ETV Bharat / bharat

G20 ಶೃಂಗಸಭೆ: ಗಮನ ಸೆಳೆದ ಯುಕೆ ಪ್ರಧಾನಿ ಸುನಕ್, ಪ್ರಧಾನಿ ಮೋದಿ ಭೇಟಿ

author img

By

Published : Nov 15, 2022, 1:32 PM IST

ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಭಾರತದ ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದ್ದು, ಸುನಕ್ ಹಾಗೂ ಮೋದಿ ಜೊತೆಗಿರುವ ಫೋಟೊ ಶೇರ್ ಮಾಡಿದೆ.

G20 ಶೃಂಗ: ಯುಕೆ ಪ್ರಧಾನಿ ಸುನಕ್, ಪ್ರಧಾನಿ ಮೋದಿ ಭೇಟಿ
G20 Summit: UK PM Sunak meets PM Modi

ಬಾಲಿ (ಇಂಡೋನೇಷ್ಯಾ): ಇಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಮಂಗಳವಾರ ಯುಕೆ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಅನೌಪಚಾರಿಕ ಸಂವಾದ ನಡೆಸಿದರು. ಇಬ್ಬರೂ ನಾಯಕರು ಹಲವಾರು ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ರಿಷಿ ಸುನಕ್ ಕಳೆದ ತಿಂಗಳು ಯುಕೆ ಪ್ರಧಾನಿಯಾದ ನಂತರ ಇದು ಪ್ರಧಾನಿ ಮೋದಿ ಅವರೊಂದಿಗೆ ಪ್ರಥಮ ಭೇಟಿಯಾಗಿದೆ.

ಭಾರತವು ಡಿಸೆಂಬರ್ 1, 2022 ರಿಂದ ಒಂದು ವರ್ಷ ಕಾಲ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಜಿ20 ಶೃಂಗವು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಹೀಗೆ 19 ದೇಶಗಳನ್ನು ಒಳಗೊಂಡಿದೆ.

ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಭಾರತದ ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದ್ದು, ಸುನಕ್ ಹಾಗೂ ಮೋದಿ ಜೊತೆಗಿರುವ ಫೋಟೊ ಶೇರ್ ಮಾಡಿದೆ.

ಇದನ್ನೂ ಓದಿ: ಹಲೋ ವಿಜಯ್​ ಮಾಮ: ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ವಿಡಿಯೋ ಕಾಲ್​ ಚಾಟಿಂಗ್​.. ಯಾರೀ ಮಾಮಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.