ETV Bharat / bharat

ನೂಪುರ್ ಶರ್ಮಾ ಪ್ರಕರಣ: ಚೀಫ್ ಜಸ್ಟೀಸ್​​ ಎನ್​ವಿ ರಮಣ ಅವರಿಗೆ ನಿವೃತ್ತ ನ್ಯಾಯಾಧೀಶರ ಪತ್ರ

author img

By

Published : Jul 5, 2022, 5:20 PM IST

ನೂಪುರ್ ಅವರ ಪ್ರಕರಣವನ್ನು ಬೇರೆಯದೇ ಮಾನದಂಡಗಳ ಪ್ರಕಾರ ವಿಚಾರಣೆ ನಡೆಸುತ್ತಿರುವುದು ಯಾಕೆಂಬುದು ಅರ್ಥವಾಗುತ್ತಿಲ್ಲ. ಸುಪ್ರೀಂಕೋರ್ಟ್​ನ ಈ ಕ್ರಮಕ್ಕೆ ಯಾವುದೇ ಮೆಚ್ಚುಗೆ ವ್ಯಕ್ತಪಡಿಸಲಾಗದು ಹಾಗೂ ನೆಲದ ಸರ್ವೋಚ್ಚ ನ್ಯಾಯಾಲಯದ ಪಾವಿತ್ರ್ಯಕ್ಕೆ ಈ ಕ್ರಮವು ಧಕ್ಕೆ ತರುವಂತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Ex-judges criticise SC's remarks against Nupur Sharma, term them as "indelible scar" on justice system
Ex-judges criticise SC's remarks against Nupur Sharma, term them as "indelible scar" on justice system

ನವದೆಹಲಿ: ನೂಪುರ್ ಶರ್ಮಾ ಅವರ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್​ ಮತ್ತು ಜೆಬಿ ಪಾರ್ದಿವಾಲಾ ಅವರು ನೀಡಿದ ಹೇಳಿಕೆಗಳನ್ನು ಖಂಡಿಸಿ 15 ಜನ ನಿವೃತ್ತ ನ್ಯಾಯಾಧೀಶರು, 77 ನಿವೃತ್ತ ಅಧಿಕಾರಿಗಳು ಮತ್ತು 25 ಜನ ನಿವೃತ್ತ ಸಶಸ್ತ್ರ ಸೇನಾಪಡೆ ಅಧಿಕಾರಿಗಳು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

  • An open letter has been sent to CJI NV Ramana, signed by 15 retired judges, 77 retd bureaucrats & 25 retd armed forces officers, against the observation made by Justices Surya Kant & JB Pardiwala while hearing Nupur Sharma's case in the Supreme Court. pic.twitter.com/ul5c5PedWU

    — ANI (@ANI) July 5, 2022 " class="align-text-top noRightClick twitterSection" data=" ">

ಭಾರತದ ಜವಾಬ್ದಾರಿಯುತ ನಾಗರಿಕರಾಗಿರುವ ನಾವು, ಒಂದು ದೇಶದ ಸರ್ಕಾರಿ ಸಂಸ್ಥೆಗಳು ವಿಶ್ವಾಸಾರ್ಹವಾಗಿ ನಡೆದುಕೊಳ್ಳುವವರೆಗೂ ಆ ದೇಶದ ಪ್ರಜಾಪ್ರಭುತ್ವ ಸುಭದ್ರವಾಗಿ ಉಳಿಯಲು ಸಾಧ್ಯ ಎಂದು ನಂಬಿದ್ದೇವೆ. ಸುಪ್ರೀಂ ಕೋರ್ಟ್​ನ ಇಬ್ಬರು ಗೌರವಾನ್ವಿತ ನ್ಯಾಯಮೂರ್ತಿಗಳ ಹೇಳಿಕೆಗಳು ಲಕ್ಷ್ಮಣ ರೇಖೆಯನ್ನು ದಾಟಿದ್ದು, ತಮಗೆ ಈ ಪತ್ರ ಬರೆಯುವುದು ಅನಿವಾರ್ಯವಾಗಿದೆ ಎಂದು ಆರಂಭವಾಗುವ ಸುದೀರ್ಘ ಪತ್ರದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

  • The letter stated that the roster of Justice Surya Kant be withdrawn till he attains superannuation and least be directed to withdraw the remarks and observations made by him during the hearing of the Nupur Sharma case. pic.twitter.com/xUQUYbYjX7

