ETV Bharat / bharat

ಮರುಕಳಿಸಿದ ನಿರ್ಭಯಾ ಅತ್ಯಾಚಾರ.. ಬಸ್ಸಿನಲ್ಲೇ ಬಾಲಕಿಗೆ ಸಾರಾಯಿ ಕುಡಿಸಿ ಸಾಮೂಹಿಕ ಅತ್ಯಾಚಾರ!

author img

By

Published : Jun 8, 2022, 7:34 AM IST

Updated : Jun 8, 2022, 9:09 AM IST

ದೆಹಲಿಯ ನಿರ್ಭಯಾ ಪ್ರಕರಣದಂತಹ ಘಟನೆ ಬಿಹಾರದ ಪಶ್ಚಿಮ ಚಂಪಾರಣ್‌ನಲ್ಲಿ ನಡೆದಿದೆ. ಇಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

Gang Rape With Minor In Bettiah  Gang Rape In Bus in Bihar  Bihar Crime news  ಬೇತಿಯಾದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ  ಬಿಹಾರದಲ್ಲಿ ಬಸ್ಸಿನಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ  ಬಿಹಾರ ಅಪರಾಧ ಸುದ್ದಿ
ಮರುಕಳಿಸಿದ ನಿರ್ಭಯ ಅತ್ಯಾಚಾರ

ಬೇತಿಯಾ(ಬಿಹಾರ): ದೇಶದಲ್ಲಿ ನಿರ್ಭಯಾ ಘಟನೆಯಂತಹ ಅತ್ಯಾಚಾರಗಳು ಬೆಳಕಿಗೆ ಬರುತ್ತಲೇ ಇವೆ. ಇದರ ವಿರುದ್ಧ ಪೊಲೀಸ್​ ಇಲಾಖೆ ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಆರೋಪಿಗಳು ಮಾತ್ರ ತಮ್ಮ ದುರಾಭ್ಯಾಸ ಮುಂದುವರಿಸುತ್ತಲೇ ಇದ್ದಾರೆ. ನಿರ್ಭಯಾದಂತಹ ಅತ್ಯಾಚಾರವೊಂದು ಬಿಹಾರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಅಮಲು ಪದಾರ್ಥ ನೀಡಿ ಅತ್ಯಾಚಾರ: ಪಾಟ್ನಾಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೆಲ್ಪರ್​​ಬಸ್​​​​ನಲ್ಲಿ ಕೂರಿಸಿದ್ದಾನೆ. ನಂತರ ಬಸ್ ನಿಲ್ದಾಣದಿಂದ ಚಾಲಕ ಬಸ್ ಅನ್ನು ಬೈಪಾಸ್ ರಸ್ತೆಗೆ ತೆಗೆದುಕೊಂಡು ಹೋಗಿದ್ದಾನೆ. ಈ ಅನುಕ್ರಮದಲ್ಲಿ ಆರೋಪಿಗಳು ಬಾಲಕಿಗೆ ಪಾನೀಯದಲ್ಲಿ ಅಮಲು ಬೆರೆಸಿ ಕುಡಿಸಿದ್ದಾರೆ. ಬಾಲಕಿ ಪ್ರಜ್ಞೆ ತಪ್ಪಿದ ಬಳಿಕ ಬಸ್​​​​ನಲ್ಲೇ ಒಬ್ಬರು ಬಳಿಕ ಒಬ್ಬರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಓದಿ: ಬಾಲಕಿಯನ್ನು ಲಾಡ್ಜ್​​ಗೆ ಕರೆದ್ಯೊಯ್ದು ಅತ್ಯಾಚಾರ ಆರೋಪ: ಪ್ರಕರಣ ದಾಖಲು

ಬಸ್​​​​​​​ನೊಳಗೆ ಬೀಗ ಹಾಕಿ ಆರೋಪಿಗಳು ಪರಾರಿ: ಅತ್ಯಾಚಾರದ ಬಳಿಕ ಕಂಡಕ್ಟರ್​, ಚಾಲಕ ಮತ್ತು ಹೆಲ್ಪರ್​​ ಸಂತ್ರಸ್ತೆಯನ್ನು ಬಸ್​​​ನಲ್ಲಿಟ್ಟು ಬೀಗ ಹಾಕಿ ಪರಾರಿಯಾಗಿದ್ದಾರೆ. ಬಾಲಕಿಗೆ ಪ್ರಜ್ಞೆ ಬಂದಾಗ ಒಳಗಿನಿಂದ ಬಸ್‌ನ ಬಾಗಿಲು ಬಡಿದಿದ್ದಾಳೆ. ಈ ವೇಳೆ, ದಾರಿಹೋಕರು ಬಸ್‌ನ ಬಾಗಿಲು ತೆರೆದು ಸ್ಥಳೀಯ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ನನಗೆ ಸಾರಾಯಿ ಕುಡಿಸಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿ ದೂರು ನೀಡಿದ್ದಾರೆ.

ಇಬ್ಬರು ಆರೋಪಿಗಳ ಬಂಧನ: ಸದ್ಯ ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಇಡೀ ಬೇತಿಯಾದಲ್ಲಿ ತಲ್ಲಣ ಮೂಡಿಸಿದೆ. ಸದ್ಯ ಪೊಲೀಸರು ಹೆಲ್ಪರ್​​ ಹಾಗೂ ಕಂಡಕ್ಟರ್​ನನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇತಿಯಾ ಬಸ್ ನಿಲ್ದಾಣದಲ್ಲಿ ಹಗಲಿನಲ್ಲಿ ಇಂತಹ ಘಟನೆ ನಡೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.

Last Updated :Jun 8, 2022, 9:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.