ETV Bharat / bharat

ವಿಶ್ವ ಚಾಂಪಿಯನ್ ಪಿವಿ ಸಿಂಧು ಜತೆ ಈಟಿವಿ ಭಾರತ ಎಕ್ಸ್​ಕ್ಲ್ಯೂಸಿವ್​ ಸಂದರ್ಶನ

author img

By

Published : Mar 15, 2021, 7:32 AM IST

ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಕ್ಯಾರೊಲಿನ್ ಮರಿನ್ ವಿರುದ್ಧ ತಾವು "ತಪ್ಪು ತಂತ್ರ" ವನ್ನು ಬಳಸಿದ್ದೇನೆ ಎಂದು ವಿಶ್ವ ಚಾಂಪಿಯನ್ ಪುಸರ್ಲಾ ವೆಂಕಟ ಸಿಂಧು ಈಟಿವಿ ಭಾರತ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

PV Sindhu
ಪಿವಿ ಸಿಂಧು ಜತೆ ಈಟಿವಿ ಭಾರತ ಎಕ್ಸ್​ಕ್ಲ್ಯೂಸಿವ್​ ಸಂದರ್ಶನ

ಹೈದರಾಬಾದ್: ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಕ್ಯಾರೊಲಿನ್ ಮರಿನ್ ವಿರುದ್ಧ ತಾವು "ತಪ್ಪು ತಂತ್ರ" ಅನುಸರಿಸಿದ್ದೇನೆ ಎಂದು ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಹೇಳಿಕೊಂಡಿದ್ದಾರೆ. ಆ ಒಂದು ತಪ್ಪು ನಿರ್ಧಾರ ಸ್ವಿಸ್ ಓಪನ್ ಪಂದ್ಯಾವಳಿಯ ಫೈನಲ್‌ ಸೋಲಿಗೆ ಕಾರಣವಾಯಿತು. ಆದರೆ, ಆ ಸೋಲಿನಿಂದ ಚೇತರಿಸಿಕೊಂಡು ಆಟದ ಹಳಿಗೆ ಮರಳಿದ್ದೇನೆ, ಇದು ತಮಗೆ ಸಂತಸ ತಂದಿದೆ ಎಂದು ಈ ಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಸಿಂಧು ಸಂತಸ ವ್ಯಕ್ತಪಡಿಸಿದ್ದಾರೆ.

ಈಟಿವಿ ಭಾರತ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು, ಥಾಯ್ಲೆಂಡ್​ ಓಪನ್, ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಸಿದ್ಧತೆಗಳು, ಕೋವಿಡ್ ಕಾಲದಲ್ಲಿ ತರಬೇತಿ ಮತ್ತು ಟೋಕಿಯೊ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಗಚಿಬೌಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ನಿರ್ಧಾರದ ಬಗ್ಗೆ ತಮ್ಮ ಮನದಿಂಗಿತಗಳನ್ನ ಬಿಚ್ಚಿಟ್ಟಿದ್ದಾರೆ.

ಪ್ರ. ಸ್ವಿಸ್ ಓಪನ್‌ನಲ್ಲಿ ನಿಮ್ಮ ಸಾಧನೆ ಬಗ್ಗೆ ನೀವು ತೃಪ್ತಿ ಹೊಂದಿದ್ದೀರಾ?

ಉ. ಫೈನಲ್ಸ್​ನಲ್ಲಿ ಆಡಿದ್ದಕ್ಕೆ ನನಗೆ ಸಂಸತವಿದೆ. ಆದರೆ ಅದೇ ಸಮಯದಲ್ಲಿ ಫಲಿತಾಂಶದ ಬಗ್ಗೆ ಸಂತೋಷವಾಗಿಲ್ಲ. ಕಲಿಯಲು ಬಹಳಷ್ಟು ಇದೆ. ಒಟ್ಟಾರೆಯಾಗಿ, ನಾನು ಫೈನಲ್ಸ್​ನಲ್ಲಿ ಕೆಲ ತಪ್ಪು ತಂತ್ರಗಳನ್ನ ಬಳಸಿದ್ದೇನೆ ಮತ್ತು ಆ ತಂತ್ರಗಳು ಫಲ ನೀಡಿಲ್ಲ. ಆದರೆ ಈ ಪಂದ್ಯದಿಂದ ಸಾಕಷ್ಟು ಕಲಿತಿದ್ದೇನೆ.

