ETV Bharat / bharat

'ಅಮರ್ತ್ಯ ಸೇನ್​ ನಿಧನ ಸುದ್ದಿ ಸುಳ್ಳು, ಅವರ ಆರೋಗ್ಯ ಉತ್ತಮವಾಗಿದೆ': ಈಟಿವಿ ಭಾರತ್‌ಗೆ ಪುತ್ರಿ ನಂದನಾ ಸ್ಪಷ್ಟನೆ

author img

By ETV Bharat Karnataka Team

Published : Oct 10, 2023, 6:17 PM IST

Updated : Oct 10, 2023, 6:26 PM IST

ಹಿರಿಯ ಅರ್ಥಶಾಸ್ತ್ರಜ್ಞ ಹಾಗು ನೊಬೆಲ್​ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್​ ನಿಧನರಾಗಿದ್ದಾರೆ ಎಂಬ ವದಂತಿ ಇಂದು ಹರಿದಾಡಿತ್ತು. ಇದರ ಬೆನ್ನಲ್ಲೇ ಅವರ ಪುತ್ರಿ ನೀಡಿದ ಹೇಳಿಕೆಯಿಂದ ಇದು ಸುಳ್ಳೆಂದು ಸಾಬೀತಾಗಿದೆ.

ಅಮೃತ್​​ ಸೇನ್​ ನಿಧನ ವದಂತಿ
ಅಮೃತ್​​ ಸೇನ್​ ನಿಧನ ವದಂತಿ

ಕೋಲ್ಕತ್ತಾ: ಭಾರತದ ಹಿರಿಯ ಅರ್ಥಶಾಸ್ತ್ರಜ್ಞ, ನೊಬೆಲ್​ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್​ ಅವರು ನಿಧನರಾದ ವದಂತಿ ಇಂದು (ಮಂಗಳವಾರ) ಹರಡಿತ್ತು. 2023 ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್​ ಪ್ರಶಸ್ತಿ ಪಡೆದ ಕ್ಲೌಡಿಯಾ ಗೋಲ್ಡಿನ್ ಅವರ ಹೆಸರಿನ ನಕಲಿ ಖಾತೆಯಲ್ಲಿ ಈ ಬಗ್ಗೆ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಅಮರ್ತ್ಯ ಸೇನ್​ ಅವರ ಪುತ್ರಿ ನಂದನಾ ಸ್ಪಷ್ಟನೆ ನೀಡಿದ್ದು, "ಇದೊಂದು ಸುಳ್ಳು ಸುದ್ದಿ. ಸೇನ್​ ಅವರು ಜೀವಂತವಾಗಿದ್ದಾರೆ" ಎಂದು ತಿಳಿಸಿದರು.

ಈಟಿವಿ ಭಾರತ್​ ಅಮರ್ತ್ಯ ಸೇನ್​ ಅವರ ಪುತ್ರಿಯನ್ನು ಸಂಪರ್ಕಿಸಿದ್ದು, "ತಂದೆ ಜೀವಂತವಾಗಿದ್ದಾರೆ. ಆರೋಗ್ಯವೂ ಉತ್ತಮವಾಗಿದೆ. ಸಾವಿನ ಸುದ್ದಿ ಸುಳ್ಳು" ಎಂದು ಅವರು ಹೇಳಿದರು.

  • Friends, thanks for your concern but it’s fake news: Baba is totally fine. We just spent a wonderful week together w/ family in Cambridge—his hug as strong as always last night when we said bye! He is teaching 2 courses a week at Harvard, working on his gender book—busy as ever! pic.twitter.com/Fd84KVj1AT

    — Nandana Sen (@nandanadevsen) October 10, 2023 " class="align-text-top noRightClick twitterSection" data=" ">

