ETV Bharat / bharat

ಮತಾಂತರ ಆರೋಪ: ಮಿಷನರಿ ವಿರುದ್ಧ ದೂರು ದಾಖಲು

author img

By

Published : Nov 14, 2022, 3:45 PM IST

ಈ ಕ್ರಿಶ್ಚಿಯನ್​ ಮಿಷನರಿ ಸಂಸ್ಥೆಯಲ್ಲಿ ಮಕ್ಕಳ ಮತಾಂತರ ಕಾರ್ಯ ನಡೆದಿದೆ. ದಿಂದೊರಿ ಜಿಲ್ಲೆಯಿಂದ ಕರೆ ತರಲಾಗಿದ್ದ ಮಗುವನ್ನು ಅವರು ಪಾದ್ರಿಯಾಗಿ ಮಾಡಲು ತರಬೇತಿ ನೀಡಲಾಗಿದೆ ಎಂದು ಕನೊಂಗೊ ಆಪಾದಿಸಿದ್ದಾರೆ.

ಮತಾಂತರ ಆರೋಪ: ಕ್ರಿಶ್ಚಿಯನ್​ ಮಿಷನರಿ ವಿರುದ್ಧ ದೂರು ದಾಖಲು
File complaint against Christian Missionary alleging conversion in Madya pradesh

ದಮೋ (ಮಧ್ಯಪ್ರದೇಶ): ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಮಿಷನರಿಗೆ ಸಂಬಂಧಿಸಿದ 10 ಜನರ ಮೇಲೆ ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗ ಅಧ್ಯಕ್ಷರಾದ ಪ್ರಿಯಾಂಕ್​ ಕನೊಂಗೊ ದೂರು ದಾಖಲಿಸಿದ್ದಾರೆ. ಮಧ್ಯ ಪ್ರದೇಶದ ದಮೊಹಕ್ಕೆ ಅವರು ನಿನ್ನೆ ರಾತ್ರಿ (ಭಾನುವಾರ ರಾತ್ರಿ) ದಿಢೀರ್​ ಭೇಟಿ ನೀಡಿದ್ದು, ಈ ವೇಳೆ ಈ ಘಟನೆ ನಡೆದಿದೆ.

ಇಲ್ಲಿನ ಕ್ರಿಶ್ಚಿಯನ್​ ಮಿಷನರಿ ನಡೆಸುತ್ತಿದ್ದ ಮಕ್ಕಳ ಅನಾಥಾಶ್ರಮಕ್ಕೆ ಕಾನೊಂಗೊ ದಿಢೀರ್​ ಭೇಟಿ ನೀಡಿದ್ದಾರೆ. ತಮ್ಮ ಈ ಭೇಟಿ ಕುರಿತು ಅವರು ಕೇವಲ ಅಧಿಕಾರಿಗಳಿಗೆ ಮಾತ್ರ ಮಾಹಿತಿ ನೀಡಿದ್ದಾರೆ.

ಎಫ್​ಐಆರ್​ ಪ್ರಕಾರ, ಜಿಲ್ಲೆಯ ಕಟ್ನಿ ಬೈಪಾಸ್​ ಬಳಿಯಿರುವ ಕ್ರಿಶ್ಚಿಯನ್​ ಮಿಷನರಿ ನಡೆಸುತ್ತಿರುವ ಮಕ್ಕಳ ಅನಾಥಾಶ್ರಮಕ್ಕೆ ಮಧ್ಯಪ್ರದೇಶ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ಓಂಕಾರ್​ ಸಿಂಗ್​ ಮರ್ಕಾಮ್​ ಭೇಟಿ ನೀಡಿದ್ದಾರೆ. ಅವರು ಗೇಟ್​ ಹೊರಗೆ ಸಾಕಷ್ಟು ಹೊತ್ತು ಕಾದ ಬಳಿಕ ಅನಾಥಾಶ್ರಮದ ಒಳಗೆ ಹೋಗಲು ಅನುಮತಿ ನೀಡಲಾಗಿದೆ. ಈ ವೇಳೆ ಉನ್ನತ ಅಧಿಕಾರಿಗಳು ಅವರ ಜೊತೆ ಇದ್ದರೂ ಅವರಿಗೆ ಗೇಟ್​ ತೆರೆಯಲು ನಿರಾಕರಿಸಿ, ಕಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮತಾಂತರ ಆರೋಪ: ಈ ಕ್ರಿಶ್ಚಿಯನ್​ ಮಿಷನರಿ ಸಂಸ್ಥೆಯಲ್ಲಿ ಮಕ್ಕಳ ಮತಾಂತರ ಕಾರ್ಯ ನಡೆದಿದೆ. ದಿಂದೊರಿ ಜಿಲ್ಲೆಯಿಂದ ಕರೆ ತರಲಾಗಿದ್ದ ಮಗುವನ್ನು ಅವರು ಪಾದ್ರಿಯಾಗಿ ಮಾಡಲು ತರಬೇತಿ ನೀಡಲಾಗಿದೆ ಎಂದು ಕನೊಂಗೊ ಆಪಾದಿಸಿದ್ದಾರೆ. ಈ ಬೆನ್ನಲ್ಲೆ ಕನೊಂಗೊ ದೆಹತ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಈ ದೂರು ಸಲ್ಲಿಸಲು ಕೂಡ ಸಾಕಷ್ಟು ಕಾಯಬೇಕಾಯಿತು ಎಂದಿದ್ದಾರೆ.

