ETV Bharat / bharat

ವ್ಯಾಯಾಮ, ಧ್ಯಾನ ವೃದ್ಧರಲ್ಲಿ ಅರಿವಿನ ಸಾಮರ್ಥ್ಯವನ್ನ ಸುಧಾರಿಸುವುದಿಲ್ಲವಂತೆ !

author img

By

Published : Dec 15, 2022, 1:12 PM IST

ವ್ಯಾಯಾಮವು ವಯಸ್ಸಾದ ವಯಸ್ಕರಲ್ಲಿ ಹೃದಯ ರಕ್ತನಾಳದ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ. ಹಾಗೆ ಮನಸಿನ ಧ್ಯಾನವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುದರ ಜೊತೆಗೆ ಉತ್ತಮ ದೈಹಿಕ ಮತ್ತು ಮಾನಸಿಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Exercise, meditation does not improve cognitive ability in the elderly!
ವ್ಯಾಯಾಮ, ಧ್ಯಾನ ವೃದ್ಧರಲ್ಲಿ ಅರಿವಿನ ಸಾಮರ್ಥ್ಯವನ್ನು ಸುಧಾರಿಸುವುದಿಲ್ಲವಂತೆ !

ವಾಷಿಂಗ್ಟನ್: ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧನೆಯು ವೃದ್ಧರಲ್ಲಿ ವ್ಯಾಯಾಮದ ಪರಿಣಾಮ ಮತ್ತು ಪ್ರಯೋಜನ ಕುರಿತು ಅಧ್ಯಯನ ನಡೆಸಿದೆ. ಅದರ ವರದಿ ಪ್ರಕಾರ ಬುದ್ಧಿಮಾಂದ್ಯತೆ ಇಲ್ಲದ ಆರೋಗ್ಯವಂತ ವಯಸ್ಸಾದ ಜನರಲ್ಲಿ ವ್ಯಾಯಾಮವು ಸಾವಧಾನತೆಯ ಧ್ಯಾನವಲ್ಲ, ಅರಿವಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ತಿಳಿಸಿತ್ತು.

ಈ ಸಂಗತಿ 65-84 ವರ್ಷ ವಯಸ್ಸಿನ 585 ಜನರ ಮೇಲೆ ಈ ಅಧ್ಯಯನವನ್ನು ನಡೆಸಿ ನಂತರ ದೃಢಪಟ್ಟಿತ್ತು. ಆದರೆ ಇದೀಗ ಅದೇ ವಿಷಯದ ಮೇಲೆ ಪುನಃ ಅಧ್ಯಯನದ ನಂತರ ವ್ಯಾಯಾಮವು ವಯಸ್ಸಾದ ವಯಸ್ಕರಲ್ಲಿ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ.

ಹಾಗೆ ಮನಸಿನ ಧ್ಯಾನವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಉತ್ತಮ ದೈಹಿಕ ಮತ್ತು ಮಾನಸಿಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ, ವ್ಯಾಯಾಮ ಮತ್ತು ಜಾಗರೂಕ ಧ್ಯಾನವು ವಯಸ್ಸಾದವರಲ್ಲಿ ಅರಿವಿನ ಕಾರ್ಯವನ್ನು ಸುಧಾರಿಸುವುದಿಲ್ಲ ಎಂದು ಸಂಶೋಧಕರು ತೀರ್ಮಾನಿಸಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ನಿರ್ಧರಿಸಲಾಗಿದೆ.

ಇದನ್ನೂ ಓದಿ; ದೀರ್ಘಕಾಲದ ನೋವಿಗೆ ಮೊಲೆಕ್ಯುಲರ್​​​ ಹೈಡ್ರೋಜೆನ್​ ಚಿಕಿತ್ಸೆ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.