ETV Bharat / bharat

ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ, ಮನೆಯಿಂದ ಹೊರದಬ್ಬಿದ ಆರೋಪ .. ವೈದ್ಯನ ವಿರುದ್ಧ ಪತ್ನಿಯಿಂದಲೇ ದೂರು

author img

By

Published : Jan 2, 2023, 6:48 PM IST

ಪತ್ನಿಯ ಮೇಲೆ ಪತಿ ದೌರ್ಜನ್ಯ ಆರೋಪ- ಮಹಾರಾಷ್ಟ್ರದಲ್ಲಿ ಪತಿ ವಿರುದ್ಧವೇ ಪತ್ನಿ ಕೇಸ್​- ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಆರೋಪದಡಿ ವೈದ್ಯ ಸೇರಿ ಕುಟುಂಬದ ವಿರುದ್ಧ ದೂರು

unnatural sex by doctor with wife
ಪತ್ನಿಯ ಮೇಲೆ ಪತಿ ದೌರ್ಜನ್ಯ

ಬೀಡ್(ಮಹಾರಾಷ್ಟ್ರ): ಕಟ್ಟಿಕೊಂಡ ಪತ್ನಿಯನ್ನು ವಿವಿಧ ಕಾರಣಕ್ಕಾಗಿ ನಿಂದಿಸುತ್ತಿದ್ದ ವೈದ್ಯ ಚಿತ್ರಹಿಂಸೆ ನೀಡಿದ್ದಲ್ಲದೇ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ವೈದ್ಯ ಮತ್ತು ಅವರ ಕುಟುಂಬದ ಏಳು ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿಯಲ್ಲಿ ಖಾಸಗಿ ವೈದ್ಯ ತನ್ನನ್ನು ನಿಂದಿಸಿ, ಅಸ್ವಾಭಾವಿಕ ದೈಹಿಕ ಸಂಪರ್ಕ ಹೊಂದಿದ್ದಾರೆ. ಬಳಿಕ ಮನೆಯಿಂದ ಹೊರದಬ್ಬಿದ್ದಾರೆ. ಅವರ ನಿರಂತರ ಕಿರುಕುಳದಿಂದಾಗಿ ಬೇಸತ್ತು ಪತಿ ಮತ್ತು ಅವರ 7ಮಂದಿ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377, 498 ಎ, 323, 504 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ: ಅನಾರೋಗ್ಯಪೀಡಿತ ಮಗುವನ್ನು ಆಸ್ಪತ್ರೆ ಮೇಲಿಂದ ಬಿಸಾಡಿ ಕೊಂದ ತಾಯಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.