ETV Bharat / bharat

ಆರ್ಯನ್ ಖಾನ್​ಗೆ ಬೇಲ್ ನಿರಾಕರಣೆ: ಬಿಕ್ಕಿ ಬಿಕ್ಕಿ ಅತ್ತ ಅಮ್ಮ ಗೌರಿ ಖಾನ್

author img

By

Published : Oct 9, 2021, 12:28 PM IST

Updated : Oct 9, 2021, 1:08 PM IST

ಪುತ್ರ ಆರ್ಯನ್ ಖಾನ್​​ಗೆ ಜಾಮೀನು ಸಿಗದ ಕಾರಣದಿಂದಾಗಿ ತಾಯಿ ಗೌರಿ ಖಾನ್ ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Gauri Khan breaks down after rejection of Aryan khan bail see video
ಆರ್ಯನ್ ಖಾನ್​ಗೆ ಬೇಲ್ ನಿರಾಕರಣೆ: ಬಿಕ್ಕಿ ಬಿಕ್ಕಿ ಅತ್ತ ಗೌರಿ ಖಾನ್

ಮುಂಬೈ: ಕ್ರೂಸ್ ಶಿಪ್​​ನಲ್ಲಿ ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್​​ಗೆ ಜಾಮೀನು ಸಿಗದ ಕಾರಣದಿಂದಾಗಿ ತಾಯಿ ಗೌರಿ ಖಾನ್ ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯ ಕುರಿತು ವಕೀಲರು ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುತ್ತಿರುವ ಸಮಯದಲ್ಲಿ ಹೊರಗೆ ಕಾರಿನಲ್ಲಿ ಕುಳಿತಿದ್ದ ಗೌರಿ ಖಾನ್ ಜಾಮೀನು ನಿರಾಕರಿಸಿ ತೀರ್ಪು ಬಂದ ಕೂಡಲೇ ಕಣ್ಣೀರು ಹಾಕಿದ್ದನ್ನು ಪಾಪರಾಜಿಯೊಬ್ಬರು ಫೋಟೋ ತೆಗೆದು ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್​​ಟಾಗ್ರಾಮ್​ನಲ್ಲೂ ಕೆಲವರು ಹಂಚಿಕೊಂಡಿದ್ದಾರೆ.

ಗೌರಿ ಖಾನ್ ಅವರು ಅಳುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತೈಸಿದ್ದಾರೆ. ಶುಕ್ರವಾರ ಗೌರಿ ಖಾನ್ ಅವರ ಹುಟ್ಟುಹಬ್ಬವಾಗಿದ್ದು, ಇದೇ ವೇಳೆ ಆರ್ಯನ್ ಖಾನ್ ಜೈಲು ಸೇರಿರುವುದು ಕುಟುಂಬದ ಬೇಸರ ಹೆಚ್ಚಾಗಲು ಕಾರಣವಾಗಿದೆ.

ಇದನ್ನೂ ಓದಿ: ಯುವತಿ ವಿಚಾರಕ್ಕೆ ಯುವಕನ ಮರ್ಡರ್​: 8 ತಾಸಲ್ಲೇ ಮೂವರನ್ನು ವಶಕ್ಕೆ ಪಡೆದ ಪೊಲೀಸರು

Last Updated : Oct 9, 2021, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.