ETV Bharat / bharat

ಹುಕ್ಕಾ ಬಾರ್​ಗೆ ಆಹ್ವಾನಿಸಿದ ಇನ್​ಸ್ಟಾಗ್ರಾಂ ಸ್ನೇಹಿತ : ವೈದ್ಯನ ಅಪ್ರಾಪ್ತ ಮಗಳ ಮೇಲೆ ಗ್ಯಾಂಗ್​ ರೇಪ್​!

author img

By

Published : Mar 5, 2023, 9:18 PM IST

ಹುಕ್ಕಾ ಬಾರ್​ಗೆ ಆಹ್ವಾನಿಸಿದ ಇನ್​ಸ್ಟಾಗ್ರಾಂ ಸ್ನೇಹಿತ - ಇನ್​ಸ್ಟಾಗ್ರಾಮ್​ ಸ್ನೇಹಿತ ಸೇರಿ 8 ಜನರಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ - ಉತ್ತರ ಪ್ರದೇಶದ ಕಾನ್ಪುರದಲ್ಲಿ ಘಟನೆ

doctors-minor-daughter-gang-raped-in-ups-kanpur
ಹುಕ್ಕಾ ಬಾರ್​ಗೆ ಆಹ್ವಾನಿಸಿದ ಇನ್​ಸ್ಟಾಗ್ರಾಂ ಸ್ನೇಹಿತ : ವೈದ್ಯರ ಅಪ್ರಾಪ್ತ ಮಗಳ ಮೇಲೆ ಗ್ಯಾಂಗ್​ ರೇಪ್​

ಕಾನ್ಪುರ (ಉತ್ತರಪ್ರದೇಶ): ವೈದ್ಯರೊಬ್ಬರ ಅಪ್ರಾಪ್ತ ಮಗಳ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಕಾನ್ಪುರದ ಬರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಹುಕ್ಕಾ ಬಾರ್‌ನಲ್ಲಿ ನಡೆದಿದೆ. ಕಳೆದ ಶುಕ್ರವಾದ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬಾಲಕಿಯ ತಂದೆ ಎಂಟು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.

ಇಲ್ಲಿನ ಬರ್ರಾ ನಿವಾಸಿಯಾಗಿರುವ ಇನ್‌ಸ್ಟಾಗ್ರಾಮ್ ಸ್ನೇಹಿತ ತನ್ನ ಮಗಳನ್ನು ಹುಕ್ಕಾ ಬಾರ್‌ಗೆ ಆಹ್ವಾನಿಸಿದ್ದನು. ಬಾರ್​ನಲ್ಲಿ ಆಕೆಯ ಸ್ನೇಹಿತರು ಆಕೆಗೆ ನಿದ್ರೆ ಮಾತ್ರೆ ಹಾಕಿರುವ ತಂಪು ಪಾನೀಯವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ. ಈಕೆ ಹಲವು ಬಾರಿ ನಿರಾಕರಿಸಿದರೂ ಆಕೆಯ ಸ್ನೇಹಿತರು ಕುಡಿಯುವಂತೆ ಒತ್ತಾಯಿಸಿದ್ದರು. ನಂತರ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಈ ವೇಳೆ ಆಕೆಯ ಸ್ನೇಹಿತ ಹಾಗೂ ಮತ್ತು ಆತನ ಗೆಳೆಯರು ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಂದೆ ಆರೋಪಿಸಿದ್ದಾರೆ.

ಈ ವೇಳೆ ಬಾಲಕಿಯು ಪ್ರತಿರೋಧ ವ್ಯಕ್ತಪಡಿಸಿದ್ದು, ಆಗ ಯುವಕರು ಆಕೆಯ ಕೆನ್ನೆ ಮತ್ತು ಹಣೆಯ ಮೇಲೆ ಗಾಯಗೊಳಿಸಿದ್ದಾರೆ. ಬಳಿಕ ಬಾಲಕಿ ಹೇಗೋ ಅವರ ಕೈಯಿಂದ ತಪ್ಪಿಸಿಕೊಂಡು ತನ್ನ ಮನೆ ಆಗಮಿಸಿದ್ದಾಳೆ. ಆದ ಘಟನೆ ಬಗ್ಗೆ ತನ್ನ ತಂದೆಯಲ್ಲಿ ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ಆರೋಪಿ ಇನ್‌ಸ್ಟಾಗ್ರಾಮ್ ಸ್ನೇಹಿತ ನನ್ನ ಅಶ್ಲೀಲ ವಿಡಿಯೋ ಸೆರೆ ಹಿಡಿದು ಕೆಲವು ದಿನಗಳಿಂದ ಬ್ಲಾಕ್‌ಮೇಲ್ ಮಾಡುತ್ತಿದ್ದ. ಜೊತೆಗೆ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ತನ್ನ ತಂದೆ ಬಳಿ ಹೇಳಿದ್ದಾಳೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ದಕ್ಷಿಣ ಡಿಸಿಪಿ ಸಲ್ಮಾನ್​ ತಾಜ್​ ಪಾಟೀಲ್​, ಆರೋಪಿಗಳ ವಿರುದ್ಧ ಅತ್ಯಾಚಾರ, ಹಲ್ಲೆ, ಪೋಕ್ಸೋ ಕಾಯ್ದೆ, ಬೆದರಿಕೆ, ಮಾದಕ ದ್ರವ್ಯ ನೀಡಿರುವುದು ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಮಗಳ ಮೇಲೆ ತಂದೆ ಅತ್ಯಾಚಾರ: ತನ್ನ 18 ವರ್ಷದ ಮಗಳ ಮೇಲೆ ನಿರಂತರ ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹರಿಯಾಣ ಪೊಲೀಸರು ಬಂಧಿಸಿದ್ದರು. 12ನೇ ತರಗತಿಯ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಕ್ಕೆ ಸಂತ್ರಸ್ತೆ ತೆರಳುತ್ತಿದ್ದ ಸಂತ್ರಸ್ತೆ ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ಪಾಪಿ ತಂದೆ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಬಾಲಕಿಯ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

''ನನ್ನ ತಂದೆ ಕಳೆದ ಮೂರು ವರ್ಷಗಳಿಂದ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದರು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೈ, ಕಾಲುಗಳನ್ನು ಕತ್ತರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಷಯ ನನ್ನ ತಾಯಿಗೂ ಗೊತ್ತಾಗಿದ್ದರೂ ತಂದೆಗೆ ಬೆಂಬಲ ನೀಡುತ್ತಿದ್ದಳು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಳು.

ಇದನ್ನೂ ಓದಿ : ಯೂಟ್ಯೂಬ್​ ನೋಡಿ ಹೆರಿಗೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿನಿ: ಮಗು ಸಾವು, ತಾಯಿ ಪ್ರಾಣಕ್ಕೂ ಕುತ್ತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.