನೀಡುವಂತೆ ಯುವತಿ ಕುಟುಂಬಸ್ಥರು ಒತ್ತಾಯಿಸಿದರು. ಇದಕ್ಕಾಗಿ ಹುಡುಗಿಯ ಸಂಬಂಧಿಕರು, ವರ ಹಾಗೂ ಆತನ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಆ ನಂತರ ಹುಡುಗನ ಕಡೆಯಿಂದ ಕೆಲವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ, ಹಣ ತರಲು ವರನ ಮನೆಗೆ ಹೋದರು. ಈ ನಡವೆ ವರವನನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಬಗ್ಗೆ ಸ್ವತಃ ಹುಡುಗಿಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು.

ಇಲ್ಲಿ ನಡೆದಿತ್ತು ವಿಚಿತ್ರ ಮದುವೆ: ಇನ್ನೊಂದು ಪ್ರಕರಣದಲ್ಲಿ ಪ್ರೀತಿ ಹಾಗೂ ಸೇಡಿನ ವಿಚಿತ್ರ ಘಟನೆ ಬಿಹಾರದಲ್ಲಿ ಜರುಗಿತ್ತು. ಮಾನಸಿಕ ಖಿನ್ನತೆಗೊಳಗಾದ ಪತಿಯೊಬ್ಬ ಇಲ್ಲಿನ ಖಗರಿಯಾ ಎಂಬಲ್ಲಿ ತನ್ನ ಹೆಂಡತಿಯ ಪ್ರೇಮಿಯ ಪತ್ನಿಯನ್ನೇ ವಿವಾಹವಾಗಿದ್ದನು. ನಾಲ್ಕು ಮಕ್ಕಳನ್ನು ಹೊಂದಿರುವ ವ್ಯಕ್ತಿಯನ್ನು ಹೆಂಡತಿ ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಆತ ಈ ರೀತಿಯ ವಿಲಕ್ಷಣ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಹುಟ್ಟಿಸಿತ್ತು.

ಖಗರಿಯಾ ಜಿಲ್ಲೆಯ ಪಟ್ಟಣದಲ್ಲಿ ನಡೆದ ಈ ಪ್ರಕರಣ ಚರ್ಚೆಗೆ ಗ್ರಾಸವಾಗಿತ್ತು. ಇನ್ನೊಂದು ವಿಚಿತ್ರವೆಂದರೆ, ವಿವಾಹವಾದ ಇಬ್ಬರೂ ಮಹಿಳೆಯರ ಹೆಸರು ಕೂಡಾ ರೂಬಿ ದೇವಿ. ಇಡೀ ಕುಟುಂಬದ ಒಪ್ಪಿಗೆಯೊಂದಿಗೆ ಈ ವಿವಾಹ ನೆರವೇರಿಸಲಾಗಿತ್ತು.

ಜಿಲ್ಲೆಯ ಚೌಥಮ್ ಬ್ಲಾಕ್​ನ ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ 2009ರಲ್ಲಿ ರೂಬಿ ದೇವಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ, ಇತ್ತೀಚೆಗೆ ರೂಬಿ, ಮುಖೇಶ್ ಜೊತೆಗೆ ಪ್ರೇಮ ಸಂಬಂಧ ಬೆಳೆಸಿದ್ದರು. ಈತ ಇದೇ ಜಿಲ್ಲೆಯ ಪಾಸ್ರಾಹಾ ಗ್ರಾಮದ ನಿವಾಸಿ. ಮದುವೆಗೂ ಮುನ್ನ ರೂಬಿ ಪಾಸ್ರಾಹಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆತನ ಜೊತೆಗೆ ದೀರ್ಘಕಾಲದವರೆಗೆ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿತ್ತು.

ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ ಪತ್ನಿ ಮುಖೇಶ್ ಜೊತೆ ಓಡಿಹೋಗಿರುವ ವಿಷಯ ತಿಳಿದು ತಕ್ಷಣವೇ, ನೀರಜ್ ಮುಖೇಶ್ ವಿರುದ್ಧ ಪಸ್ರಾಹಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದನು. ಈ ಸಮಸ್ಯೆ ಪರಿಹರಿಸಲು ಗ್ರಾಮದಲ್ಲಿ ಪಂಚಾಯತಿ ನಡೆಸಲಾಗಿದೆ. ಆದರೆ ಮುಖೇಶ್ ಒಪ್ಪಲಿಲ್ಲ.

ಓಡಿಹೋಗಿರುವ ಜೋಡಿಯ ಮೇಲೆ ಸೇಡು ತೀರಿಸಿಕೊಳ್ಳಲು ನೀರಜ್ ಪ್ಲಾನ್ ಮಾಡಿದ್ದನು. ಮುಕೇಶ್​ ಹೆಂಡತಿಯೊಂದಿಗೆ ಅಂದ್ರೆ, ಮಾನ್ಸಿ ಬ್ಲಾಕ್​ನ ಆಮ್ನಿ ಗ್ರಾಮದ ರೂಬಿ ಎಂಬ ಮಹಿಳೆಯನ್ನು ನೀರಜ್ ಫೆಬ್ರವರಿ 18ರಂದು ಸ್ಥಳೀಯ ದೇವಾಲಯವೊಂದರಲ್ಲಿ ವಿವಾಹವಾಗಿದ್ದನು. ಈ ವಿಚಿತ್ರ ಮದುವೆ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.

ಇದನ್ನೂ ಓದಿ: ನಿದ್ರೆ ಮಾತ್ರೆ ಸೇವಿಸಿದ್ರೂ ಬದುಕುಳಿದ ವೃದ್ಧೆ: ಕತ್ತು ಹಿಸುಕಿ ಸಾಯಿಸಿದ ಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.