ETV Bharat / bharat

ಸೋನಿಯಾಗೆ ಪತ್ರ ಬರೆದು ಕಾಂಗ್ರೆಸ್‌ಗೆ ಅಮರೀಂದರ್‌ ಸಿಂಗ್‌ ಗುಡ್‌ ಬೈ; ಹೊಸ ಪಕ್ಷದ ಹೆಸರು ಘೋಷಣೆ

author img

By

Published : Nov 2, 2021, 5:54 PM IST

ಕಾಂಗ್ರೆಸ್‌ ಪಕ್ಷಕ್ಕೆ ಇಂದು ಅಧಿಕೃತವಾಗಿ ರಾಜೀನಾಮೆ ನೀಡಿರುವ ಪಂಜಾಬ್‌ ಮಾಜಿ ಸಿಎಂ ಅಮರೀಂದರ್‌ ಸಿಂಗ್‌, ತಮ್ಮ ಹೊಸ ಪಕ್ಷದ ಹೆಸರನ್ನು ಕೂಡಾ ಘೋಷಿಸಿದ್ದಾರೆ.

Former Punjab CM Captain Amarinder Singh resigns from Congress party in a letter to Sonia Gandhi
ಕಾಂಗ್ರೆಸ್‌ಗೆ ಅಧಿಕೃತವಾಗಿ ಕ್ಯಾ.ಅಮರೀಂದರ್‌ ಸಿಂಗ್‌ ಗುಡ್‌ ಬೈ; ಹೊಸ ಪಕ್ಷದ ಹೆಸರು ಘೋಷಣೆ

ಚಂಡೀಗಢ(ಪಂಜಾಬ್‌): ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಏಳು ಪುಟಗಳ ರಾಜೀನಾಮೆ ಪತ್ರ ಬರೆದು ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ, ಕಾರಣಗಳನ್ನೂ ಪತ್ರದಲ್ಲಿ ವಿವರಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಿಸುವ ಕಾಂಗ್ರೆಸ್ ನಿರ್ಧಾರದ ಬಗ್ಗೆ ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದರು. ಮುಂದೊಂದು ದಿನ ಕಾಂಗ್ರೆಸ್ ಹೈಕಮಾಂಡ್ ತನ್ನ ನಿರ್ಧಾರಕ್ಕೆ ವಿಷಾದಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

  • I have today sent my resignation to @INCIndia President Ms Sonia Gandhi ji, listing my reasons for the resignation.

    ‘Punjab Lok Congress’ is the name of the new party. The registration is pending approval with the @ECISVEEP. The party symbol will be approved later. pic.twitter.com/Ha7f5HKouq

    — Capt.Amarinder Singh (@capt_amarinder) November 2, 2021 " class="align-text-top noRightClick twitterSection" data=" ">

ಪಂಜಾಬ್‌ ಲೋಕ್ ಕಾಂಗ್ರೆಸ್‌ ಪಕ್ಷ

ಇದೇ ವೇಳೆ ತಮ್ಮ ಹೊಸ ಪಕ್ಷಕ್ಕೆ 'ಪಂಜಾಬ್‌ ಲೋಕ್‌ ಕಾಂಗ್ರೆಸ್‌' ಎಂದು ಹೆಸರಿಟ್ಟಿದ್ದಾರೆ. ಪಕ್ಷದ ನೋಂದಣಿ ಬಾಕಿ ಇದ್ದು, ಚುನಾವಣೆ ಆಯೋಗ ಅನುಮೋದನೆ ನೀಡಬೇಕಿದೆ. ಪಕ್ಷದ ಚಿಹ್ನೆಯನ್ನು ಕೆಲವೇ ದಿನಗಳಲ್ಲಿ ಪಡೆಯುವುದಾಗಿ ಅಮರೀಂದರ್‌ ಸಿಂಗ್‌ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.