ETV Bharat / bharat

ಜಾರ್ಖಂಡ್​ ಸಿಎಂ ಆಪ್ತನ ನಿವಾಸದ ಮೇಲೆ ಇಡಿ ದಾಳಿ: ಎರಡು AK 47 ರೈಫಲ್​​ ವಶಕ್ಕೆ

author img

By

Published : Aug 24, 2022, 3:12 PM IST

ಇಲ್ಲಿನ ಉದ್ಯಮಿ ಪ್ರೇಮ್ ಪ್ರಕಾಶ್​ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಎರಡು ಎಕೆ 47 ರೈಫಲ್ಸ್​ ವಶಕ್ಕೆ ಪಡೆದಿದ್ದಾರೆ.

ed raid Ranchi
ed raid Ranchi

ರಾಂಚಿ(ಜಾರ್ಖಂಡ್​): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್​​ ಆಪ್ತರು ಎಂದು ಹೇಳಲಾಗ್ತಿರುವ ಉದ್ಯಮಿ ಪ್ರೇಮ್​ ಪ್ರಕಾಶ್ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತು. ಈ ವೇಳೆ ಅಚ್ಚರಿ ಎಂಬಂತೆ, ಎರಡು ಎಕೆ 47 ರೈಫಲ್ಸ್‌ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

rifles recovered during ED raids in Jharkhand
ಉದ್ಯಮಿ ನಿವಾಸದಲ್ಲಿ ಎರಡು ಎಕೆ 47 ರೈಪಲ್ಸ್​​​

ರಾಜ್ಯದಲ್ಲಿ ನಡೆದಿರುವ 100 ಕೋಟಿ ರೂ ಮೌಲ್ಯದ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಪ್ರೇಮ್ ಪ್ರಕಾಶ್​ ಮನೆ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ಈ ದಾಳಿ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, 20 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಪಕ್ಕದ ರಾಜ್ಯಗಳಾಗಿರುವ ಬಿಹಾರ, ತಮಿಳುನಾಡು ಮತ್ತು ದೆಹಲಿ ಎನ್​​ಸಿಆರ್​​​ನಲ್ಲೂ ಪರಿಶೀಲನೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ED has recovered AK 47 from the premises of middleman Prem Prakash: Sources

    Raids are underway at multiple locations in Ranchi (Jharkhand) in an ongoing investigation in connection with illegal mining and extortion. pic.twitter.com/RFlIxcnOkN

    — ANI (@ANI) August 24, 2022 " class="align-text-top noRightClick twitterSection" data=" ">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.