ETV Bharat / bharat

ವಿದ್ಯುತ್​ ಸ್ಪರ್ಶಿಸಿ ಮೂವರು ಮಕ್ಕಳು ಸೇರಿ ಐವರ ದುರ್ಮರಣ.. ಒಬ್ಬರ ಪ್ರಾಣ ಉಳಿಸಲು ಹೋಗಿ ಸಾವು

author img

By

Published : Sep 2, 2021, 6:27 AM IST

ಒಬ್ಬರ ಪ್ರಾಣ ಇನ್ನೊಬ್ಬರು ಉಳಿಸಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ.

ghaziabad news
ghaziabad news

ಗಾಜಿಯಾಬಾದ್​(ಉತ್ತರ ಪ್ರದೇಶ): ಕಳೆದ ಕೆಲ ದಿನಗಳಿಂದ ನವದೆಹಲಿ, ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನೇಕರು ತೊಂದರೆಗೀಡಾಗಿದ್ದಾರೆ. ಇದರ ಮಧ್ಯೆ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಅದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಳೆಗಾಲದ ಸಮಯದಲ್ಲಿ ವಿದ್ಯುತ್​ ಪ್ರವಹಿಸುತ್ತಿದ್ದ ಕಂಬ ಮುಟ್ಟಿರುವ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದ್ದು, ಇದರ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ವಿದ್ಯುತ್​ ಸ್ಪರ್ಶಿಸಿ ಮೂವರು ಮಕ್ಕಳು ಸೇರಿ ಐವರ ದುರ್ಮರಣ

ಗಾಜಿಯಾಬಾದ್​ನ ರಾಕೇಶ್​ ಮಾರ್ಗ್​ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಅಂಗಡಿವೊಂದರ ಮುಂದಿನ ಶೆಡ್​ನ ಕಂಬವೊಂದರಲ್ಲಿ ವಿದ್ಯುತ್​ ಪ್ರವಹಿಸುತ್ತಿದ್ದ ಕಾರಣ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿರಿ: ಪೊಲೀಸರು ಕೇಸ್​ ದಾಖಲು ಮಾಡಿಕೊಳ್ಳದೇ ಇರುವುದು ಮಗಳ ಸಾವಿಗೆ ಕಾರಣ... ಪೋಷಕರ ಆರೋಪ

ವ್ಯಕ್ತಿಯೋರ್ವ ತನ್ನ ಹೆಗಲಿನ ಮೇಲೆ ಪುಟಾಣಿ ಮಗುವನ್ನ ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯುತ್​ ಕಂಬ ಹಿಡಿದಿರುವ ಕಾರಣ ಇಬ್ಬರು ಅಲ್ಲೇ ಸಾವನ್ನಪ್ಪಿದ್ದಾರೆ.

ಈ ವೇಳೆ, ಮತ್ತೋರ್ವ ಅವರ ರಕ್ಷಣೆ ಮಾಡಲು ತೆರಳಿದ್ದು, ಆತನು ಸಹ ವಿದ್ಯುತ್​ ಸ್ಪರ್ಶದಿಂದ ಪ್ರಾಣ ಬಿಟ್ಟಿದ್ದಾನೆ. ಇದಾದ ಬಳಿಕ ಓರ್ವ ಮಹಿಳೆ ಸೇರಿದಂತೆ ಮತ್ತಿಬ್ಬರು ವಿದ್ಯುತ್​ ಕಂಬ ಹಿಡಿದುಕೊಂಡಿದ್ದವರ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ವಿದ್ಯುತ್​ ಪ್ರವಾಹದಿಂದ ಅವರು ಕೂಡ ಸಾವನ್ನಪ್ಪಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.