ETV Bharat / bharat

ಗಣೇಶ ಚತುರ್ಥಿ 2022: ಈ ಐದು ವಿಶಿಷ್ಟ ಗಣಪ ಮೂರ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು?

author img

By

Published : Aug 31, 2022, 10:22 AM IST

ಗಣೇಶ ಚತುರ್ಥಿ 2022 ವೇಳೆ ಗಣಪತಿಯನ್ನು ಎಲ್ಲ ರೀತಿಯ ವಸ್ತುಗಳಲ್ಲಿ ತಯಾರಿಸಿ ಪೂಜಿಸಲಾಗುತ್ತಿದೆ. ಉದಾಹರಣೆಗೆ ಹುಲ್ಲು, ಇಟ್ಟಿಗೆ, ತರಕಾರಿ, ಕಲ್ಲು ಹೀಗೆ ಅನೇಕ ರೀತಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಆದರೆ, ಅವೆಲ್ಲಾ ಇತ್ತೀಚೆಗೆ ಬಂದ ಬೆಳವಣಿಗೆಗಳು. ಪುಣೆಯಲ್ಲಿ ದಶಕಗಳ ಕಾಲದಿಂದ ಕೆಲ ಗಣಪತಿ ಮೂರ್ತಿಗಳಿಗೆ ವಿಶಿಷ್ಟ ರೀತಿಯಲ್ಲಿ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಅವುಗಳ ಬಗ್ಗೆ ತಿಳಿಯೋಣಾ ಬನ್ನಿ..

Ganesh Chaturthi 2022, History and Culture about Ganeshotsav, Ganesh Chaturthi Puja, Ganeshotsav Celebration, ಗಣೇಶ ಚತುರ್ಥಿ 2022, ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ, ಗಣೇಶ ಚತುರ್ಥಿಯ ಪೂಜೆ, ಗಣೇಶೋತ್ಸವ ಆಚರಣೆ
ಗಣೇಶ ಚತುರ್ಥಿ 2022

ಪುಣೆ, ಮಹಾರಾಷ್ಟ್ರ: ಗೌರಿ ಗಣೇಶ ಹಬ್ಬ ಬಂದ್ರೆ ಸಾಕು ಭಾರತದಲ್ಲಿ ಭಾರೀ ಸಡಗರ. ಎಲ್ಲೆಡೆ ಗಣೇಶನ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡಿ ಪೂಜೆ ಮಾಡುತ್ತಾರೆ. ಕಳೆದ ವರ್ಷ ಕೊರೊನಾ ಕಾರಣದಿಂದ ಈ ಹಬ್ಬವನ್ನು ಅಷ್ಟಾಗಿ ಸಂಭ್ರಮದಿಂದ ಆಚರಿಸಲಾಗದಿದ್ದರೂ ಗಣಪನಿಗೆ ನಿಯಮಾನುಸಾರ ಏನು ಸಲ್ಲಿಸಬೇಕೋ ಅದನ್ನು ಭಕ್ತರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಇನ್ನು ಪುಣೆಯಲ್ಲಿ ಐದು ವಿಶಿಷ್ಟ ಗಣಪಗಳನ್ನು ದಶಕಗಳ ಕಲಾದಿಂದಲೂ ಪೂಜಿಸುತ್ತಾ ಬರುತ್ತಿದ್ದಾರೆ ಆ ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಮಾಹಿತಿ ಇಲ್ಲಿದೆ..

ಕಸಬಾ ಗಣಪತಿ: ಕಸಬ ಗಣಪತಿಯನ್ನು ಪುಣೆಯ ಗ್ರಾಮ ದೇವತೆ ಎಂದು ಕರೆಯಲಾಗುತ್ತದೆ. ಈ ಕಸಬ ಗಣಪತಿಯ ದೇವಸ್ಥಾನವು ಛತ್ರಪತಿ ಶಿವಾಜಿ ಮಹಾರಾಜರ ಕಾಲದ್ದು ಎಂದು ಹೇಳಲಾಗುತ್ತದೆ. 1893 ರಲ್ಲಿ ಸಾರ್ವಜನಿಕ ಗಣೇಶೋತ್ಸವ ಆರಂಭವಾಯಿತು. ಅಂದಿನಿಂದ ಈ ಗಣಪತಿಯನ್ನು ಮೊದಲ ಗಣಪತಿ ಎಂದು ಕರೆಯಲಾಗುತ್ತದೆ. ಪುಣೆಯ ನಿಮಜ್ಜನ ಮೆರವಣಿಗೆ ಈ ಗಣಪತಿ ಮೂರ್ತಿಯಿಂದಲೇ ಆರಂಭವಾಗುತ್ತದೆ.

