ETV Bharat / bharat

Fire in Train: ಒಡಿಶಾದ ದುರ್ಗ್-ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ - ಆತಂಕಗೊಂಡು ಟ್ರೈನ್​ನಿಂದ ಇಳಿದು ಹೊರಬಂದ ಪ್ರಯಾಣಿಕರು

author img

By

Published : Jun 9, 2023, 7:04 AM IST

Updated : Jun 9, 2023, 7:45 AM IST

Fire in Durg - Puri Express : ಒಡಿಶಾದ ಬಾಲಸೋರ್​​​ನಲ್ಲಿ ನಡೆದ ಭೀಕರ ರೈಲು ದುರಂತದ ಬೆನ್ನಲ್ಲೇ ನಿನ್ನೆ ನುವಾಪಾದ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ದುರ್ಗ್ - ಪುರಿ ಎಕ್ಸ್‌ಪ್ರೆಸ್‌ ರೈಲಿನ B3 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

fire in durg puri express train
ದುರ್ಗ್ ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ

ದುರ್ಗ್-ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ

ಭುವನೇಶ್ವರ್ : ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ನಿನ್ನೆ ಸಂಚರಿಸುತ್ತಿದ್ದ ದುರ್ಗ್ - ಪುರಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಕೆಲಕಾಲ ಭಯಭೀತರಾದ ಘಟನೆ ಜರುಗಿತು ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಿನ್ನೆ ಸಂಜೆ ಖರಿಯಾರ್ ರಸ್ತೆ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ B3 ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ಘರ್ಷಣೆ ಮತ್ತು ಬ್ರೇಕ್‌ಗಳ ಅಪೂರ್ಣ ಬಿಡುಗಡೆಯಿಂದಾಗಿ ಬ್ರೇಕ್ ಪ್ಯಾಡ್‌ಗಳಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಯಾವುದೇ ಹಾನಿಯಾಗಿಲ್ಲ. ಒಂದು ಗಂಟೆಯೊಳಗೆ ಸಮಸ್ಯೆ ಸರಿಪಡಿಸಲಾಗಿದ್ದು, ಬಳಿಕ ರಾತ್ರಿ 11 ಗಂಟೆಗೆ ನಿಲ್ದಾಣದಿಂದ ರೈಲು ಹೊರಟಿತು ಎಂದು ಪೂರ್ವ ಕರಾವಳಿ ರೈಲ್ವೆ ಹೇಳಿದೆ.

ಇನ್ನು ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕೆಲ ಪ್ರಯಾಣಿಕರು ಆತಂಕಗೊಂಡು ರೈಲಿನಿಂದ ಇಳಿದು ಹೊರಬಂದ ದೃಶ್ಯ ಕಂಡು ಬಂದಿತು.

ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು : ಕಳೆದ ಎರಡು ದಿನಗಳ ಹಿಂದಷ್ಟೇ (ಜೂನ್​ 7 ರಂದು) ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಿಟೋನಿ ರೈಲು ನಿಲ್ದಾಣದ ಬಳಿ ಎಲ್‌ಪಿಜಿ ತುಂಬಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದವು. ಗೂಡ್ಸ್ ರೈಲು ಮುಖ್ಯ ಗೇಟ್ ಬಳಿ ತಲುಪಿದ ಬಳಿಕ ಎರಡು ಬೋಗಿಗಳು ಹಳಿತಪ್ಪಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದರು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಇದನ್ನೂ ಓದಿ : ಮತ್ತೊಂದು ರೈಲು ದುರಂತ : ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಹಳಿತಪ್ಪಿದ ಗೂಡ್ಸ್ ರೈಲಿನ 2 ಬೋಗಿಗಳು

ಬಾಲಸೋರ್‌ ಭೀಕರ ರೈಲು ದುರಂತ : ಇನ್ನು ದೇಶವನ್ನೇ ಬೆಚ್ಚಿಬೀಳಿಸಿದ್ದ ಬಾಲಸೋರ್‌ನ ಬಹನಾಗಾ ರೈಲು ದುರಂತದಲ್ಲಿ ಬರೋಬ್ಬರಿ 275ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಶಾಲಿಮಾರ್ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್​ ರೈಲು ಪಕ್ಕದಲ್ಲಿ ನಿಂತಿದ್ದ ಸರಕು ಸಾಗಾಣಿಕ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ, ಹಳಿ ತಪ್ಪಿದ ಕೆಲ ಬೋಗಿಗಳು ಪಕ್ಕದ ಟ್ರಾಕ್​ಗೆ ಬಿದ್ದಿದ್ದವು. ಇದೇ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ಹೌರಾ ಎಕ್ಸ್​​ಪ್ರೆಸ್​​​​​​​​​ ಸಹ ಹಳಿ ತಪ್ಪಿತ್ತು. ಈ ಘಟನೆಯಲ್ಲಿ 1,100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ : ಒಡಿಶಾದಲ್ಲಿ ಮತ್ತೊಂದು ದುರಂತ: ಗೂಡ್ಸ್ ರೈಲು ಹರಿದು​ 6 ಕಾರ್ಮಿಕರು ಸಾವು

ಹಳಿ ತಪ್ಪಿದ ಗೂಡ್ಸ್​ ರೈಲು : ಮತ್ತೊಂದೆಡೆ, ಜೂನ್​ 5 ರಂದು ಒಡಿಶಾದ ಬಾರ್ಗಢ ಜಿಲ್ಲೆಯ ಮೆಂಧಪಾಲಿ ಬಳಿ ಗೂಡ್ಸ್ ರೈಲಿನ ಐದು ಬೋಗಿಗಳು ಹಳಿತಪ್ಪಿದ ಘಟನೆ ಜರುಗಿತ್ತು. ಸುಣ್ಣದಕಲ್ಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಹಲವಾರು ವ್ಯಾಗನ್‌ಗಳು ಬಾರ್ಗಢನಲ್ಲಿ ಹಳಿ ತಪ್ಪಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಹ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

Last Updated : Jun 9, 2023, 7:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.