ETV Bharat / bharat

ಕಾಂಗ್ರೆಸ್​ ಬಿಡಲು ರಾಹುಲ್​ ಗಾಂಧಿ ಕಾರಣ, ಮೋದಿ ಚತುರ ಆಡಳಿತಗಾರ: ಗುಲಾಂ ನಬಿ ಆಜಾದ್

author img

By

Published : Apr 6, 2023, 12:51 PM IST

ಜಮ್ಮು ಕಾಶ್ಮೀರದಲ್ಲಿ ಸ್ವತಂತ್ರ ಪಕ್ಷ ಕಟ್ಟಿರುವ ಗುಲಾಂ ನಬಿ ಆಜಾದ್​ ಅವರು ಮತ್ತೊಮ್ಮೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಟೀಕಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.

ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್​ ಪಕ್ಷದಲ್ಲಿ ಬೆನ್ನುಮೂಳೆ ಇಲ್ಲದವರು ಮಾತ್ರ ಇರಲು ಸಾಧ್ಯ. ಪಕ್ಷದಿಂದ ನಾನು ಹೊರಬರಲು ರಾಹುಲ್​ ಗಾಂಧಿಯೇ ಕಾರಣ ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್​ ಅವರು ಕಾಂಗ್ರೆಸ್​ ನಾಯಕತ್ವದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯಲ್ಲಿ ತಾವು ವಿರಚಿತ ಆಜಾದ್ ಆತ್ಮಚರಿತ್ರೆ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್​ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ಈಗಿನ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಮತ್ತೆ ನನ್ನನ್ನು ಕಾಂಗ್ರೆಸ್​ಗೆ ಆಹ್ವಾನಿಸಿದರೂ, ಆ ನಿರ್ಧಾರ ನನ್ನ ಕೈಯಲ್ಲಿಲ್ಲ ಎಂದರು.

  • some of India's and the world's most influential leaders, #Azaad captures the essence of the great Indian story. I hope my readers will enjoy reading it as much as I have enjoyed writing it! pic.twitter.com/jz26rVnDfK

    — Ghulam Nabi Azad (@ghulamnazad) April 5, 2023 " class="align-text-top noRightClick twitterSection" data=" ">

ನಾನು ಕಾಂಗ್ರೆಸ್​​ನಲ್ಲಿದ್ದಾಗ ಪಕ್ಷದ ಆಂತರಿಕ ಸುಧಾರಣೆಗಾಗಿ ಜಿ-23 ಯಿಂದ ಹಲವು ಸಲಹೆಗಳನ್ನು ನೀಡಲಾಗಿತ್ತು. ಆದರೆ, ರಾಹುಲ್​ ಗಾಂಧಿ ಅವರು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಅವರ ಆಪ್ತರಾಗಿದ್ದ ಬಿಜೆಪಿಯಲ್ಲಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮುಂದೆಯೇ ಈ ವಿಷಯಗಳನ್ನು ಪ್ರಸ್ತಾಪಿಸಲಾಗಿತ್ತು. ಅವರು ಅಂದು ಸಲಹೆಗಳನ್ನು ಆಲಿಸಿದ್ದರೆ ಕಾಂಗ್ರೆಸ್​ ಈಗಿನ ಸ್ಥಿತಿಗೆ ತಲುಪುತ್ತಿರಲಿಲ್ಲ. ನಾವಿಂದು ಕಾಂಗ್ರೆಸ್​ ತೊರೆಯಲು ರಾಹುಲ್​ ಗಾಂಧಿಯೇ ಕಾರಣ ಎಂದು ಆಜಾದ್​​​ ದೂರಿದರು.

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ನಾಯಕತ್ವವನ್ನು ಶ್ಲಾಘಿಸಿದ ಆಜಾದ್, "ಅವರು ಅತ್ಯುತ್ತಮ ನಾಯಕರು. ನಾನು ಅವರೆಲ್ಲರಿಗೂ ತುಂಬಾ ಹತ್ತಿರವಾಗಿದ್ದೆ. ಇಂದಿರಾ ಗಾಂಧಿ ಮತ್ತು ನಾನು ಉತ್ತಮ ರಾಜಕೀಯ ಸಮೀಕರಣವನ್ನು ಹೊಂದಿದ್ದೆವು. ಅವರು ಪಕ್ಷದೊಳಗೆ ಒಗ್ಗಟ್ಟನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿದಿದ್ದರು. ರಾಜೀವ್​ ಮತ್ತು ಸಂಜಯ್ ಗಾಂಧಿ ಅವರ ನಾಯಕತ್ವವನ್ನೂ ಆಜಾದ್​ ಇದೇ ವೇಳೆ ಹೊಗಳಿದ್ದಾರೆ.