Ganesh Chaturthi 2022, History and Culture about Ganeshotsav, Ganesh Chaturthi Puja, Ganeshotsav Celebration, ಗಣೇಶ ಚತುರ್ಥಿ 2022, ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ, ಗಣೇಶ ಚತುರ್ಥಿಯ ಪೂಜೆ, ಗಣೇಶೋತ್ಸವ ಆಚರಣೆ
ಕಸಬಾ ಗಣಪತಿ

ತಂಬಡಿ ಜೋಗೇಶ್ವರಿ ಗಣಪತಿ: ಕಸಬ ಗಣಪತಿಯಂತೆ, ತಂಬಡಿ ಜೋಗೇಶ್ವರಿ ಗಣೇಶೋತ್ಸವ 1893 ರಿಂದ ಆರಂಭವಾಯಿತು. ತಂಬಡಿ ಜೋಗೇಶ್ವರಿ ಗಣಪನನ್ನೂ ಸಹ ಪುಣೆಯ ಗ್ರಾಮ ದೇವತೆ ಎಂದು ಕರೆಯುತ್ತಾರೆ.

Ganesh Chaturthi 2022, History and Culture about Ganeshotsav, Ganesh Chaturthi Puja, Ganeshotsav Celebration, ಗಣೇಶ ಚತುರ್ಥಿ 2022, ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ, ಗಣೇಶ ಚತುರ್ಥಿಯ ಪೂಜೆ, ಗಣೇಶೋತ್ಸವ ಆಚರಣೆ
ತಂಬಡಿ ಜೋಗೇಶ್ವರಿ ಗಣಪತಿ

ಗುರೂಜಿ ತಲೀಂ ಗಣಪಾಣಿ: ಶ್ರೀ ಗುರೂಜಿ ತಲೀಂ ಗಣಪತಿಯನ್ನು ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವೆಂದು ಕರೆಯಲಾಗುತ್ತದೆ. ಲೋಕಮಾನ್ಯ ತಿಲಕರು ಗಣೇಶೋತ್ಸವವನ್ನು ಆರಂಭಿಸುವ ಮೊದಲು, ಇದನ್ನು ಗಣಪತಿ ತಾಳಿಂನಲ್ಲಿ ಸ್ಥಾಪಿಸಲಾಗಿತ್ತು. ಭಿಕು ಶಿಂಧೆ, ನಾನಾಸಾಹೇಬ್ ಖಾಸ್ಗಿವಾಲೆ, ಶೇಖ್ ಕಸಮ್ ವಲ್ಲದ್ ಈ ಸೌಹಾರ್ದಯುತ ಹಬ್ಬಕ್ಕೆ ಅಡಿಪಾಯ ಹಾಕಿದವರು.

Ganesh Chaturthi 2022, History and Culture about Ganeshotsav, Ganesh Chaturthi Puja, Ganeshotsav Celebration, ಗಣೇಶ ಚತುರ್ಥಿ 2022, ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ, ಗಣೇಶ ಚತುರ್ಥಿಯ ಪೂಜೆ, ಗಣೇಶೋತ್ಸವ ಆಚರಣೆ
ಗುರೂಜಿ ತಲೀಂ ಗಣಪಾಣಿ

