ETV Bharat / bharat

ಸಮುದ್ರ, ವಿಮಾನದ ಮೂಲಕ ಚಿನ್ನ ಕಳ್ಳ ಸಾಗಣೆ.. 12 ಕೋಟಿ ಮೌಲ್ಯದ ಬಂಗಾರ ವಶ!

author img

By

Published : Aug 2, 2023, 11:30 AM IST

ತಮಿಳುನಾಡಿನ ಚೆನ್ನೈನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು 3 ವಿವಿಧ ಕಾರ್ಯಾಚರಣೆಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದು, ಕಳ್ಳಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಗಂಭೀರ ತನಿಖೆ ನಡೆಸುತ್ತಿದೆ.

DRI Foils Gold Smuggling Attempts  Gold Smuggling Attempts Worth Rs 12 Crore  Gold Worth Rs 12 Crore in Three Operations  ವಿಮಾನದ ಮೂಲಕ ಚಿನ್ನ ಕಳ್ಳಸಾಗಣಿಕೆ  12 ಕೋಟಿ ಮೌಲ್ಯದ ಚಿನ್ನ ವಶ  12 ಕೋಟಿ ಮೌಲ್ಯದ ಚಿನ್ನ ವಶ  ಚೆನ್ನೈನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್  ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು  ಡಿಆರ್​ಐ ಅಧಿಕಾರಿಗಳು ಚಿನ್ನ ಕಳ್ಳ ಸಾಗಾಣಿಕೆ  ಕಸ್ಟಮ್ಸ್ ಇಲಾಖೆ ಮತ್ತು ಕಂದಾಯ ಗುಪ್ತಚರ ವಿಭಾಗ  ದೋಣಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು
ಸಮುದ್ರ, ವಿಮಾನದ ಮೂಲಕ ಚಿನ್ನ ಕಳ್ಳಸಾಗಣಿಕೆ

ಚೆನ್ನೈ, ತಮಿಳುನಾಡು: ಶ್ರೀಲಂಕಾದಿಂದ ರಾಮನಾಥಪುರದ ಉತ್ತರ ಕರಾವಳಿಯ ತಂಗಚಿಮಡಂ ಮೂಲಕ ಮೀನುಗಾರಿಕಾ ದೋಣಿಗಳಲ್ಲಿ ವಿದೇಶಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಡಿಆರ್‌ಐ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಇದನ್ನು ಆಧರಿಸಿ ತೀವ್ರ ನಿಗಾ ವಹಿಸಿದಾಗ ತಂಗಚಿಮಡಂನ ಉತ್ತರ ಕರಾವಳಿ ಬಳಿ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಕಳ್ಳಸಾಗಣಿಕೆಯ ವಿಷಯ ಬೆಳಕಿಗೆ ಬಂದಿದೆ.

DRI Foils Gold Smuggling Attempts  Gold Smuggling Attempts Worth Rs 12 Crore  Gold Worth Rs 12 Crore in Three Operations  ವಿಮಾನದ ಮೂಲಕ ಚಿನ್ನ ಕಳ್ಳಸಾಗಣಿಕೆ  12 ಕೋಟಿ ಮೌಲ್ಯದ ಚಿನ್ನ ವಶ  12 ಕೋಟಿ ಮೌಲ್ಯದ ಚಿನ್ನ ವಶ  ಚೆನ್ನೈನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್  ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು  ಡಿಆರ್​ಐ ಅಧಿಕಾರಿಗಳು ಚಿನ್ನ ಕಳ್ಳ ಸಾಗಾಣಿಕೆ  ಕಸ್ಟಮ್ಸ್ ಇಲಾಖೆ ಮತ್ತು ಕಂದಾಯ ಗುಪ್ತಚರ ವಿಭಾಗ
ದೋಣಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು

ಬಂಧಿತರಿಂದ 5.37 ಕೋಟಿ ಮೌಲ್ಯದ 9.063 ಕೆಜಿ ತೂಕದ ವಿದೇಶಿ ಕಳ್ಳಸಾಗಣೆ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಕಳೆದ ಜುಲೈ 31 ರಂದು ಶ್ರೀಲಂಕಾದಿಂದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಬಳಸಲಾಗಿದ್ದ ಎರಡು ದೋಣಿಗಳ ಜೊತೆಗೆ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ನಾಲ್ಕು ಜನರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಆರ್​ಐ ಮೂಲಗಳು ತಿಳಿಸಿವೆ..