ಪ್ರ. ಕಳೆದ ಕೆಲವು ಪಂದ್ಯಾವಳಿಗಳಲ್ಲಿ ಆರಂಭಿಕ ನಿರ್ಗಮನಕ್ಕೆ ಕಾರಣವಾದದ್ದು ಏನು? ಈ ಸಮಯದಲ್ಲಿ ಏನು ಬದಲಾಗಿದೆ?

ಉ. ನನ್ನ ತಪ್ಪುಗಳನ್ನು ಸರಿಪಡಿಸುವುದು ನನಗೆ ನಿಜವಾಗಿಯೂ ಮುಖ್ಯವಾಗಿದೆ. ಫೈನಲ್‌ಗೆ ಬರುವುದು ಮತ್ತು ಫೈನಲ್‌ನಲ್ಲಿ ಆಡುವುದು ಖಂಡಿತವಾಗಿಯೂ ಒಳ್ಳೆಯದು. ನನ್ನ ತಪ್ಪುಗಳಿಂದ ನಾನು ಪಾಠ ಕಲಿತಿದ್ದೇನೆ. ಮತ್ತೆ ಜಯದ ಹಳಿಗೆ ಮರಳಿದ್ದೇನೆ. ಆದ್ದರಿಂದ ಖಂಡಿತವಾಗಿಯೂ ನಾನು ಎಲ್ಲದರಲ್ಲೂ ಕೆಲಸ ಮಾಡಿದ್ದೇನೆ. ಅದು ತಂತ್ರ ಅಥವಾ ಯಾವುದಾದರೂ ಆಗಿರಬಹುದು. ಹಾಗಾಗಿ ಆ ಗೆಲುವು ಅಥವಾ ಆ ಪಂದ್ಯ ಅಥವಾ ಸ್ವಿಸ್ ಓಪನ್‌ನಲ್ಲಿ ನಡೆದ ಪಂದ್ಯಾವಳಿ ನನಗೆ ಮುಖ್ಯವಾಗಿತ್ತು.

ಪ್ರ. ಕೊರೊನಾ ಲಾಕ್‌ಡೌನ್ ನಿಮ್ಮ ಆಟದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಿದೆ?

. ನಾನು ಮನೆಯಲ್ಲಿ ತರಬೇತಿ ಪಡೆಯುತ್ತಿದ್ದೆ ಮತ್ತು ಅದು ಉತ್ತಮವಾಗಿರುವುದರಿಂದ ಲಾಕ್​ಡೌನ್​ ನನ್ನ ಆಟದ ಮೇಲೆ ಪರಿಣಾಮ ಬೀರಿದೆ ಎಂದು ನಾನು ಭಾವಿಸುವುದಿಲ್ಲ. ಲಾಕ್‌ಡೌನ್ ಮಾಡಿದ ನಂತರ, ನನಗೆ ಪುನರಾಗಮನ ಮಾಡಲು ಸ್ವಲ್ಪ ಸಮಯ ಹಿಡಿಯಿತು. ಕೋರ್ಟ್​ಗೆ ಮರಳುವಾಗ ಸಂತೋಷವಾಯಿತು ಮತ್ತು ಈಗ ಎಲ್ಲವೂ ಚೆನ್ನಾಗಿದೆ.

ಪ್ರ. ಕೆರೊಲಿನಾ ಮರಿನ್ ಪಂದ್ಯದ ಬಗ್ಗೆ ಏನು ಹೇಳುತ್ತೀರಿ?

. ಕೆರೊಲಿನಾ ಮರಿನ್ ಆಕ್ರಮಣಕಾರಿ ಆಟಗಾರ್ತಿ ಮತ್ತು ಅವಳು ಚೆನ್ನಾಗಿ ಆಡುತ್ತಿದ್ದಾಳೆ. ಅವಳು ತುಂಬಾ ಆಕ್ರಮಣಕಾರಿ ಆಟಗಾರ್ತಿ. ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು. ನಾನು ಕಳೆದ ಪೈನಲ್​ನಲ್ಲಿ ಕೆಲ ತಪ್ಪು ಮಾಡಿದ್ದೇನೆ. ಮುಂದಿನ ಬಾರಿ ಅಂತಹ ತಪ್ಪು ಮರುಕಳೀಸದಂತೆ ಎಚ್ಚರ ವಹಿಸುತ್ತೇನೆ. ಗೆಲುವಿಗೆ ನನ್ನದೇ ಆದ ಬೇರೆ ತಂತ್ರವನ್ನ ಬಳಸಲು ಸನ್ನದ್ಧವಾಗಿದ್ದೇನೆ.

