ETV Bharat / bharat

ಡೆಡ್ಲಿ ವೈರಸ್​​ ಕೋವಿಡ್​ಗೆ ಭೂಗತ ಪಾತಕಿ ಛೋಟಾ ರಾಜನ್ ಸ್ಥಿತಿ ಗಂಭೀರ

author img

By

Published : May 7, 2021, 4:18 PM IST

Updated : May 7, 2021, 4:56 PM IST

ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್​ಗೆ ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಏಮ್ಸ್​ ಇದನ್ನು ನಿರಾಕರಿಸಿದ್ದು, ತುರ್ತುಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ. ಏಪ್ರಿಲ್​ 27ರಂದು ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು.

Gangster Chhota Rajan
Gangster Chhota Rajan

  • ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್​ ಪರಿಸ್ಥಿತಿ ಗಂಭೀರವಾಗಿದೆ ಎಂದು ಏಮ್ಸ್​ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.
  • ಇದೇ ವೇಳೆ ಅವರ ಸಾವಿನ ವದಂತಿಯನ್ನ ಏಮ್ಸ್​ ಮೂಲಗಳು ತಳ್ಳಿ ಹಾಕಿವೆ. ​​​
  • ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೂಗತ ಪಾತಕಿ
  • ​ ಕಳೆದ ಕೆಲ ದಿನಗಳ ಹಿಂದೆ ಛೋಟಾ ರಾಜನ್​ಗೆ ಕೋವಿಡ್​ ದೃಢಪಟ್ಟಿತು
  • ತಿಹಾರ್ ಜೈಲಿನ ಅಧಿಕಾರಿಗಳು ಏಮ್ಸ್​ಗೆ ದಾಖಲು ಮಾಡಿದ್ದರು
  • 61ವರ್ಷದ ರಾಜನ್‌ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ನಂತರ ಆತನನ್ನು ಬಂಧಿಸಿ ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
  • ಮುಂಬೈನಲ್ಲಿ ಸುಲಿಗೆ ಮತ್ತು ಕೊಲೆಗೆ ಸಂಬಂಧಿಸಿದ 70 ಕ್ರಿಮಿನಲ್ ಪ್ರಕರಣಗಳನ್ನು ರಾಜನ್ ಎದುರಿಸುತ್ತಿದ್ದಾನೆ. 2018 ರಲ್ಲಿ ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
  • ಕೋವಿಡ್ ದೃಢಗೊಂಡಿದ್ದ ಕಾರಣ ದೆಹಲಿ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: ಭೂಗತ ಪಾತಕಿ ಛೋಟಾ ರಾಜನ್​ಗೆ ಕೊರೊನಾ ದೃಢ

Last Updated : May 7, 2021, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.