    — ANI (@ANI) July 5, 2022 " class="align-text-top noRightClick twitterSection" data=" ">

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರಳ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮುಂದಾಗುವ ಬದಲು, ಅರ್ಜಿದಾರಳು ತನ್ನ ಅರ್ಜಿಯನ್ನು ಹಿಂಪಡೆಯುವಂತೆ ಬಲವಂತ ಮಾಡಿದ್ದು ಹಾಗೂ ಹೈಕೋರ್ಟ್​ಗೆ ಎಲ್ಲ ಪ್ರಕರಣಗಳನ್ನು ವರ್ಗಾಯಿಸುವ ಅಥವಾ ಎಲ್ಲ ಎಫ್​ಐಆರ್​ಗಳನ್ನು ಒಟ್ಟುಗೂಡಿಸುವ ಅಧಿಕಾರ ಇಲ್ಲದಿದ್ದರೂ ಹೈಕೋರ್ಟ್​ಗೆ ಹೋಗುವಂತೆ ತಿಳಿಸಿದೆ.

  • The open letter by organisation 'Forum for Human Rights and Social Justice, J&K and Ladakh at Jammu' demands the roster of Justice Surya Kant be withdrawn till he attains superannuation and least be directed to withdraw the remarks and observations made by him during the hearing. pic.twitter.com/S3TLEtPWxo

    — ANI (@ANI) July 5, 2022 " class="align-text-top noRightClick twitterSection" data=" ">

ನೂಪುರ್ ಅವರ ಪ್ರಕರಣವನ್ನು ಬೇರೆಯದೇ ಮಾನದಂಡಗಳ ಪ್ರಕಾರ ವಿಚಾರಣೆ ನಡೆಸುತ್ತಿರುವುದು ಯಾಕೆಂಬುದು ಅರ್ಥವಾಗುತ್ತಿಲ್ಲ. ಸುಪ್ರೀಂಕೋರ್ಟ್​ನ ಈ ಕ್ರಮಕ್ಕೆ ಯಾವುದೇ ಮೆಚ್ಚುಗೆ ವ್ಯಕ್ತಪಡಿಸಲಾಗದು ಹಾಗೂ ನೆಲದ ಸರ್ವೋಚ್ಚ ನ್ಯಾಯಾಲಯದ ಪಾವಿತ್ರ್ಯಕ್ಕೆ ಈ ಕ್ರಮವು ಧಕ್ಕೆ ತರುವಂತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜುಲೈ 1 ರಂದು ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ನೂಪುರ್​ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಅವರ ಹಿಡಿತವಿಲ್ಲದ ಮಾತು ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ, ದೇಶದಲ್ಲಿ ಈಗ ಏನಾಗುತ್ತಿದೆಯೋ ಅದೆಕ್ಕೆಲ್ಲಾ ಅವರೊಬ್ಬರೇ ಹೊಣೆ ಎಂದು ಹೇಳಿತ್ತು.

ತನ್ನ ಹೇಳಿಕೆ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದುಗೂಡಿಸಿ ತನಿಖೆ ಮಾಡುವಂತೆ ಮಾಡಿಕೊಳ್ಳಲಾಗಿದ್ದ ಅವರ ಮನವಿಯನ್ನು ನಿರಾಕರಿಸಿದ್ದ ಪೀಠ, ಅವರಿಗೆ ಮಾತಿನ ಮೇಲೆ ಹಿಡಿತವಿಲ್ಲ. ಪ್ರಚಾರ ಮತ್ತು ರಾಜಕೀಯ ಅಜೆಂಡಾ ಇಟ್ಟುಕೊಂಡು ಸುದ್ದಿ ವಾಹಿನಿ ಕಾರ್ಯಕ್ರಮದಲ್ಲಿ ಸಡಿಲವಾದ ಮಾತುಗಳನ್ನಾಡುವ ಮೂಲಕ ದೇಶಕ್ಕೆಲ್ಲಾ ಬೆಂಕಿ ಹಚ್ಚಿದರು. ಅದರ ಜತೆಯಲ್ಲೇ, ತಾನು ಹತ್ತು ವರ್ಷ ವಕೀಲೆಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಪೀಠವು ಹೇಳಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.