ETV Bharat / bharat

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ.. ಸ್ಥಳಕ್ಕೆ ದೌಡಾಯಿಸಿದ ಬಾಂಬ್​ ಸ್ಕ್ವಾಡ್​

author img

By

Published : Jun 27, 2021, 7:37 AM IST

Updated : Jun 27, 2021, 9:36 AM IST

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟದ ಸುದ್ದಿಯೊಂದು ವರದಿಯಾಗಿದ್ದು, ಸ್ಥಳಕ್ಕೆ ಫೋರೆನ್ಸಿಕ್ ತಂಡ, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿದೆ.

Jammu and Kashmir Explosion heard inside Jammu airport's technical area
ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ, ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ

ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಲ್ಲಿ ಬೆಳ್ಳಂಬೆಳಗ್ಗೆ ಉಗ್ರರು ದುಷ್ಕೃತ್ಯ ಮೆರೆದಿದ್ದಾರೆ. ಭಯೋತ್ಪಾದಕರ ಅಟ್ಟಹಾಸಕ್ಕೆ ಆಗಾಗ್ಗೆ ಸಾಕ್ಷಿಯಾಗುತ್ತಿರುವ ಕಾಶ್ಮೀರದಲ್ಲಿ ಇಂದು ಮತ್ತೊಂದು ಸ್ಫೋಟ ಸಂಭವಿಸಿದೆ. ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟದ ಮಾಹಿತಿ ತಿಳಿದುಬಂದಿದೆ.

ಜಮ್ಮು ವಿಮಾನ ನಿಲ್ದಾಣದ ಟೆಕ್ನಿಕಲ್ ಪ್ರದೇಶದಲ್ಲಿ ಬಾಂಬ್ ಸ್ಫೋಟವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ಫೋರೆನ್ಸಿಕ್ ತಂಡ, ಬಾಂಬ್ ನಿಷ್ಕ್ರಿಯ ದಳ ಸ್ಫೋಟದ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿವೆ.

  • Two low intensity explosions were reported early Sunday morning in the technical area of Jammu Air Force Station. One caused minor damage to the roof of a building while the other exploded in an open area.

    — Indian Air Force (@IAF_MCC) June 27, 2021 " class="align-text-top noRightClick twitterSection" data=" ">

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವಾಯುಪಡೆ ಕಡಿಮೆ ತೀವ್ರತೆ ಎರಡು ಸ್ಫೋಟಗಳು ನಡೆದಿವೆ. ಒಂದು ಸ್ಫೋಟದಿಂದ ಕಟ್ಟಡದ ಛಾವಣಿಗೆ ಸ್ವಲ್ಪ ಹಾನಿಯಾಗಿದೆ. ಮತ್ತೊಂದು ಸ್ಫೋಟ ಬಯಲು ಪ್ರದೇಶದಲ್ಲಿ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

ಇದರೊಂದಿಗೆ ಯಾವುದೇ ಸಾಮಗ್ರಿ ಅಥವಾ ಸಾಧನಗಳಿಗೆ ಹಾನಿಯಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಂಡಿಯನ್ ಏರ್​​ ಫೋರ್ಸ್ ಟ್ವಿಟರ್​ನಲ್ಲಿ ಹೇಳಿಕೊಂಡಿದೆ.

Last Updated : Jun 27, 2021, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.