ETV Bharat / bharat

ಭೂ ಹಂಚಿಕೆ ಪ್ರಕರಣ: ಇಡಿ ವಿಶೇಷ ನ್ಯಾಯಾಲಯದಿಂದ ಆಂಧ್ರ ಸಿಎಂಗೆ ನೋಟಿಸ್​!

author img

By

Published : Jan 9, 2021, 9:21 PM IST

ಅಕ್ರಮವಾಗಿ ಭೂ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಜಾರಿಗೊಂಡಿದೆ.

Jagan Mohan Reddy
Jagan Mohan Reddy

ವಿಜಯವಾಡ: ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ನ ಜಾರಿ ನಿರ್ದೇಶನಾಲಯ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿಗೆ ನೋಟಿಸ್ ಜಾರಿ ಮಾಡಿದೆ. ಜನವರಿ 11ರಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ತಳಿಸಲಾಗಿದೆ.

ಅರಬಿಂದೋ ಫಾರ್ಮ್​ ಹಾಗೂ ಹೆಟ್ರೋ ಔಷಧಿ ಭೂ ಹಂಚಿಕೆ ಪ್ರಕರಣದ ಚಾರ್ಜ್​ಶೀಟ್​ ಈ ಹಿಂದೆ ನಾಂಪಲ್ಲಿ ಮೆಟ್ರೋಪಾಲಿಟನ್​ ಸೆಷನ್ಸ್​ ಕೋರ್ಟ್​ಗೆ ಸಲ್ಲಿಸಲಾಗಿತ್ತು. ಈ ಪ್ರಕರಣ ಇದೀಗ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಂಡಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.

ಜಗನ್​ ಮೋಹನ್​ ರೆಡ್ಡಿ ಜತೆಗೆ ಸಂಸದ ವಿಜಯ್​ ಸಾಯಿ ರೆಡ್ಡಿ, ಹೆಟ್ರೋ ಡ್ರಗ್ಸ್ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ಅರಬಿಂದೋ ಫಾರ್ಮಾ ಎಂಡಿ ನಿತ್ಯಾನಂದ ರೆಡ್ಡಿ, ಪಿ.ವಿ.ರಾಮ್​ಪ್ರಸಾದ್ ರೆಡ್ಡಿ, ಟೈಡೆಂಟ್ ಲೈಫ್ ಸೈನ್ಸಸ್ ನಿರ್ದೇಶಕ ಚಂದ್ರ ರೆಡ್ಡಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಪಿ.ಆಚಾರ್ಯರಿಗೆ ಸಮನ್ಸ್ ಜಾರಿಗೊಳಿಸಿದೆ. 75 ಎಕರೆ ಜಮೀನು ಎಕರೆಗೆ 7 ಲಕ್ಷ ರೂ.ಗೆ ಮಂಜೂರು ಮಾಡಿದ್ದು, ಇದು ಸಮಿತಿಯ ನಿರ್ಧಾರಕ್ಕೆ ವಿರುದ್ಧವಾಗಿದೆ ಎನ್ನಲಾಗಿದೆ. 2004-2009ರ ಅವಧಿಯಲ್ಲಿ ವೈಎಸ್​ಆರ್​ ಸರ್ಕಾರ ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಈ ಪ್ರಕರಣ ನಡೆದಿದ್ದು, ಆ ವೇಳೆ ಸರ್ಕಾರದ ಬೆಲೆ ನಿರ್ಧಾರ ಸಮಿತಿ ನಿರ್ಧಾರಕ್ಕೆ ವಿರುದ್ಧವಾಗಿ ಭೂಮಿ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.