ETV Bharat / bharat

ದೆಹಲಿ ಅಧಿಕಾರಿಗಳ ಮೇಲಿನ ನಿಯಂತ್ರಣ ವಿಧೇಯಕ ವಿಚಾರ: ಇಂದು ಇಂಡಿಯಾ ಮಹತ್ವದ ಸಭೆ

author img

By

Published : Aug 7, 2023, 8:06 AM IST

ದೆಹಲಿ ಆಡಳಿತ ಸೇವೆಗಳ ಮೇಲಿನ ನಿಯಂತ್ರಣ ವಿಧೇಯಕವನ್ನು ಕೇಂದ್ರ ಸರ್ಕಾರ ಇಂದು ರಾಜ್ಯಸಭೆಯಲ್ಲಿ ಮಂಡಿಸಲಿದೆ. ಈ ವಿಧೇಯಕವನ್ನು ಇಂಡಿಯಾ ಒಕ್ಕೂಟ ವಿರೋಧಿಸಿದ್ದು, ಈ ಸಂಬಂಧ ಚರ್ಚಿಸಲು ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ.

floor-leaders-of-india-to-meet-rajya-sabha-lop-in-parliament
ದೆಹಲಿ ಅಧಿಕಾರಿಗಳ ಮೇಲಿನ ನಿಯಂತ್ರಣ ವಿಧೇಯಕ ವಿಚಾರ: ಇಂದು ಇಂಡಿಯಾ ಮಹತ್ವದ ಸಭೆ

ನವದೆಹಲಿ: ದೆಹಲಿ ಆಡಳಿತ ಸೇವೆಗಳ ಅಧಿಕಾರಿಗಳ ಮೇಲಿನ ನಿಯಂತ್ರಣ ಮಾಡುವ ಕೇಂದ್ರ ಸುಗ್ರೀವಾಜ್ಞೆ ಆದೇಶಕ್ಕೆ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರ ಪಡೆದಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ವಿಧೇಯಕವನ್ನು ಪ್ರತಿಪಕ್ಷಗಳ ಒಕ್ಕೂಡ ಇಂಡಿಯಾ ವಿರೋಧಿಸಿದೆ. ಈ ಸಂಬಂಧ ಚರ್ಚಿಸಲು ಇಂಡಿಯಾ ಒಕ್ಕೂಟದ ನಾಯಕರು ಇಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದಲ್ಲಿ I.N.D.I.A ನಾಯಕರ ಸಭೆ ನಡೆಯಲಿದೆ. ದೆಹಲಿಯ ಅಧಿಕಾರಶಾಹಿ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣವನ್ನು ದೃಢೀಕರಿಸುವ ಸುಗ್ರೀವಾಜ್ಞೆ ಆದೇಶಕ್ಕೆ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಇಂದು ರಾಜ್ಯಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಿಧೇಯಕವನ್ನು ಮೇಲ್ಮನೆಯಲ್ಲಿ ಮಂಡಿಸಲಿದ್ದಾರೆ.

ಆದರೆ ಈ ವಿಧೇಯಕವನ್ನು ವಿರೋಧಿಸುವುದಾಗಿ ಪ್ರತಿಪಕ್ಷದ ಸಂಸದರು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಎಪಿ ಸಚಿವ ಗೋಪಾಲ್ ರೈ, ವಿರೋಧ ಪಕ್ಷಗಳು ಒಟ್ಟಾಗಿ ಈ ಮಸೂದೆಯನ್ನು ವಿರೋಧಿಸುತ್ತವೆ ಎಂದು ಘೋಷಿಸಿದ್ದಾರೆ. "ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ಹಕ್ಕುಗಳನ್ನು ಬಲವಂತವಾಗಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಎಲ್ಲಾ ಪ್ರತಿ ಪಕ್ಷಗಳು ಒಟ್ಟಾಗಿ ನಾಳೆ ಈ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸುತ್ತವೆ " ಎಂದು ರೈ ಭಾನುವಾರ ಹೇಳಿದ್ದಾರೆ.

ವಿಪ್​ ಜಾರಿಗೊಳಿಸಿದ ಕಾಂಗ್ರೆಸ್​: "ಈ ವಿಧೇಯಕದ ಬಗ್ಗೆ ಇಂಡಿಯಾ ಒಕ್ಕೂಟವು ಸ್ಪಷ್ಟ ನಿಲುವು ಹೊಂದಿದೆ, ನಾವು ಕೇಂದ್ರದ ವಿಧೇಯಕವನ್ನು ವಿರೋಧಿಸುತ್ತೇವೆ" ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ. ವಿಶೇಷವೆಂದರೆ, ಕಾಂಗ್ರೆಸ್ ಪಕ್ಷವು ತನ್ನ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದ್ದು, ಸೋಮವಾರ ರಾಜ್ಯಸಭೆಯಲ್ಲಿ ಹಾಜರಿರಬೇಕು ಎಂದು ಒತ್ತಾಯಿಸಿದೆ.

’’ಆಗಸ್ಟ್ 7, 2023 ರಂದು ರಾಜ್ಯಸಭೆಯಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಭಾನುವಾರ ಹೊರಡಿಸಿರುವ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು 2023ರ ಆಗಸ್ಟ್ 7ರ ಸೋಮವಾರದಂದು ಸದನವನ್ನು ಮುಂದೂಡುವವರೆಗೆ 11ಗಂಟೆಯಿಂದ ಸದನದಲ್ಲಿ ತಪ್ಪದೇ ಹಾಜರಿರಬೇಕು ಮತ್ತು ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ತಾನು ಹೊರಡಿಸಿರುವ ಅಧಿಸೂಚನೆಯಲ್ಲಿ ವಿನಂತಿಸಿಕೊಂಡಿದೆ.

ಇದನ್ನು ಓದಿ:Opposition Name INDIA Case: 26 ವಿಪಕ್ಷಗಳು ಸೇರಿದಂತೆ ಚುನಾವಣಾ ಆಯೋಗ & ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.