ETV Bharat / bharat

ಆಂಧ್ರಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್​ಗೆ ಬೆಂಕಿ.. ಸುಟ್ಟುಕರಕಲಾದ ವಾಹನ, ಪ್ರಯಾಣಿಕರು ಪಾರು

Bus fire in Andhra Pradesh: ಖಾಸಗಿ ಬಸ್​ ಹೈದರಾಬಾದ್​ನಿಂದ ಪ್ರಕಾಶಂ ಜಿಲ್ಲೆಗೆ ಬರುತ್ತಿತ್ತು ಎನ್ನಲಾಗಿದೆ. ತಿಮ್ಮರಾಜುಪಾಲೆಂನಲ್ಲಿ ಬರುತ್ತಿದ್ದಾಗ ಹಠಾತ್​ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ದಿಢೀರನೇ ಬಸ್​ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

fire accident
ಚಲಿಸುತ್ತಿದ್ದ ಬಸ್​ಗೆ ಬೆಂಕಿ
author img

By

Published : Dec 16, 2021, 10:58 AM IST

Updated : Dec 16, 2021, 12:01 PM IST

ಅಮರಾವತಿ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪರ್ಚೂರು ಮಂಡಲದ ತಿಮ್ಮರಾಜುಪಾಲೆಂನಲ್ಲಿ ಖಾಸಗಿ ಬಸ್​ವೊಂದಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಖಾಸಗಿ ಬಸ್​ ಹೈದರಾಬಾದ್​ನಿಂದ ಪ್ರಕಾಶಂ ಜಿಲ್ಲೆಯ ಚಿರಾಲಕ್ಕೆ ಬರುತ್ತಿತ್ತು ಎನ್ನಲಾಗ್ತಿದೆ. ಈ ವೇಳೆ ತಿಮ್ಮರಾಜುಪಾಲೆಂನಲ್ಲಿ ಬರುತ್ತಿದ್ದಾಗ ಹಠಾತ್​ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬಸ್ಸಿನಲ್ಲಿದ್ದ ಅಲಾರಂ ಮೊಳಗಿದೆ. ಎಚ್ಚೆತ್ತುಕೊಂಡ ಪ್ರಯಾಣಿಕರು ದಿಢೀರನೇ ಬಸ್​ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್​ಗೆ ಬೆಂಕಿ

ಇದನ್ನೂ ಓದಿ: ಹೊಸ ಬಾಳಿಗೆ ಕಾಲಿಟ್ಟ ಮೂಗ ಮತ್ತು ಕಿವುಡ ಜೋಡಿಗಳು.. ವಿಶೇಷಚೇತನರ ಅತ್ಯಪರೂಪದ ಮದುವೆ

ಆದರೆ, ಬಸ್​ನಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದ ಅಗ್ನಿಶಾಮತ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ಬಸ್​ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

Last Updated : Dec 16, 2021, 12:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.