ETV Bharat / bharat

ಮಸೀದಿಗಳಲ್ಲಿ ಶಿವಲಿಂಗ ಕಂಡುಬಂದ್ರೆ ಹಿಂದೂಗಳಿಗೆ ಬಿಟ್ಟುಕೊಡ್ತೀರಾ: ಓವೈಸಿಗೆ ತೆಲಂಗಾಣ ಬಿಜೆಪಿ ಮುಖ್ಯಸ್ಥ ಸವಾಲ್​

author img

By

Published : May 26, 2022, 3:59 PM IST

ತೆಲಂಗಾಣದಲ್ಲಿ ರಾಮರಾಜ್ಯ ಸ್ಥಾಪನೆಗೆ ಪ್ರತಿಜ್ಞೆ ಮಾಡಿರುವ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಬುಧವಾರ ಸವಾಲ್​ ಹಾಕಿದ್ದಾರೆ. ರಾಜ್ಯದ ಎಲ್ಲ ಮಸೀದಿಗಳನ್ನು ಉತ್ಖನನ ಮಾಡಿ, ಶಿವಲಿಂಗಗಳು ಕಂಡು ಬಂದರೆ ಮುಸ್ಲಿಮರು ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕಾಗುತ್ತದೆ. ಒಂದು ವೇಳೆ, ಮೃತದೇಹಗಳು ಕಂಡುಬಂದರೇ ಅದು ನಿಮ್ಮದು ಎಂದಿದ್ದಾರೆ.

BJP chief Bandi Sanjay
ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್

ಕರೀಂನಗರ (ತೆಲಂಗಾಣ): ತೆಲಂಗಾಣದಲ್ಲಿ ‘ರಾಮರಾಜ್ಯ’ ಸ್ಥಾಪನೆಗೆ ಪ್ರತಿಜ್ಞೆ ಮಾಡಿರುವ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರು, ರಾಜ್ಯದ ಎಲ್ಲಾ ಮಸೀದಿಗಳಲ್ಲಿಉತ್ಖನನ ಮಾಡುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಸವಾಲು ಹಾಕಿದ್ದಾರೆ. ಹೀಗೆ ಮಸೀದಿಗಳನ್ನು ಅಗೆದಾಗ ಶಿವಲಿಂಗ ಪತ್ತೆಯಾದರೆ, ಮುಸ್ಲಿಮರು ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕಾಗುತ್ತದೆ. ಒಂದು ವೇಳೆ ಮಸೀದಿಯಲ್ಲಿ ಮೃತದೇಹಗಳು ಕಂಡು ಬಂದರೆ, ಅದು ನಿಮ್ಮದು ಎಂದಿದ್ದಾರೆ.

ಕರೀಂನಗರದಲ್ಲಿ ಹನುಮ ಜಯಂತಿ ನಿಮಿತ್ತ ನಡೆದ ಹಿಂದೂ ಏಕತಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ಮಸೀದಿಗಳನ್ನು ಎಲ್ಲಿ ಅಗೆದರೂ ಶಿವಲಿಂಗಗಳು ಪತ್ತೆಯಾಗುತ್ತಿವೆ. ರಾಜ್ಯದ ಎಲ್ಲ ಮಸೀದಿಗಳನ್ನು ಅಗೆಯುತ್ತೇವೆ. ಒಂದು ವೇಳೆ ಮೃತದೇಹಗಳು ಸಿಕ್ಕರೆ, ಅದು ನಿಮ್ಮದು. ಇಲ್ಲ ಶಿವಲಿಂಗ ಕಂಡುಬಂದರೇ ಹಿಂದೂಗಳಿಗೆ ಬಿಟ್ಟುಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.

  • Wherever mosque premises are excavated, Shivalingas are found. I'm challenging Owaisi that we'll dig all mosques in state. If dead bodies recovered, you (Muslims)claim it.If Shivam (Shivalinga) is found,hand it over to us.Will you accept it?:Telangana BJP chief Bandi SK (25.05) pic.twitter.com/9VpQqWYAKm

    — ANI (@ANI) May 26, 2022 " class="align-text-top noRightClick twitterSection" data=" ">

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಮೀಸಲಾತಿ ರದ್ದುಪಡಿಸಲಾಗುವುದು ಮತ್ತು ಉರ್ದು ಭಾಷೆಯನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದರು. ‘ರಾಮ ರಾಜ್ಯ’ ಬಂದರೆ ಉರ್ದು ಭಾಷೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ. ಬಿಜೆಪಿ ದುಷ್ಟ ಶಕ್ತಿಗಳನ್ನು ತೊಡೆದುಹಾಕಿ ರಾಮರಾಜ್ಯವನ್ನು ಸ್ಥಾಪಿಸುತ್ತದೆ. ನಾವು ಎಲ್ಲ ಮದರಸಾಗಳನ್ನು ಮುಚ್ಚುತ್ತೇವೆ. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಬಿಸಿಗಳಿಗೆ ಹೆಚ್ಚುವರಿ ಕೋಟಾವನ್ನು ಒದಗಿಸುತ್ತೇವೆ. ನಾವು ಉರ್ದುವನ್ನು ಎರಡನೇ ಅಧಿಕೃತ ಭಾಷೆಯಾಗಿ ಶಾಶ್ವತವಾಗಿ ನಿಷೇಧಿಸುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ:'ಪರಿವಾರವಾದಿ' ಪಕ್ಷಗಳು ಪ್ರಜಾಪ್ರಭುತ್ವ-ಯುವ ಜನತೆಯ ದೊಡ್ಡ ಶತ್ರು: ಮೋದಿ ವಾಗ್ದಾಳಿ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.