ETV Bharat / bharat

ಹೈದರಾಬಾದ್​ನಲ್ಲಿ ಗೋವುಗಳ ಅಕ್ರಮ ಸಾಗಾಟ ಅಡ್ಡಿಪಡಿಸಿದವರ ಮೇಲೆ ಹಲ್ಲೆ, ಪೊಲೀಸರ ಲಾಠಿಚಾರ್ಜ್​

author img

By

Published : Feb 23, 2022, 7:42 PM IST

Updated : Feb 23, 2022, 8:09 PM IST

ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಲವು ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಿದ ನಂತರ ಉದ್ವಿಗ್ನತೆ ಕಡಿಮೆಯಾಗಿದೆ. ಹೆಚ್ಚಿನ ಯುವಕರನ್ನು ಬಂಧಿಸಿ ಮೀರ್‌ಪೇಟ್ ಮತ್ತು ಸರೂರ್‌ನಗರ ಪೊಲೀಸ್​ ಸ್ಟೇಷನ್​ಗೆ ಸ್ಥಳಾಂತರ ಮಾಡಲಾಗಿದೆ. ಹೆಚ್ಚುವರಿ ಪಡೆಗಳ ಮೂಲಕ ಸ್ಥಳವನ್ನು ನಿಯಂತ್ರಣಕ್ಕೆ ತರಲಾಗಿದೆ..

Fight between cow vigilantes, cattle transporters leads to protests & stone pelting in Hyderabad
ಹೈದರಾಬಾದ್​ನಲ್ಲಿ ಗೋವುಗಳ ಅಕ್ರಮ ಸಾಗಾಟ ಅಡ್ಡಿಪಡಿಸಿದವರ ಮೇಲೆ ಹಲ್ಲೆ, ಪೊಲೀಸರ ಲಾಠಿ ಚಾರ್ಜ್​

ಹೈದರಾಬಾದ್‌, ತೆಲಂಗಾಣ : ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹೈದರಾಬಾದ್‌ನಲ್ಲಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಕೆಲ ಪೊಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ.

ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್​ನ ಕರ್ಮಾನ್​ಘಾಟ್​​ ಗೋರಕ್ಷಕ ಸೇವಾ ಸಮಿತಿಯ ಸದಸ್ಯರು ಟಿಕೆಆರ್ ಕಮಾನ್ ಬಳಿ ವಾಹನವೊಂದನ್ನು ತಡೆದಿದ್ದರು. ಈ ವೇಳೆ ವಾಹನದಲ್ಲಿದ್ದವರು ಮತ್ತು ಗೋರಕ್ಷಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಕಲ್ಲು ತೂರಾಟ, ಪರಸ್ಪರ ಘರ್ಷಣೆ ಸಂಭವಿಸಿದೆ. ಗೋವುಗಳ ಕಳ್ಳಸಾಗಣೆ ಆರೋಪ ಹೊತ್ತವರು, ಕೆಲವು ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಗೋ ರಕ್ಷಕರ ಮೇಲೆ ಕಬ್ಬಿಣದ ರಾಡ್​ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.

ಹೈದರಾಬಾದ್​​ನ ಕರ್ಮಾನ್​ಘಾಟ್​​ ಉದ್ವಿಗ್ನ

ಈ ವೇಳೆ ತಮ್ಮನ್ನು ತಾವು ಕಾಪಾಡಿಕೊಳ್ಳಲು ಗೋರಕ್ಷಕರು, ಹತ್ತಿರದಲ್ಲಿಯೇ ಇದ್ದ ಹನುಮಾನ್​ ದೇವಾಲಯಕ್ಕೆ ನುಗ್ಗಿದ್ದು, ಆರೋಪಿಗಳು ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ನಂತರ ಗೋರಕ್ಷಕ ಸೇವಾ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಆರಂಭವಾದ ಪ್ರತಿಭಟನೆ ಬುಧವಾರ ಮಧ್ಯಾಹ್ನ 3 ಗಂಟೆಯವರೆಗೆ ನಡೆದಿದೆ.

ಟ್ರಾಫಿಕ್ ಜಾಮ್, ಲಾಠಿಚಾರ್ಜ್​​ : ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದ ಕಾರಣಕ್ಕೆ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಮತ್ತು ಅಲ್ಲಿದ್ದ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಹಲವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೆಲವರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಲಾಠಿ ಚಾರ್ಜ್ ವೇಳೆ ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಲೂಡೋಗಾಗಿ ರೈಲಿನಲ್ಲೇ ಲಡಾಯಿ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಲವು ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಿದ ನಂತರ ಉದ್ವಿಗ್ನತೆ ಕಡಿಮೆಯಾಗಿದೆ. ಹೆಚ್ಚಿನ ಯುವಕರನ್ನು ಬಂಧಿಸಿ ಮೀರ್‌ಪೇಟ್ ಮತ್ತು ಸರೂರ್‌ನಗರ ಪೊಲೀಸ್​ ಸ್ಟೇಷನ್​ಗೆ ಸ್ಥಳಾಂತರ ಮಾಡಲಾಗಿದೆ. ಹೆಚ್ಚುವರಿ ಪಡೆಗಳ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಡಿಜಿಪಿ ಎಚ್ಚರಿಕೆ : ಈ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವು ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತವೆ. ಈ ಸುಳ್ಳು ಸುದ್ದಿಯನ್ನ ಯಾರೂ ಹರಿಬಿಡಬಾರದು. ಒಂದು ವೇಳೆ ಸುಳ್ಳು ಸುದ್ದಿ ಹರಿಬಿಟ್ಟರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ತೆಲಂಗಾಣ ಡಿಜಿಪಿ ಅಂಜನಿ ಕುಮಾರ್​ ಎಚ್ಚರಿಕೆ ರವಾನಿಸಿದ್ದಾರೆ.

Last Updated : Feb 23, 2022, 8:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.