ಪ್ರ. ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ಗಾಗಿ ನಿಮ್ಮ ಸಿದ್ಧತೆಗಳ ಬಗ್ಗೆ ಏನು ಹೇಳುತ್ತೀರಾ?

ಉ. ನಾನು ಇದೀಗ ಜುರಿಚ್‌ನಲ್ಲಿ ಆಡುತ್ತಿದ್ದೇನೆ. ಸ್ವಿಸ್ ಓಪನ್ ನಂತರ, ನಾವು ಜರ್ಮನ್ ಓಪನ್​ಗೆ ಹೋಗಲು ಸಾಧ್ಯವಾಗಲಿಲ್ಲ. ಜುರಿಚ್‌ನಲ್ಲಿಯೇ ಇದ್ದು ಒಂದು ವಾರ ತರಬೇತಿ ಪಡೆದಿದ್ದೇನೆ ಮತ್ತು ಈಗ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ಗೆ ಹೋಗುತ್ತೇನೆ. ಖಂಡಿತವಾಗಿಯೂ ಸಿದ್ಧತೆಗಳು ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಸ್ವಿಸ್ ಓಪನ್ ನಂತರ ಸ್ವಲ್ಪ ಆತ್ಮವಿಶ್ವಾಸ ಹೆಚ್ಚಾಗಿದೆ. ಆದರೆ, ಪಂದ್ಯಾವಳಿ ಈಗ ಮುಗಿದಿದೆ ಮತ್ತು ಈ ಪಂದ್ಯಾವಳಿಯಲ್ಲಿ ಇದು ನನಗೆ ಹೊಸ ಆರಂಭವಾಗಿದೆ. ಇದು ಕೇವಲ ಹೊಸ ಆಟ ಏಕೆಂದರೆ ಅದು ಸಾರ್ವಕಾಲಿಕವಾಗಿ ವಿಭಿನ್ನವಾಗಿರುತ್ತದೆ.

ಪ್ರ. ಬಾಸೆಲ್‌ನಲ್ಲಿ ಆಟ ಹೇಗಿತ್ತು?

. ಆಗ ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದರಿಂದ ಇದು ನಿಜಕ್ಕೂ ಚೆನ್ನಾಗಿತ್ತು. ಮತ್ತೆ ಬಾಸೆಲ್‌ನಲ್ಲಿ ಆಡಲು ಖುಷಿಯಾಯಿತು.

ಪ್ರ. ಲಂಡನ್‌ನಲ್ಲಿ ತರಬೇತಿ, ಗಚಿಬೌಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ನಿಮ್ಮ ನಿರ್ಧಾರದ ಬಗ್ಗೆ ಏನು ಹೇಳುತ್ತೀರಾ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಳಸಿದ ಕ್ರೀಡಾಂಗಣಗಳ ಅನುಭವವನ್ನು ನೀಡುತ್ತದೆಯೇ ಈ ತರಬೇತಿ?

