ETV Bharat / bharat

ವಾಕಿಂಗ್​ಗೆ ಹೋಗಿದ್ದ ಯುವತಿ ಅಪಹರಣ..ಆರೋಪಿಗಳಿಗಾಗಿ ಖಾಕಿ ಬಲೆ

author img

By

Published : Sep 16, 2021, 11:29 AM IST

ಗ್ರೇಟರ್ ನೋಯ್ಡಾದಲ್ಲಿ ಮುಂಜಾನೆ ವಾಕಿಂಗ್​ಗೆ ಹೋಗಿದ್ದ ಯುವತಿಯನ್ನು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿದ್ದಾರೆ.

ಯುವತಿ ಅಪಹರಣ
ಯುವತಿ ಅಪಹರಣ

ನೋಯ್ಡಾ(ಉತ್ತರಪ್ರದೇಶ): ಮುಂಜಾನೆ ವಾಕಿಂಗ್​ಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ನಡೆದ ಕೂಡಲೇ ಜನರು NH 91 ಹೆದ್ದಾರಿಯನ್ನು ನಿರ್ಬಂಧಿಸಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ, ಸದೋಪುರ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಪೋಷಕರಿಂದ ಯುವತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿರುವ ಬದಲ್ಪುರ್​ ಠಾಣಾ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಕ್ಷೀರಭಾಗ್ಯ ಯೋಜನೆಯ ಹಾಲಿನಪುಡಿ ಅಕ್ರಮ ಸಾಗಣೆ ಆರೋಪ - ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಆರೋಪಿ

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.