ETV Bharat / bharat

ಮಗಳ ಮೇಲೆಯೇ ಅತ್ಯಾಚಾರ ಆರೋಪ: ನನ್ನ ಗೌರವ ಹಿಂದಿರುಗಿಸುವವರ‍್ಯಾರು ಎಂದು ಪ್ರಶ್ನಿಸಿದ 'ಮುಗ್ದ' ತಂದೆ?

author img

By

Published : Jul 5, 2022, 9:57 PM IST

Updated : Jul 5, 2022, 10:36 PM IST

ಮಾಧ್ಯಮಗಳ ಮುಂದೆ ತನ್ನ ನೋವು ವಿವರಿಸಿರುವ ಬಲರಾಮ್, ಇಡೀ ಘಟನೆಯಲ್ಲಿ ತಾನು ನಿರಪರಾಧಿ, ಆದರೆ ಪರಿಸ್ಥಿತಿಯ ಸಂಪೂರ್ಣ ಅರಿವಿಲ್ಲದೇ ಪೊಲೀಸರು ನನ್ನನ್ನು ಥಳಿಸಿದರು. ಕಳೆದು ಹೋದ ಮಾನವನ್ನು ಕೊಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಮಗಳ ಮೇಲೆಯೇ ಅತ್ಯಾಚಾರ ಆರೋಪ
ಮಗಳ ಮೇಲೆಯೇ ಅತ್ಯಾಚಾರ ಆರೋಪ

ವಲ್ಸಾದ್(ಗುಜರಾತ್​) : ಗುಜರಾತ್‌ನಲ್ಲಿ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪದ ಮೇಲೆ ಎರಡು ವರ್ಷಗಳಿಂದ ಜೈಲಿನಲ್ಲಿದ್ದ ತಂದೆಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ವಾಪಿ ನ್ಯಾಯಾಲಯ ಅವರು ಮುಗ್ದ ಎಂದು ಹೇಳಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ನಂತರ ಇವರು ಇಡೀ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ.

ಮಗಳಿಂದ ಗಂಭೀರ ಆರೋಪ : ಉತ್ತರ ಪ್ರದೇಶ ಮೂಲದ ಬಲರಾಮ್ ವಿಶ್ವಂಭರ್ ಝೈ ಅವರು ಬನಾರಸ್ ಮತ್ತು ವಾರಣಾಸಿಯಲ್ಲಿ ಅಧ್ಯಯನ ಮಾಡಿದ್ದರಂತೆ ನಂತರ 2003 ರಲ್ಲಿ ವಲ್ಸಾದ್ ಜಿಲ್ಲೆಯ ಪಾರ್ಡಿಯಲ್ಲಿ ಹಿಂದಿ-ಸಂಸ್ಕೃತ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಇದರ ನಡುವೆ ಇವರ ಜೀವನದಲ್ಲಿ ಆಗಬಾರದ ಘಟನೆಯೊಂದು 8 ಜುಲೈ 2020 ರಂದು ಜರುಗಿದೆ.

ಅವರ ಮಗಳು 1098 ಕ್ಕೆ ಡಯಲ್ ಮಾಡಿದ್ದಾಳೆ. 1098 ಸಹಾಯವಾಣಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಲ್ಸಾದ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಕ್ಷಣ ಸ್ಪಂದಿಸಿ ಇವರ ನಿವಾಸಕ್ಕೆ ಬಂದಿದ್ದಾರೆ. ನಂತರ ಏನು ಎತ್ತ ಎಂಬುದನ್ನು ಯೋಚನೆ ಮಾಡದೇ ಪರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದಾದ ನಂತರ ಮಗಳನ್ನು ಧರಸನಾ ಮಹಿಳಾ ಮಕ್ಕಳ ಸಂಸ್ಥೆಗೆ ಕಳುಹಿಸಿದ್ದಾರೆ.

ನನ್ನ ಗೌರವ ಹಿಂದಿರುಗಿಸುವವರ‍್ಯಾರು ಎಂದು ಪ್ರಶ್ನಿಸಿದ 'ಮುಗ್ದ' ತಂದೆ?

ಮಾಧ್ಯಮಗಳ ಮುಂದೆ ತನ್ನ ನೋವನ್ನು ವಿವರಿಸಿರುವ ಬಲರಾಮ್, ಇಡೀ ಘಟನೆಯಲ್ಲಿ ತಾನು ನಿರಪರಾಧಿ, ಆದರೆ, ಪರಿಸ್ಥಿತಿಯ ಸಂಪೂರ್ಣ ಅರಿವಿಲ್ಲದೇ ಪೊಲೀಸರು ನನ್ನನ್ನು ಥಳಿಸಿದರು. ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು ಪರಿಣಾಮ ನವಸಾರಿ ಜೈಲಿನಲ್ಲಿ ಎರಡು ವರ್ಷ ಕಳೆದಿದ್ದೇನೆ ಎಂದಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಂತಹ ಸಂಸ್ಥೆಗಳ ಅಪೂರ್ಣ ತನಿಖೆಯು ಕುಟುಂಬವನ್ನು ಹೇಗೆ ಹಾಳುಮಾಡುತ್ತದೆ ಎಂದು ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಅಂದ ಹಾಗೆ ಇವರು ಪ್ರೊಪೆಸರ್ ಆಗಿದ್ದು, ಈ ಪ್ರಕರಣದಿಂದಾಗಿ ಅವರು ಕೆಲಸವನ್ನೂ ಕಳೆದುಕೊಂಡಿದ್ದಾರೆ. ಈಗ ಮುಗ್ದ ಎಂದು ಬಿಡುಗಡೆ ಕೂಡಾ ಆಗಿದ್ದಾರೆ. ಆದರೆ ಹೋದ ಮಾನ - ಮರ್ಯಾದೆ ವಾಪಸ್ ಬರುತ್ತದಾ ಎಂಬುದು ಇವರ ಪ್ರಶ್ನೆ.

ಇದನ್ನೂ ಓದಿ: ಜುಲೈ 11 ಎಐಎಡಿಎಂಕೆ ಸಾಮಾನ್ಯ ಸಭೆ ವಿವಾದ: ವಿಚಾರಣೆಗೆ ಒಪ್ಪಿಕೊಂಡ ಮದ್ರಾಸ್​ ಹೈಕೋರ್ಟ್​

Last Updated :Jul 5, 2022, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.