ಜುಲೈ 31 ರಂದು ನಡೆದ ಮತ್ತೊಂದು ಪ್ರಕರಣದಲ್ಲಿ ಡಿಆರ್​ಐ ಅಧಿಕಾರಿಗಳು ಚಿನ್ನ ಕಳ್ಳ ಸಾಗಣೆ ಆರೋಪದಡಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಡಿಆರ್‌ಐ ಅಧಿಕಾರಿಗಳು ಶಾರ್ಜಾದಿಂದ ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನವನ್ನು ಶೋಧಿಸಿದರು. ಈ ವೇಳೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಶೋಧಿಸಿದಾಗ ಸುಮಾರು 3.17 ಕೋಟಿ ರೂಪಾಯಿ ಮೌಲ್ಯದ 5.17 ಕೆಜಿ ವಿದೇಶಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರು ಪ್ರಯಾಣಿಕರನ್ನು ಬಂಧಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

DRI Foils Gold Smuggling Attempts  Gold Smuggling Attempts Worth Rs 12 Crore  Gold Worth Rs 12 Crore in Three Operations  ವಿಮಾನದ ಮೂಲಕ ಚಿನ್ನ ಕಳ್ಳಸಾಗಣಿಕೆ  12 ಕೋಟಿ ಮೌಲ್ಯದ ಚಿನ್ನ ವಶ  12 ಕೋಟಿ ಮೌಲ್ಯದ ಚಿನ್ನ ವಶ  ಚೆನ್ನೈನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್  ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು  ಡಿಆರ್​ಐ ಅಧಿಕಾರಿಗಳು ಚಿನ್ನ ಕಳ್ಳ ಸಾಗಾಣಿಕೆ  ಕಸ್ಟಮ್ಸ್ ಇಲಾಖೆ ಮತ್ತು ಕಂದಾಯ ಗುಪ್ತಚರ ವಿಭಾಗ
ಬಂಗಾರ ವಶಕ್ಕೆ ಪಡೆದ ಅಧಿಕಾರಿಗಳು

ನಂತರ ಮೂರನೇ ಕಾರ್ಯಾಚರಣೆಯಲ್ಲಿ, DRI ಅಧಿಕಾರಿಗಳ ತಂಡವು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಆರು ಶಂಕಿತರನ್ನು ಬಂಧಿಸಿತು. ಬಳಿಕ ಅವರನ್ನು ಶೋಧಿಸಿತು. ಆಗ ಅವರಿಂದ ಪೇಸ್ಟ್ ರೂಪದಲ್ಲಿ ಸುಮಾರು 3.8 ಕೋಟಿ ರೂಪಾಯಿ ಮೌಲ್ಯದ 6.275 ಕೆಜಿ ಚಿನ್ನ ಪತ್ತೆಯಾಗಿತ್ತು. ಬಳಿಕ ಅವರ ಬಳಿಯಿದ್ದ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

DRI Foils Gold Smuggling Attempts  Gold Smuggling Attempts Worth Rs 12 Crore  Gold Worth Rs 12 Crore in Three Operations  ವಿಮಾನದ ಮೂಲಕ ಚಿನ್ನ ಕಳ್ಳಸಾಗಣಿಕೆ  12 ಕೋಟಿ ಮೌಲ್ಯದ ಚಿನ್ನ ವಶ  12 ಕೋಟಿ ಮೌಲ್ಯದ ಚಿನ್ನ ವಶ  ಚೆನ್ನೈನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್  ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು  ಡಿಆರ್​ಐ ಅಧಿಕಾರಿಗಳು ಚಿನ್ನ ಕಳ್ಳ ಸಾಗಾಣಿಕೆ  ಕಸ್ಟಮ್ಸ್ ಇಲಾಖೆ ಮತ್ತು ಕಂದಾಯ ಗುಪ್ತಚರ ವಿಭಾಗ
ದೋಣಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು

ಕಸ್ಟಮ್ಸ್ ಇಲಾಖೆ ಮತ್ತು ಕಂದಾಯ ಗುಪ್ತಚರ ವಿಭಾಗದ ಅಧಿಕಾರಿಗಳು ಭಾರತದ ವಿವಿಧ ಭಾಗಗಳಲ್ಲಿ ಅಕ್ರಮ ಚಿನ್ನದ ಸಾಗಣೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ. ತಮಿಳುನಾಡಿನಲ್ಲಿ ಚಿನ್ನದ ಕಳ್ಳಸಾಗಣೆ ಎದುರಿಸಲು DRI ಯ ಅವಿರತ ಪ್ರಯತ್ನಗಳು ಈ ವರ್ಷದ ಆರಂಭದಿಂದ 29 ಪ್ರಕರಣಗಳಲ್ಲಿ 97 ಕೋಟಿ ಮೌಲ್ಯದ ಅಂದಾಜು 163 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲು ಕಾರಣವಾಗಿವೆ. ಈ ಕಳ್ಳಸಾಗಣೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 43 ಜನರನ್ನು ಬಂಧಿಸಲಾಗಿದೆ.

ಓದಿ: ಕ್ಯಾಬ್​ನಲ್ಲಿ ಮಾತನಾಡುವಾಗ ಎಚ್ಚರ: ಪರ್ಸನಲ್ ವಿಚಾರ ಮಾತನಾಡಿ ₹22 ಲಕ್ಷ, ಮುಕ್ಕಾಲು ಕೆಜಿ ಚಿನ್ನಾಭರಣ ಕಳೆದುಕೊಂಡ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.