ETV Bharat / bharat

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: 'ರೈತಬಂಧು' ಆರ್ಥಿಕ ನೆರವು ಬಿಡುಗಡೆ ಅನುಮತಿ ಹಿಂಪಡೆದ ಚುನಾವಣಾ ಆಯೋಗ

author img

By ETV Bharat Karnataka Team

Published : Nov 27, 2023, 9:28 PM IST

ಚುನಾವಣೆ ನೀತಿ ಸಂಹಿತೆ ಉಲ್ಲಂಘೆನಯಾದ ಪರಿಣಾಮ ರೈತಬಂಧು ಆರ್ಥಿಕ ನೆರವು ಬಿಡುಗಡೆಗೆ ನೀಡಿದ್ದ ಅನುಮತಿಯನ್ನು ಚುನಾವಣಾ ಆಯೋಗ ಹಿಂಪಡೆದಿದೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ

ಹೈದರಾಬಾದ್: ತೆಲಂಗಾಣ ಚುನಾವಣೆಗೆ ಹೊಸ್ತಿಲಲ್ಲಿ ಇರುವಾಗಲೇ ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. 'ರೈತುಬಂಧು' ಯೋಜನೆಯಡಿ ರೈತರಿಗೆ ನೀಡುತ್ತಿದ್ದ ಆರ್ಥಿಕ ನೆರವು ವಿತರಣೆಗೆ ನೀಡಿದ್ದ ಅನುಮತಿ ಚುನಾವಣಾ ಆಯೋಗ ಹಿಂಪಡೆದಿದೆ.

ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ. ಈ ತಿಂಗಳ 28ರ ಮೊದಲು ರೈತಬಂಧು ವಿತರಿಸಲು ತೆಲಂಗಾಣ ಸರ್ಕಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿತ್ತು. ಆದರೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ಈ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ರೈತ ಬಂಧು ಯೋಜನೆಯ ಪ್ರಸ್ತಾಪ ಮಾಡಬಾರದು ಎಂದು ಚುನಾವಣಾ ಆಯೋಗ ಷರತ್ತು ವಿಧಿಸಿತ್ತು. ಆದರೆ, ಸಚಿವ ಹರೀಶ್ ರಾವ್ ಅವರು ಚುನಾವಣಾ ಪ್ರಚಾರದ ವೇಳೆ ರೈತಬಂಧು ಕುರಿತು ಪ್ರಸ್ತಾಪ ಮಾಡಿದ್ದು, ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ ಆಯೋಗ ಅನುಮತಿ ಹಿಂಪಡೆದಿದೆ.

ಇದಿರಂದ ಬಿಆರ್​ ಎಸ್ ಪಕ್ಷಕ್ಕೆ ಪ್ರಬಲ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ 2018ರ ಚುನಾವಣೆಗೂ ಮುನ್ನ ರೈತಬಂಧು ಯೋಜನೆಯಡಿ ರೈತರ ಖಾತೆಗೆ ಹಣ ಜಮೆ ಮಾಡಲಾಗಿತ್ತು. ಆ ನಂತರ ಕೆಸಿಆರ್​ ನೇತೃತ್ವದ ಬಿಆರ್​ಎಸ್​ ಪಕ್ಷ ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣೆ ಹಿಡಿದಿತ್ತು. ಈ ಬಾರಿಯೂ ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಅಂದರೆ ನವೆಂಬರ್ 28 ರಂದು ರಾಜ್ಯಾದ್ಯಂತ 70 ಲಕ್ಷ ರೈತರ ಖಾತೆಗಳಿಗೆ ರೈತಬಂಧು ಹಣವನ್ನು ಜಮೆ ಮಾಡಲು ಚುನಾವಣಾ ಆಯೋಗ ಅನಮತಿ ನೀಡಿತ್ತು. ರೈತಬಂಧು ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ವಾರ್ಷಿಕ 10 ಸಾವಿರವನ್ನು ನೀಡಲಾಗುತ್ತದೆ.

ರೈತಬಂಧು ನಿಧಿ ಬಗ್ಗೆ ರೇವಂತ್ ರೆಡ್ಡಿ ಹೇಳಿಕೆ: ಹಣಕಾಸು ಸಚಿವ ಹರೀಶ್ ರಾವ್ ಅವರ ಹೇಳಿಕೆಯಿಂದಾಗಿ ಚುನಾವಣಾ ಆಯೋಗ ರೈತಬಂಧು ಅನುಮತಿ ಹಿಂಪಡೆದಿದೆ ಎಂದು ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಹೇಳಿದ್ದಾರೆ. ಕೆಸಿಆರ್ ಮತ್ತು ಸಚಿವ ಹರೀಶ್ ಅವರಿಗೆ ನಿಜವಾಗಿಯೂ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇಲ್ಲ ಎಂದು ಟೀಕಿಸಿದರು. ಬಿಆರ್‌ಎಸ್ ಕೇವಲ ರೈತ ಬಂಧುಗಳಿಂದ ಮತ ಪಡೆಯುವ ಉದ್ದೇಶದಲ್ಲಿದೆ ಎಂದು ಆರೋಪಿಸಿದರು. ರೈತಬಂಧು ಹಿಂಪಡೆದಿದಕ್ಕೆ ರೈತರು ಯಾರೂ ಆತಂಕಕ್ಕೆ ಒಳಗಾಗಬೇಡಿ. ಇನ್ನು ಹತ್ತು ದಿನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. 15 ಸಾವಿರ ರೂ ರೈತ ಭರವಸೆ ನೀಡಲಾಗುವುದು ಎಂದು ಭರವಸೆ ನೀಡಿದರು.

ರೈತ ಬಂಧು ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಾಟಕವಾಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಿಶನ್ ರೆಡ್ಡಿ ಆರೋಪಿಸಿದ್ದಾರೆ. ರೈತರಿಗೆ ಬಂಡವಾಳ ಹೂಡಿಕೆಯಲ್ಲಿ ಬಿಆರ್‌ಎಸ್‌ಗೆ ಪ್ರಾಮಾಣಿಕತೆ ಇಲ್ಲ ಎಂದ ಅವರು, ಅನ್ನದಾತರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಚುನಾವಣೆ ಅಧಿಸೂಚನೆಗೂ ಮುನ್ನ ರೈತ ಬಂಧು ಏಕೆ ನೀಡಲಿಲ್ಲ? ಬಿಆರ್ ಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಎಂದು ಟೀಕಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ: ಪ್ರಿಯಾಂಕಾ ವಾದ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.