ಈ ಅನಿರೀಕ್ಷಿತ ಭೇಟಿಗೆ ಮುನ್ನ ಮತ್ಯಾರೂ ಅಲ್ಲದೇ ಇಲಾಖೆಯ ಜನರೇ ಸಂಸ್ಥೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಅಧಿಕಾರಿಯನ್ನು ನಾನೇ ಹಿಡಿದಿದ್ದೇನೆ. ಇದು ಮಕ್ಕಳ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆ ಆಗಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಎಫ್​ಐಆರ್​ ಮಾಡಲಾಗಿದ್ದು, ಪೊಲೀಸರಿಗೆ ತಿಳಿಸಲಾಗಿದೆ. ಇಲ್ಲಿನ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೇಜವಬ್ದಾರಿಯಿಂದ ಇದ್ದು, ಇಲ್ಲಿನ ಸ್ಥಳೀಯ ಅಧಿಕಾರಿಗಳು ಕೂಡ ಕ್ಲಿಷ್ಟಕರವಾಗಿದ್ದಾರೆ.

ದೂರು ದಾಖಲು ಎಸ್​​​​​​​​​ಪಿ ಸ್ಪಷ್ಟನೆ: ಪ್ರಕರಣ ಕುರಿತು ಮಾತನಾಡಿದ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಶಿವ ಕುಮಾರ್​ ಸಿಂಗ್​​, ಆಯೋಗದ ಅಧ್ಯಕ್ಷರು, ಮತಾಂತರದ ದೂರು ದಾಖಲಿಸಿದ್ದಾರೆ. ಕ್ರಿಶ್ಚಿಯನ್​ ಮಿಷನರಿಯ 10 ಮಂದಿ ವಿರುದ್ಧ ಐಪಿಸಿ ಸೆಕ್ಷನ್​ 370, ಸೆಕ್ಷನ್​ 42 ಮತ್ತು 75, ಬಾಲ ನ್ಯಾಯ ಕಾಯಿದೆ 2015 ಮತ್ತು ಮಧ್ಯ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಸೆಕ್ಷನ್​ 3 ಮತ್ತು 5ರ ಅನುಸಾರ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ತನಿಖೆ ನಡೆಸಲಾಗುವುದು ಎಂದರು.

ಆರೋಪ ನಿರಾಕರಿಸಿದ ಹಾಸ್ಟೆಲ್​ ಪ್ರಿನ್ಸಿಪಾಲ್​: ಘಟನೆ ಕುರಿತು ಮಾತನಾಡಿರುವ ಹಾಸ್ಟೆಲ್​ ಪ್ರಿನ್ಸಿಪಾಲ್​ ಟ್ರಿಜ್​ ಮಿಸ್​, ಮತಾಂತರದ ಈ ಆರೋಪದಲ್ಲಿ ಉರುಳಿಲ್ಲ. ಈ ಹಾಸ್ಟೆಲ್​ನಲ್ಲಿ ಯಾವುದೇ ಮಗುವಿಗೂ ಕಟ್ಟುಪಾಡಗಳಿಲ್ಲ. ಹಿಂದು, ಮುಸ್ಲಿಂ ಸೇರಿದಂತೆ ಆಯಾ ಧರ್ಮಕ್ಕೆ ಸಂಬಂಧಿಸಿದ ಮಕ್ಕಳು ಅವರ ಧರ್ಮ ಅನುಸಾರವೇ ಪ್ರಾರ್ಥನೆ ಮಾಡುತ್ತಾರೆ. ಭಾನುವಾರ ಆದ ಕಾರಣ ಮಕ್ಕಳು ಹೊರ ಹೋಗಬಾರದು ಎಂಬ ಕಾರಣದಿಂದ ಹಾಗೂ ಭದ್ರತೆ ಹಿನ್ನಲೆ ಗೇಟ್​ ತೆಗೆಯಲು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆಯ ಹತ್ಯೆಯ ಬಗ್ಗೆ ಕೇಳಿ ಪ್ರಿಯಾಂಕಾ ಅತ್ತಿದ್ದರು: ಬಿಡುಗಡೆಯಾದ ಅಪರಾಧಿ ನಳಿನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.