ETV Bharat / bharat

ಚೂಪಾದ ಕೊಕ್ಕೆಯಿಂದ ಚುಚ್ಚಿ ಮೀನುಗಾರನ ಬಲಿ ಪಡೆದ Black Marlin ಮೀನು!

author img

By

Published : Feb 3, 2022, 10:00 AM IST

Updated : Feb 3, 2022, 10:10 AM IST

ದುರಂತ ಘಟನೆಯೊಂದರಲ್ಲಿ ಕೊಮ್ಮು ಕೋಣಂ (Black Marlin) ಮೀನೊಂದು ತನ್ನ ಚೂಪಾದ ಕೊಕ್ಕೆಯಿಂದ ಮೀನುಗಾರನ ಹೊಟ್ಟೆಗೆ ಚುಚ್ಚಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

Fisherman dies after being stabbed by Black Marlin fish  Kommu Konam fish  ಬ್ಲ್ಯಾಕ್​ ಮರ್ಲಿನ್​ ಮೀನು ಚುಚ್ಚಿ ಮೀನುಗಾರರ ಸಾವು  ಮೀನುಗಾರನಿಗೆ ಚುಚ್ಚಿದ ಬ್ಲ್ಯಾಕ್​ ಮರ್ಲಿನ್​ ಫಿಶ್​ ಕೊಮ್ಮು ಕೋಣಂ ಮೀನು  ಗರಗಸ ಮೀನು  ವಿಶಾಖಪಟ್ಟಣದಲ್ಲಿ ಮೀನುಗಾರನಿಗೆ ಚುಚ್ಚಿದ ಮೀನು
ಚೂಪಾದ ಚಾಕುವಂತಹ ಕೊಕ್ಕೆಯಿಂದ ಮೀನುಗಾರನನ್ನು ಬಲಿ ಪಡೆದ Black Marlin Fish

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಕೊಮ್ಮು ಕೋಣಂ (Black Marlin) ಮೀನೊಂದು ಮೀನುಗಾರನ ಹೊಟ್ಟೆಗೆ ಇರಿದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ವಿಶಾಖಪಟ್ಟಣದ ಪರವಾಡ ಮಂಡಲದ ಜಲರಿಪೇಟ ನಿವಾಸಿ ಎನ್ ಜೋಗಣ್ಣ ಎಂದು ಗುರುತಿಸಲಾಗಿದೆ.

ಬುಧವಾರ ವಿಶಾಖಪಟ್ಟಣಂನಿಂದ ಸುಮಾರು 90 ಕಿ.ಮೀ. ದೂರದ ಮುತ್ಯಾಲಮ್ಮಪಾಲೆಂ ಕರಾವಳಿಯ ಆಳ ಸಮುದ್ರದಲ್ಲಿ ಮೀನುಗಾರ ಮೀನುಗಾರಿಕೆಗೆ ತೆರಳಿದ್ದಾರೆ. ಮೀನುಗಾರ ಬಲೆಯಲ್ಲಿ ಸುಮಾರು 70-80 ಕೆಜಿ ತೂಕದ ಮಾರ್ಲಿನ್ ಫಿಶ್​ ಸಿಲುಕೊಂಡಿದೆ.

ಓದಿ: ಪೆಗಾಸಸ್​ ಸಂಬಂಧ ದೇಶದ ಮಾನ ಕಳೆದಿದ್ದೀರಿ.. ನ್ಯೂಯಾರ್ಕ್​​​​​​ ಟೈಮ್ಸ್​ಗೆ 100 ಕೋಟಿ ರೂ. ಲೀಗಲ್​ ನೋಟಿಸ್ ಕಳುಹಿಸಿದ ತಮಿಳುನಾಡು ವಕೀಲ​

ಮೀನುಗಳನ್ನು ದೋಣಿಗೆ ಎಳೆಯಲು ಸಾಧ್ಯವಾಗದ ಕಾರಣ ಜೋಗಣ್ಣ ತಕ್ಷಣವೇ ಜಲಚರವನ್ನು ಸಾಗಿಸಲು ಸಮುದ್ರಕ್ಕೆ ಹಾರಿದ್ದಾರೆ. ಮೀನುಗಳನ್ನು ದೋಣಿಗೆ ಸಾಗಿಸುವ ಬರದಲ್ಲಿ ಬ್ಲ್ಯಾಕ್​ ಮಾರ್ಲಿನ್​ ಫಿಶ್​ ತನ್ನ ಚೂಪಾದ ಕೊಕ್ಕೆಯಿಂದ ಮೀನುಗಾರನ ಹೊಟ್ಟೆಗೆ ಚುಚ್ಚಿದೆ.

ಮೀನು ಚುಚ್ಚಿದ ರಭಸಕ್ಕೆ ಜೋಗಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಮೀನು ಸಮುದ್ರದೊಳಗೆ ಹೋಗಿದೆ. ಜೋಗಣ್ಣನ ಶವವನ್ನು ದಡಕ್ಕೆ ತರಲಾಯಿತು. ತದನಂತರ ಮರಣೋತ್ತರ ಪರೀಕ್ಷೆಗಾಗಿ ಜೋಗಣ್ಣನ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 3, 2022, 10:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.