ETV Bharat / bharat

ಕೊವ್ಯಾಕ್ಸಿನ್ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸೆಟಮಲ್​ ನೀಡಬಹುದೇ: ಭಾರತ್​ ಬಯೋಟೆಕ್ ಹೇಳಿದ್ದೇನು?​

author img

By

Published : Jan 5, 2022, 9:17 PM IST

ಕೊವ್ಯಾಕ್ಸಿನ್‌ ಲಸಿಕೆ​ ಪಡೆದುಕೊಳ್ಳುತ್ತಿರುವ ಮಕ್ಕಳಿಗೆ ನೋವು ನಿವಾರಕ ಹಾಗೂ ಪ್ಯಾರಸೆಟಮಲ್​ ಮಾತ್ರೆಗಳನ್ನು ನೀಡಬೇಡಿ. ಒಂದು ವೇಳೆ ಔಷಧ ಅವಶ್ಯವೆಂದು ತಿಳಿದರೆ ವೈದ್ಯರನ್ನು ಸಂಪರ್ಕಿಸಿ ಮುನ್ನಡೆಯಿರಿ ಎಂದು ಭಾರತ್​ ಬಯೋಟೆಕ್​ ತಿಳಿಸಿದೆ.

Do Not Give Painkillers
Do Not Give Painkillers

ಹೈದರಾಬಾದ್​: ಭಾರತದಲ್ಲಿ ಕಳೆದೆರಡು ದಿನಗಳಿಂದ 15 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೊವ್ಯಾಕ್ಸಿನ್​ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ಔಷಧ ತಯಾರಕ ಭಾರತ್ ಬಯೋಟೆಕ್ ಮಹತ್ವದ ಪ್ರಕಟಣೆ ಹೊರಡಿಸಿದೆ.

ಕೊವ್ಯಾಕ್ಸಿನ್​ ಲಸಿಕೆ ಪಡೆದುಕೊಳ್ಳುತ್ತಿರುವ ಮಕ್ಕಳಿಗೆ ವೈದ್ಯರು ಸೂಚಿಸಿದರೆ ಮಾತ್ರ ಔಷಧೋಪಚಾರ ಮಾಡಿ. ಇಲ್ಲದೇ ಇದ್ದ ಪಕ್ಷದಲ್ಲಿ ನೋವು ನಿವಾರಕ(Painkillers) ಅಥವಾ ಪ್ಯಾರಸೆಟಮಲ್(Paracetamol) ಮಾತ್ರೆಗಳನ್ನು ನೀಡುವ ಅವಶ್ಯಕತೆ ಇಲ್ಲ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ವ್ಯಾಕ್ಸಿನ್‌ ಪರೀಕ್ಷೆಯ ವಿವರ:

ಲಸಿಕೆ ಪಡೆದುಕೊಳ್ಳುತ್ತಿರುವ ಮಕ್ಕಳಿಗೆ 500mg ಪ್ಯಾರಸೆಟಮಲ್​ ಹಾಗೂ ನೋವು ನಿವಾರಕ ಮಾತ್ರೆ ಶಿಫಾರಸು ಮಾಡಲಾಗುತ್ತಿದ್ದು, ಇದರ ಅಗತ್ಯವಿಲ್ಲ. ಭಾರತ್​ ಬಯೋಟೆಕ್​​ನಿಂದ ಕ್ಲಿನಿಕಲ್​ ಟ್ರಯಲ್ಸ್ ನಡೆಸಿದ್ದ ವೇಳೆ 30 ಸಾವಿರ ಮಕ್ಕಳ ಪೈಕಿ ಶೇ. 10ರಿಂದ 20ರಷ್ಟು ಮಕ್ಕಳ ಮೇಲೆ ಮಾತ್ರ ಅಡ್ಡಪರಿಣಾಮ ಕಾಣಿಸಿಕೊಂಡಿದ್ದವು, ಆದರೆ ಈ ಸಮಸ್ಯೆಯ ತೀವ್ರತೆ ತುಂಬಾ ಕಡಿಮೆಯಾಗಿದ್ದು, ಎರಡು- ಮೂರು ದಿನಗಳಲ್ಲಿ ಬಗೆಹರಿಯುತ್ತವೆ. ಇದಕ್ಕಾಗಿ ಯಾವುದೇ ಔಷಧಿಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಪ್ರಧಾನಿಗೆ ಭದ್ರತಾ ಲೋಪ ಕಾಂಗ್ರೆಸ್‌ನ ಯೋಜಿತ ಪಿತೂರಿ: ಪ್ರಹ್ಲಾದ್‌ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.