ಬಿಜೆಪಿ ಜೊತೆ ಕೈಜೋಡಿಸಲು ರೆಡಿ: ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸವಲತ್ತುಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಒಂದು ವೇಳೆ ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಲೇ ಚುನಾವಣೆ ನಡೆದರೆ, ಅಲ್ಲಿ ಸರ್ಕಾರ ರಚಿಸುವ ಅವಕಾಶ ಉದ್ಭವವಾದರೆ ಅಂತಹ ಸಂದರ್ಭದಲ್ಲಿ ಬಿಜೆಪಿಯ ಜೊತೆ ಹೋಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಆಜಾದ್​ ಸ್ಪಷ್ಟಪಡಿಸಿದರು.

ರಾಹುಲ್ ಮಾಡಿದ ತಪ್ಪು ಅವರಿಗೇ ಮುಳುವು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹತ್ತಿರವಿರುವವರು ಮತ್ತು ಅವರ ವಿರೋಧಿಗಳು ಮಾಡಿದ್ದಕ್ಕಾಗಿ ಇಂದು ಅವರಿಗೆ ಶಿಕ್ಷೆಯಾಗಿದೆ. 2013ರಲ್ಲಿ ಯುಪಿಎ ಸರ್ಕಾರ ತಂದ ಸುಗ್ರೀವಾಜ್ಞೆಯನ್ನು ಹರಿದು ಹಾಕದಿದ್ದರೆ ಇಂದು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗುತ್ತಿರಲಿಲ್ಲ. ಪಕ್ಷದ ಅಂದಿನ ಉಪಾಧ್ಯಕ್ಷರಾಗಿದ್ದ ರಾಹುಲ್ ಸುಗ್ರೀವಾಜ್ಞೆಯನ್ನು ಕಸದ ಬುಟ್ಟಿಗೆ ಹಾಕಿದರು. ರಾಹುಲ್ ಅವ​ರನ್ನು ಎದುರಿಸುವ ಶಕ್ತಿ ಅಂದಿನ ಸಚಿವ ಸಂಪುಟಕ್ಕೆ ಇರಲಿಲ್ಲ. ತುಂಬಾ ದುರ್ಬಲ ಸಚಿವ ಸಂಪುಟವಾಗಿತ್ತು. ಆ ಸಮಯದಲ್ಲಿ ಪ್ರಧಾನಿಗಳು ರಾಹುಲ್ ಮುಂದೆ ತಲೆಬಾಗಬಾರದಿತ್ತು ಎಂದು ಅವರು ಹೇಳಿದ್ದಾರೆ.

ಮೋದಿ ಹೊಗಳಿದ ಆಜಾದ್​: ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಲಾಮ್ ನಬಿ ಆಜಾದ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಮೋದಿ ಅವರು ದ್ವೇಷ ರಾಜಕಾರಣ ಮಾಡಲಿಲ್ಲ. ಮುತ್ಸದ್ಧಿಯಾಗಿ ನಡೆದುಕೊಂಡರು. ಹೆಚ್ಚಿನ ಬಾರಿ ರಾಹುಲ್​ ಗಾಂಧಿ ಕೇಳಿಸಿಕೊಂಡಿದ್ದಕ್ಕಿಂತ ನನ್ನ ಮಾತನ್ನು ಮೋದಿ ಅವರೇ ಆಲಿಸಿದ್ದಾರೆ. ಅವರಿಗೆ ಕೇಳಿಸಿಕೊಳ್ಳುವ ತಾಳ್ಮೆ ಇದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ತುಂಬಾ ಉದಾರಿ ವ್ಯಕ್ತಿಯಾಗಿದ್ದಾರೆ. ಆರ್ಟಿಕಲ್ 370, ಸಿಎಎ, ಹಿಜಾಬ್ ಸೇರಿದಂತೆ ಹಲವು ವಿಷಯಗಳಲ್ಲಿ ನಾನು ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದೇನೆ. ಮುತ್ಸದ್ದಿಯಾದ ಪ್ರಧಾನಿ ಮೋದಿ ಅವರು ದ್ವೇಷದ ರಾಜಕಾರಣ ಮಾಡಲಿಲ್ಲ ಎಂದರು.

ಓದಿ: ಮದ್ಯ ನೀತಿ ಹಗರಣ: ಇಂದು ಮನೀಶ್​​ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.