ಉ. ನಾನು ಜಿಎಸ್‌ಎಸ್‌ಐ (ಗ್ಯಾಟೋರೇಡ್ ಸ್ಪೋರ್ಟ್ಸ್ ಸೈನ್ಸ್ ಇನ್ಸ್ಟಿಟ್ಯೂಟ್) ಗೆ ಲಂಡನ್‌ನಲ್ಲಿ ತರಬೇತಿ ನೀಡಲು ಹೋಗಿದ್ದೆ. ಆ ಸಮಯದಲ್ಲಿ ನಾನು ಯಾವುದೇ ಪಂದ್ಯಾವಳಿಗಳನ್ನು ಹೊಂದಿರದ ಕಾರಣ ನನ್ನ ದೇಹದ ವಿಶ್ಲೇಷಣೆ ಮಾಡಲು ಸರಿಯಾದ ಸಮಯವಾಗಿತ್ತು. ಪ್ರತಿ ಬಾರಿ, ಇದು ಕಾರ್ಯನಿರತ ವೇಳಾಪಟ್ಟಿಯಾಗಿತ್ತು ಮತ್ತು ನನಗೆ ಹೆಚ್ಚು ಸಮಯವಿರಲಿಲ್ಲ. ಈಗ ನನಗೆ ಸಾಕಷ್ಟು ಸಮಯ ಸಿಕ್ಕಿದೆ. ಹಾಗಾಗಿ ನಾನು ಅಲ್ಲಿಗೆ ಹೋದೆ. ಇದು ಸಣ್ಣ ಪ್ರಕ್ರಿಯೆಯಲ್ಲ. ಇದು ಬಹಳ ದೀರ್ಘ ಪ್ರಕ್ರಿಯೆ. ದೇಹದ ವಿಶ್ಲೇಷಣೆ ಕ್ರೀಡಾಪಟುವಿಗೆ ಮತ್ತು ಪ್ರತಿ ಕ್ರೀಡೆಯಲ್ಲೂ ಬಹಳ ಮುಖ್ಯ. ಇದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಗಚಿಬೌಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ನನ್ನ ನಿರ್ಧಾರ ನಿಜವಾಗಿಯೂ ಒಳ್ಳೆಯದು. ನನಗೆ ಅಲ್ಲಿ ತರಬೇತಿ ನೀಡುವುದು ತುಂಬಾ ಅಗತ್ಯವಾಗಿತ್ತು. ವಾಸ್ತವವಾಗಿ, ಇದಕ್ಕೂ ಮುಂಚೆಯೇ, ನಾನು ಸಾಕಷ್ಟು ಬಾರಿ ಕೇಳಿದ್ದೇನೆ ಮತ್ತು ನಾನು ಅಲ್ಲಿ ತರಬೇತಿ ಪಡೆದಿದ್ದೇನೆ. ಏಕೆಂದರೆ ಟೋಕಿಯೊ ಕ್ರೀಡಾಕೂಟ ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಪ್ರತಿ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ದೊಡ್ಡ ಕ್ರೀಡಾಂಗಣಗಳು ಮತ್ತು ಹವಾನಿಯಂತ್ರಣ ಕ್ರೀಡಾಂಗಣಗಳು ಇರುತ್ತದೆ. ಅಂತಾರಾಷ್ಟ್ರೀಯ ಕ್ರೀಡಾಂಗಣಗಳು ಗಚಿಬೌಲಿಯಷ್ಟು ದೊಡ್ಡದಾಗಿದೆ. ಈ ಪ್ರಕ್ರಿಯೆಯಲ್ಲಿ, ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಬಿಎಐ) ನಿಜವಾಗಿಯೂ ನನಗೆ ಸಹಾಯ ಮಾಡಿದೆ. ಅಧ್ಯಕ್ಷ ಮತ್ತು ಕಾರ್ಯದರ್ಶಿ ನಿಜವಾಗಿಯೂ ನನಗೆ ಸಹಾಯ ಮಾಡಿದ್ದಾರೆ ಮತ್ತು ಗಚಿಬೌಲಿ ಕ್ರೀಡಾಂಗಣದಲ್ಲಿ ನನ್ನ ತರಬೇತಿಗೆ ಮತ್ತು ನಾನು ಅಲ್ಲಿ ಆಡಬಹುದು ಎಂದು ಅನುಮೋದಿಸಲು ಕ್ರೀಡಾ ಅಧಿಕಾರಿಗಳು, ಎಸ್‌ಎಐ ಮತ್ತು ತೆಲಂಗಾಣ ರಾಜ್ಯ ಸರ್ಕಾರಕ್ಕೂ ಧನ್ಯವಾದ ಹೇಳಲು ಬಯಸುತ್ತೇನೆ. ಅವರೆಲ್ಲರೂ ಈ ಪ್ರಕ್ರಿಯೆಯಲ್ಲಿ ನನಗೆ ಸಹಾಯ ಮಾಡಿದ್ದಾರೆ.

--ಆಯುಷ್ಮಾನ್​​ ಪಾಂಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.