ETV Bharat / bharat

ಬ್ರಿಟಿಷರ ಕಾಲದ IPC, CrPC, Evidence Actಗೆ ಗುಡ್‌ಬೈ! ಲೋಕಸಭೆಯಲ್ಲಿ ಹೊಸ 3 ಮಸೂದೆ ಮಂಡಿಸಿದ ಅಮಿತ್​ ಶಾ

author img

By

Published : Aug 11, 2023, 4:09 PM IST

ಬ್ರಿಟಿಷರ ಕಾಲದ ಭಾರತೀಯ ದಂಡಸಂಹಿತೆ-1860, ಅಪರಾಧ ಪ್ರಕ್ರಿಯೆ ಕಾಯ್ದೆ-1898 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ- 1872 ಅನ್ನು ಬದಲಿಸುವ ಹೊಸ ಮೂರು ಮಸೂದೆಗಳನ್ನು ಇಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಲೋಕಸಭೆಯಲ್ಲಿ ಮಂಡಿಸಿದರು.

Govt tables bills in LS to end British era laws of IPC, CrPC, Evidence Act
ಬ್ರಿಟಿಷರ ಕಾಲದ IPC, CrPC, Evidence Actಗೆ ವಿದಾಯ ಹೇಳಲು ಹೊಸ ಮಸೂದೆಗಳ ಮಂಡಿಸಿದ ಅಮಿತ್​ ಶಾ: ದೇಶದ್ರೋಹ ರದ್ದು!

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಇಂದು ಮಹತ್ವದ ಮೂರು ಮಸೂದೆಗಳನ್ನು ಮಂಡಿಸಿತು. ಬ್ರಿಟಿಷರ ಕಾಲದ ಕಾನೂನುಗಳನ್ನು ಬದಲಿಸುವ ಮಸೂದೆಗಳನ್ನು ಮಂಡಿಸಿದ ಗೃಹ ಸಚಿವ ಅಮಿತ್​ ಶಾ, ಪ್ರಾಸ್ತಾವಿತ ಕಾನೂನುಗಳು ಕೇಂದ್ರದ ಹಂತದಲ್ಲಿ ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿವರ್ತಿಸಲಿವೆ ಹಾಗು ಭಾರತೀಯ ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತವೆ ಎಂದು ಹೇಳಿದರು.

ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita - BNS) - 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (Bharatiya Nagarik Suraksha Sanhita - BNSS) - 2023 ಹಾಗೂ ಭಾರತೀಯ ಸಾಕ್ಷ್ಯ (Bharatiya Sakshya - BS) - 2023 ಮಸೂದೆಯನ್ನು ಅಮಿತ್ ಶಾ ಮಂಡಿಸಿದ್ದಾರೆ.

  • #WATCH | Union Home Minister Amit Shah says, "...Under this law, we are repealing laws like Sedition...," as he speaks on Bharatiya Nyaya Sanhita Bill, 2023; The Bharatiya Sakshya Bill, 2023 and The Bharatiya Nagrik Suraksha Sanhita Bill in Lok Sabha. pic.twitter.com/CHlz0VOf7Z

    — ANI (@ANI) August 11, 2023 " class="align-text-top noRightClick twitterSection" data=" ">

''ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ (Indian Penal Code) - 1860, ಅಪರಾಧ ಪ್ರಕ್ರಿಯೆ ಕಾಯ್ದೆ (Criminal Procedure Act) - 1898 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (Indian Evidence Act) - 1872ರ ಸ್ಥಾನವನ್ನು ತುಂಬುತ್ತವೆ. ಜನತೆಗೆ ತ್ವರಿತ ನ್ಯಾಯ ಒದಗಿಸಲು ಮತ್ತು ಜನರ ಸಮಕಾಲೀನ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಉಳಿಸಿಕೊಳ್ಳುವ ಕಾನೂನು ವ್ಯವಸ್ಥೆಯನ್ನು ರಚಿಸಲು ಈ ಬದಲಾವಣೆಗಳನ್ನು ಮಾಡಲಾಗಿದೆ'' ಎಂದು ಶಾ ವಿವರಿಸಿದರು.

''ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮಸೂದೆಯು ದೇಶದ್ರೋಹ ಕಾನೂನನ್ನು ರದ್ದುಗೊಳಿಸುತ್ತದೆ. ಗುಂಪು ಹತ್ಯೆ ಮತ್ತು ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರದಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆ ನೀಡುವ ನಿಬಂಧನೆಗಳನ್ನು ಹೊಂದಿದೆ. ಸಣ್ಣ ಅಪರಾಧಗಳಿಗೆ ಶಿಕ್ಷೆಗಳಲ್ಲೊಂದಾಗಿ ಮೊದಲ ಬಾರಿಗೆ ಸಮುದಾಯ ಸೇವೆಯನ್ನು ಒದಗಿಸುವ ನಿಬಂಧನೆಗಳನ್ನು ಈ ಮಸೂದೆ ಹೊಂದಿದೆ'' ಎಂದು ಗೃಹ ಸಚಿವರು ತಿಳಿಸಿದರು.

"ಮಸೂದೆಯು ಪ್ರತ್ಯೇಕತೆಯ ಕಾರ್ಯಗಳು, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಹಾಗೂ ಸಮಗ್ರತೆಗೆ ಅಪಾಯವನ್ನುಂಟು ಮಾಡುವಂತಹ ಪ್ರಕರಣದಲ್ಲಿ ಹೊಸ ಅಪರಾಧಗಳನ್ನು ಪಟ್ಟಿ ಮಾಡುತ್ತದೆ. ಈ ಮಸೂದೆಗಳು ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿವರ್ತಿಸುತ್ತವೆ ಎಂದು ನಾನು ಸದನಕ್ಕೆ ಭರವಸೆ ನೀಡಬಲ್ಲೆ. ಇದರ ಗುರಿ ಶಿಕ್ಷಿಸುವುದಲ್ಲ, ನ್ಯಾಯ ಒದಗಿಸುವುದು'' ಎಂದು ಹೇಳಿದರು.

ಮುಂದುವರೆದು, ''ಅಪರಾಧವನ್ನು ನಿಲ್ಲಿಸುವ ಭಾವನೆ ತರಲು ಶಿಕ್ಷೆಯನ್ನು ನೀಡಲಾಗುವುದು. ಬ್ರಿಟಿಷರು ಮಾಡಿದ ಕಾನೂನುಗಳು ತಮ್ಮ ಆಡಳಿತವನ್ನು ವಿರೋಧಿಸುವವರನ್ನು ಶಿಕ್ಷಿಸುವ ಗುರಿಯನ್ನು ಹೊಂದಿರುವ ಗುಲಾಮಗಿರಿಯ ಸಂಕೇತಗಳಿಂದ ತುಂಬಿವೆ'' ಎಂದೂ ಅಮಿತ್​ ಶಾ ತಿಳಿಸಿದರು.

''ಈ ರದ್ದಾಗುತ್ತಿರುವ ಕಾನೂನುಗಳು ಬ್ರಿಟಿಷರ ಆಡಳಿತವನ್ನು ರಕ್ಷಿಸಲು ಮತ್ತು ಬಲಪಡಿಸಲು ಶಿಕ್ಷಿಸುವುದಾಗಿತ್ತು. ನ್ಯಾಯವನ್ನು ಒದಗಿಸಲು ಅಲ್ಲ. ಇವುಗಳನ್ನು ಬದಲಾಯಿಸುವ ಮೂಲಕ ಹೊಸ ಮೂರು ಕಾನೂನುಗಳು ಕೇಂದ್ರ ಹಂತದಲ್ಲಿ ಭಾರತೀಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮನೋಭಾವಯನ್ನು ತರುತ್ತವೆ" ಎಂದು ಪ್ರತಿಪಾದಿಸಿದರು.

ಈ ಮೂರು ಮಸೂದೆಗಳನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಗೃಹ ಸಚಿವರು ಮನವಿ ಮಾಡಿದರು.

ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಮೇಲೆ ಹಿಂಸಾತ್ಮಕ ಕೃತ್ಯ ಎಸಗಿರುವುದು ದೌರ್ಜನ್ಯವಲ್ಲದೆ ಮತ್ತೇನು?: ಬೇಸರ ವ್ಯಕ್ತಪಡಿಸಿದ ಸುಪ್ರೀಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.