ನಕಲಿ ಖಾತೆಯಲ್ಲಿ ಸಾವಿನ ಸುದ್ದಿ: ಅರ್ಥಶಾಸ್ತ್ರಜ್ಞೆ ಕ್ಲೌಡಿಯಾ ಗೋಲ್ಡಿನ್ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆಯಲಾಗಿದ್ದು, ಅದರಲ್ಲಿ ಅಮರ್ತ್ಯ​ ಸೇನ್​ ಮೃತಪಟ್ಟಿದ್ದಾಗಿ ಪೋಸ್ಟ್​ ಮಾಡಲಾಗಿತ್ತು. 'ಇದೊಂದು ಬೇಸರದ ಸುದ್ದಿ. ನನ್ನ ಪ್ರೀತಿಯ ಪ್ರೊಫೆಸರ್ ಅಮರ್ತ್ಯ ಸೇನ್' ಅಗಲಿದ್ದಾರೆ ಎಂದು ಅದರಲ್ಲಿ ಬರೆಯಲಾಗಿತ್ತು. ತಕ್ಷಣವೇ ಎಲ್ಲೆಡೆ ಗಾಳಿ ಸುದ್ದಿ ಹರಿದಾಡಿತ್ತು. ಹಿರಿಯ ಅರ್ಥಶಾಸ್ತ್ರಜ್ಞರು ಸಾವನ್ನಪ್ಪಿದ್ದಾಗಿ ಹಲವು ಮಾಧ್ಯಮಗಳು ಕೂಡ ವರದಿ ಮಾಡಿದ್ದವು.

ವದಂತಿ ಹರಡುತ್ತಿದ್ದಂತೆ ಅಮರ್ತ್ಯ​ ಸೇನ್ ಸಾವನ್ನಪ್ಪಿದ್ದಾಗಿ ಪ್ರಕಟಿಸಲಾಗಿದ್ದ ಖಾತೆಯಲ್ಲೇ, 'ಇದೊಂದು ನಕಲಿ ಖಾತೆ. ಇಟಲಿಯ ಪತ್ರಕರ್ತ ಟೊಮಾಸೊ ಡೆಬೆನೆಡೆಟ್ಟಿ ಅವರು ಈ ಖಾತೆ ಆರಂಭಿಸಿದ್ದಾರೆ' ಎಂದು ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್​ಗೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಬೆಂಜಮಿನ್ ಜೇಮ್ಸ್ ಗೋಲ್ಡ್ ಸ್ಮಿತ್ ಅವರು ಪ್ರತಿಕ್ರಿಯಿಸಿದ್ದು, 'ಸೇನ್ ಜೀವಂತವಾಗಿದ್ದಾರೆ. ಅವರೊಂದಿಗೆ ನಾನು ಇಂದು ಮಾತನಾಡಿದ್ದೇನೆ. ಇದೆಲ್ಲಾ ಏನು' ಎಂದು ಅವರು ಪ್ರಶ್ನಿಸಿದ್ದಾರೆ.

ಎಕ್ಸ್​ನಲ್ಲೂ ಸ್ಪಷ್ಟನೆ: ಈ ಬಗ್ಗೆ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಕೂಡ ಸ್ಪಷ್ಟನೆ ನೀಡಿರುವ ಪುತ್ರಿ ನಂದನಾ ಸೇನ್​ ಅವರು, ಸ್ನೇಹಿತರೇ, ನಿಮ್ಮ ಕಾಳಜಿಗೆ ಧನ್ಯವಾದಗಳು. ಅಮರ್ತ್ಯ ಸೇನ್​ ಅವರು ನಿಧನರಾಗಿದ್ದಾರೆ ಎಂಬುದು ಸುಳ್ಳು ಸುದ್ದಿ. ಬಾಬಾ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ನಾವು ಕುಟುಂಬದೊಂದಿಗೆ ಅದ್ಭುತ ದಿನಗಳನ್ನು ಕಳೆಯುತ್ತಿದ್ದೇವೆ. ಅವರು ಹಾರ್ವರ್ಡ್‌ನಲ್ಲಿ ವಾರಕ್ಕೆ 2 ಕೋರ್ಸ್‌ಗಳನ್ನು ಕಲಿಸುತ್ತಿದ್ದಾರೆ. ಅವರ ಬರೆಯುತ್ತಿರುವ ಪುಸ್ತಕದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

1933 ರಲ್ಲಿ ಜನಿಸಿದ ಅಮರ್ತ್ಯ ಸೇನ್ ಅವರು ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾಗಿದ್ದು, ಅಭಿವೃದ್ಧಿ ಸಿದ್ಧಾಂತ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಅವರ ಅದ್ಭುತ ಕೆಲಸದಿಂದಾಗಿ ಅವರು ಜಾಗತಿಕವಾಗಿ ಹೆಸರುವಾಸಿಯಾಗಿದ್ದಾರೆ. ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 1998 ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ಇದನ್ನೂ ಓದಿ: Nobel prize in economics: ಮಹಿಳಾ ಗಳಿಕೆ ಬಗ್ಗೆ ಸಂಶೋಧನೆ.. ಕ್ಲೌಡಿಯಾ ಗೋಲ್ಡಿನ್​ಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

Last Updated :Oct 10, 2023, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.