ತುಳಸಿಬೌಗ್ ಗಣಪತಿ: ಈ ಗಣೇಶೋತ್ಸವವನ್ನು ದಕ್ಷಿತ್ ತುಳಸಿಬಾಗವಾಲೆ 1900 ರಲ್ಲಿ ಆರಂಭಿಸಿದರು. ಇನ್ನು ಇದನ್ನು ಹಿರಿಯ ಶಿಲ್ಪಿ ಡಿ. ಎಸ್. ಖಟವ್ಕರ್ ಅವರು ಹಲವು ವರ್ಷಗಳಿಂದ ಈ ಅಲಂಕರಿಕೊಂಡು ಬಂದಿದ್ದಾರೆ. ತುಳಸಿಬಾಗ್ ಗಣಪತಿಯ ಮೂರ್ತಿಯನ್ನು ಫೈಬರ್​ನಿಂದ ಮಾಡಲಾಗಿದೆ. ಈ ಗಣಪತಿ ವಿಗ್ರಹ ತನ್ನ ಅತ್ಯುತ್ತಮ ನೋಟಕ್ಕೆ ಪ್ರಸಿದ್ಧವಾಗಿದೆ.

Ganesh Chaturthi 2022, History and Culture about Ganeshotsav, Ganesh Chaturthi Puja, Ganeshotsav Celebration, ಗಣೇಶ ಚತುರ್ಥಿ 2022, ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ, ಗಣೇಶ ಚತುರ್ಥಿಯ ಪೂಜೆ, ಗಣೇಶೋತ್ಸವ ಆಚರಣೆ
ತುಳಸಿಬೌಗ್ ಗಣಪತಿ

ಕೇಸರಿ ಗಣಪತಿ: ಕೇಸರಿ ವಾಡದಲ್ಲಿರುವ ಗಣಪತಿಯನ್ನು ಪುಣೆಯ ಕೊನೆಯ ಮತ್ತು ಐದನೆಯ ಗಣಪತಿ ಎಂದು ಕರೆಯಲಾಗುತ್ತದೆ. 1905 ರಿಂದ ತಿಲಕವಾಡದಲ್ಲಿ ಗಣೇಶನ ಆಚರಣೆ ಆರಂಭವಾಯಿತು. ಅಂದಿನಿಂದ ಈ ರೀತಿಯ ಗಣಪನನ್ನು ಪೂಜಿಸಿಕೊಂಡು ಬರಲಾಗುತ್ತಿದೆ ಹಾಗೆ ಲೋಕಮಾನ್ಯ ತಿಲಕರು ಗಣಪತಿ ಉತ್ಸವದಲ್ಲಿ ಈ ಗಣಪನ ಬಗ್ಗೆ ಉಪನ್ಯಾಸ ಕೂಡ ನೀಡುತ್ತಿದ್ದರು.

Ganesh Chaturthi 2022, History and Culture about Ganeshotsav, Ganesh Chaturthi Puja, Ganeshotsav Celebration, ಗಣೇಶ ಚತುರ್ಥಿ 2022, ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ, ಗಣೇಶ ಚತುರ್ಥಿಯ ಪೂಜೆ, ಗಣೇಶೋತ್ಸವ ಆಚರಣೆ
ಕೇಸರಿ ಗಣಪತಿ

ಇಷ್ಟೇ ಅಲ್ಲ ಭಿನ್ನ ವಿಭಿನ್ನವಾದ ಗಣಪನ ಮೂರ್ತಿಯನ್ನು ನಮ್ಮಲ್ಲಿ ಪೂಜಿಸಲಾಗುತ್ತಿದೆ. ಕಳೆದ ವರ್ಷ ಕೂಡ ಕೊರೊನಾ ಗಣಪ, ವೈದ್ಯ ಗಣಪ, ಯೋಧಗಣಪ ಸೇರಿದಂತೆ ಹಲವಾರು ಗಣಪನ ವಿಗ್ರಹಗಳನ್ನು ಪೂಜಿಸಲಾಗಿತ್ತು. ಈ ಬಾರಿ ಕೊರೊನಾ ಕಠಿಣ ನಿಯಮದಿಂದಾಗಿ ಅಷ್ಟಾಗಿ ಭಿನ್ನ ವಿಭಿನ್ನವಾದ ಗಣಪನ ಮೂರ್ತಿಗಳು ಕಂಡುಬರುತ್ತಿಲ್ಲ.

ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ : ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.