ETV Bharat / bharat

ಬಿಹಾರ ವಿಧಾನಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಮಹಾಮೈತ್ರಿಕೂಟ

author img

By

Published : Aug 11, 2022, 7:04 AM IST

ಮಹಾಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಬಿಜೆಪಿ ಶಾಸಕರಾಗಿರುವ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.

Bihar Assembly Speaker
ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ

ಪಾಟ್ನಾ: ಬಿಹಾರದ ಹೊಸ ಆಡಳಿತ ಸಮ್ಮಿಶ್ರ ಮಹಾಘಟಬಂಧನ್ (ಮಹಾಮೈತ್ರಿಕೂಟ) ಬುಧವಾರ ಬಿಜೆಪಿ ಶಾಸಕರಾಗಿರುವ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎಂದು ಜೆಡಿಯು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮಹಾಮೈತ್ರಿಕೂಟದ ಹಲವು ಶಾಸಕರು ಸಹಿ ಮಾಡಿರುವ ನೋಟಿಸ್‌ ಅನ್ನ ವಿಧಾನಸಭೆ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಲಾಗಿದೆ. ಮಹಾಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಿತೀಶ್ ಕುಮಾರ್ ವಿಶ್ವಾಸಮತ ಯಾಚನೆಗೆ ಅನುವು ಮಾಡಿಕೊಡಲು ಸದನ ಸಭೆ ನಡೆಸುವಾಗ ಸಿನ್ಹಾ ವಿರುದ್ಧದ ನಿರ್ಣಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜೆಡಿಯುನ ಹಿರಿಯ ನಾಯಕ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.

ಆಗಸ್ಟ್ 24 ಅಥವಾ 25 ರಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವ ನಿರೀಕ್ಷೆಯಿದೆ. ನಿಯಮದ ಪ್ರಕಾರ, ಬಹುಮತದಿಂದ ಅಂಗೀಕರಿಸಲ್ಪಟ್ಟ ವಿಧಾನಸಭೆಯ ನಿರ್ಣಯದ ಮೂಲಕ ಸ್ಪೀಕರ್ ಅನ್ನು ಅಧಿಕಾರದಿಂದ ತೆಗೆದುಹಾಕಬಹುದು ಎಂದರು.

ಮಹಾಘಟಬಂಧನ್‌ ವಿಧಾನಸಭೆಯಲ್ಲಿ ಒಟ್ಟು 164 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 77 ಶಾಸಕರನ್ನು ಹೊಂದಿದೆ. ಸ್ಪೀಕರ್ ಉದ್ದೇಶ ಅನುಮಾನಾಸ್ಪದವಾಗಿತ್ತು. ಸಿನ್ಹಾ ಅವರು ಮಂಗಳವಾರ ಬಿಜೆಪಿ ನಾಯಕರ ನೇತೃತ್ವದಲ್ಲಿ ನೈತಿಕ ಸಮಿತಿಯ ಸಭೆ ಕರೆದಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ವಿಶೇಷ ಸಶಸ್ತ್ರ ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸಿದಾಗ ವಿಧಾನಸಭೆಯಲ್ಲಿ ನಡೆದ ಗದ್ದಲದ ಕುರಿತು ಹೊಸ ವರದಿಯನ್ನು ಪಡೆದರು. ಈ ವರದಿಯು ಶಾಸಕ ಅನರ್ಹತೆಗೆ ಕಾರಣವಾಗಬಹುದು ಎಂದು ಹೇಳಿದರು ಎಂದು ಇನ್ನೊಬ್ಬ ಜೆಡಿಯು ನಾಯಕ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿ ಸಿಎಂ ನಿತೀಶ್ ಕುಮಾರ್‌ ಕಾಲಿಗೆರಗಿದ ಲಾಲು ಪುತ್ರ ತೇಜಸ್ವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.