ETV Bharat / bharat

ನಕಲಿ ಲಸಿಕಾ ಪ್ರಕರಣದೊಂದಿಗೆ ಲಿಂಕ್​ ; ಕೋಲ್ಕತ್ತಾದ 10ಕಡೆ ಇಡಿ ದಾಳಿ

author img

By

Published : Sep 1, 2021, 1:19 PM IST

ಎನ್​​​​ಪೋರ್ಸ್​​ಮೆಂಟ್​ ಡೈರಕ್ಟರೇಟ್​​​​​ ಅಂದರೆ ಜಾರಿ ನಿರ್ದೇಶನಾಲಯ ಇಂದು ಕೋಲ್ಕತ್ತಾದ 10 ಕಡೆ ದಿಢೀರ್​ ದಾಳಿ ನಡೆಸಿ, ಮಹತ್ವದ ಕಡತಗಳನ್ನ ತಲಾಶ್​ ಮಾಡುತ್ತಿದೆ. ನಕಲಿ ಲಸಿಕೆ ನೀಡಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಿಂಕ್​ ಹೊಂದಿರುವವರ ಮೇಲೆ ಈ ದಾಳಿ ನಡೆದಿದೆ.

ed-conducts-raids-across-10-locations-in-kolkata-
ed-conducts-raids-across-10-locations-in-kolkata-

ಕೋಲ್ಕತ್ತಾ: ಜಾರಿ ನಿರ್ದೇಶನಾಲಯ (ಇಡಿ) ಇಂದು ಕೋಲ್ಕತ್ತಾದ 10 ಕಡೆ ದಾಳಿ ನಡೆಸಿ ಹಲವರ ಬೆವರಿಳಿಸಿದೆ. ನಕಲಿ ಲಸಿಕೆ ನೀಡಿದ ಪ್ರಕರಣದಲ್ಲಿ ಲಿಂಕ್​ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ಈ ದಾಳಿಯನ್ನ ಇಡಿ ಅಧಿಕಾರಿಗಳು ಸಹ ದೃಢಪಡಿಸಿದ್ದಾರೆ. ಈ ದಾಳಿಗೂ ಮೊದಲು ದೇಬಂಜನ್​ ದೇಬ್​ ಎಂಬ ವ್ಯಕ್ತಿಯನ್ನ ಎಸ್​​​ಐಟಿ ಪೊಲೀಸರು ಬಂಧಿಸಿದ್ದರು. ದೇಬ್​​​​​​​​​​​ ನಕಲಿ ಐಎಎಸ್​ ಆಫೀಸರ್​ ಸೋಗಿನಲ್ಲಿ ನಕಲಿ ವ್ಯಾಕ್ಸಿನೇಷನ್​ ಡೈವ್​​ ಆಯೋಜನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ವಿಶೇಷ ತನಿಖಾ ದಳ ಜುಲೈ 3ರರಂದು ದೇಬಂಜನ್​ ದಾಸ್​​​​ ಅವರ ಆಫೀಸ್​​​ ಮೇಲೆ ದಾಳಿ ಮಾಡಿತ್ತು. ಈ ವೇಳೆ ನಕಲಿ ಲಸಿಕೆಗೆ ಸಂಬಂಧಿಸಿದಂತೆ ಎಲ್ಲ ಪರಿಕರ,ಸ್ಲಿಪ್​​​, ನಕಲಿ ಟೆಂಡರ್​​​​ ದಸ್ತಾವೇಜುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಜೂನ್​ 25 ರಂದು ನಕಲಿ ವ್ಯಾಕ್ಸಿನೇಷನ್​ ಡೈವ್​ ಸಂಬಂಧ ಪಟ್ಟಂತೆ ವಿಶೇಷ ತನಿಖಾ ದಳವನ್ನು ರಚನೆ ಮಾಡಲಾಗಿತ್ತು. ಟಿಎಂಸಿ ಎಂಪಿ ಮಿಮಿ ಚಕ್ರಬರ್ತಿ ಈ ಬಗ್ಗೆ ಆರೋಪ ಮಾಡಿದ್ದರು. ಅಷ್ಟೇ ಅಲ್ಲ ಜೂನ್​​ 26ರಂದು ಪಶ್ಚಿಮ ಬಂಗಾಳ ಸರ್ಕಾರ ಈ ಸಂಬಂಧ ನಾಲ್ಕು ಸದಸ್ಯರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಸಹ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.