ETV Bharat / bharat

ಒಡಿಶಾ - ಆಂಧ್ರ ಗಡಿ ವಿವಾದದಲ್ಲಿ'ಧೂಳಿಪದಾರ್' ಗ್ರಾಮ: ಗ್ರಾಮಸ್ಥರಿಗೆ ಅರ್ಥವಾಗದ ಒಡಿಯಾ ಭಾಷೆ...

author img

By ETV Bharat Karnataka Team

Published : Aug 22, 2023, 1:11 PM IST

ಒಡಿಶಾ - ಆಂಧ್ರಪ್ರದೇಶ ನಡುವಿನ ಗಡಿ ವಿವಾದದಲ್ಲಿ ಸಿಲುಕಿರುವ 'ಧೂಳಿಪದಾರ್' ಗ್ರಾಮ ನಲುಗಿ ಹೋಗಿದೆ. ಇಲ್ಲಿನ ಗ್ರಾಮಸ್ಥರಿಗೆ ತೆಲಗು ಭಾಷೆ ಸಂಪೂರ್ಣ ತಿಳಿಯುತ್ತದೆ. ಆದರೆ, ಒಡಿಯಾ ಭಾಷೆ ಒಂದಿಷ್ಟೂ ಅರ್ಥವೇ ಆಗಲ್ಲ.

Dhulipadar of Kotia Panchayat here people dont speak or understand Odia language
ಒಡಿಶಾ- ಆಂಧ್ರಪ್ರದೇಶ ನಡುವಿನ ಗಡಿ ವಿವಾದದಲ್ಲಿ ಸಿಲುಕಿರುವ 'ಧೂಳಿಪದಾರ್' ಗ್ರಾಮ: ಗ್ರಾಮಸ್ಥರಿಗೆ ಅರ್ಥವಾಗದ ಒಡಿಯಾ ಭಾಷೆ...

ಕೊಟಿಯಾ(ಒಡಿಶಾ): ಒಡಿಯಾದಲ್ಲಿ ಗ್ರಾಮದ ಹೆಸರು ಧೂಳಿಪದರ್ ಹಾಗೂ ತೆಲುಗಿನಲ್ಲಿ ಇದನ್ನು ಧೂಳಿಭದ್ರ ಕರೆಯಾಗುತ್ತದೆ. ಧೂಲಿಪದರ್ ಕೋಟ್ಯಾ ಪಂಚಾಯತ್‌ನ ಬಹು ಚರ್ಚಿತ ಗ್ರಾಮವಾಗಿದೆ. ಒಡಿಶಾ ಮತ್ತು ಆಂಧ್ರಪ್ರದೇಶ ನಡುವಿನ ಗಡಿ ವಿವಾದಕ್ಕೆ ತಳುಕು ಹಾಕಿಕೊಂಡಿದೆ. ಇದು ಒಡಿಶಾದ ಕೊಟಿಯಾ ಪಂಚಾಯತ್ ಮತ್ತು ಆಂಧ್ರಪ್ರದೇಶದ ಗಂಜೈಭದ್ರ ಪಂಚಾಯತ್ ವ್ಯಾಪ್ತಿಯಲ್ಲಿ ಒಡಿಶಾದ ಕೊನೆಯ ಗ್ರಾಮವಾದ ನೆರೆಡಿಬಲಸಕ್ಕೆ ಸಮೀಪದಲ್ಲಿದೆ.

ಇಡೀ ಗ್ರಾಮದಲ್ಲಿ ಕಂದಾ ಬುಡಕಟ್ಟು ಸಮುದಾಯದ 50 ಬುಡಕಟ್ಟು ಕುಟುಂಬಗಳು ವಾಸಿಸುತ್ತಿವೆ. ಮೂಲತಃ ಅವರು ತಮ್ಮ ಕುವಿ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ, ಆಂಧ್ರಪ್ರದೇಶದ ಸಾಲೂರು ಮಂಡಲಂನಲ್ಲಿರುವ ಸಾರಿಕಿ ವಾರದ ಮಾರುಕಟ್ಟೆಗೆ ಹತ್ತಿರವಾಗಿರುವುದರಿಂದ, ವ್ಯಾಪಾರ ವಹಿವಾಟಿಗಾಗಿ ಗ್ರಾಮಸ್ಥರು ತೆಲುಗು ಭಾಷೆಯನ್ನೇ ಬಳಕೆ ಮಾಡುತ್ತಿದ್ದಾರೆ. ಧೂಳಿಪದರ್ ಒಡಿಶಾದ ಕೊಟಿಯಾ ಪಂಚಾಯತ್​ನ ನಕ್ಷೆಯಲ್ಲಿದೆ.

1971ರಲ್ಲಿ ಒಡಿಯಾ ಭಾಷೆಯ ಪ್ರಾಥಮಿಕ ಶಾಲೆ ಸ್ಥಾಪನೆ: ಗ್ರಾಮಸ್ಥರಿಗೆ ಒಡಿಯಾ ಭಾಷೆಯ ಪ್ರಾಬಲ್ಯವನ್ನು ಬಲಪಡಿಸುವ ಸಲುವಾಗಿ 1971ರಲ್ಲಿ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯೊಂದನ್ನು ಸ್ಥಾಪಿಸಲಾಯಿತು. ಒಡಿಶಾ ಮತ್ತು ಆಂಧ್ರಪ್ರದೇಶ ನಡುವಿನ ಗಡಿ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವುದರಿಂದ, ಆಂಧ್ರಪ್ರದೇಶದ ಗಡಿಯ ಹತ್ತಿರ ಪ್ರವೇಶಿಸಲು, ಆಂಧ್ರಪ್ರದೇಶದ ಆಡಳಿತ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ತಮ್ಮ ಅಧಿಕಾರವನ್ನು ಪ್ರತಿಪಾದಿಸಲು ಈ ಗ್ರಾಮವನ್ನು ತಮ್ಮ ವೇದಿಕೆಯಾಗಿ ಬಳಸುತ್ತಿದ್ದಾರೆ.

ಆಂಧ್ರ ಸರ್ಕಾರವು ಧೂಳಿಪದರ್‌ನಲ್ಲಿ ಸುಂದರವಾದ ತೆಲುಗು ಭಾಷಾ ಶಾಲೆಯನ್ನು ಸ್ಥಾಪಿಸಿದೆ. ಈ ಶಾಲೆ ಸ್ಥಾಪನೆಯಾಗಿ 52 ವರ್ಷಗಳು ಕಳೆದಿವೆ. ಒಡಿಶಾ ಸರ್ಕಾರವು ಒಡಿಯಾ ಶಾಲೆಯಲ್ಲಿ ಒಡಿಯಾ ಭಾಷೆಯ ಬಗ್ಗೆ ಆಸಕ್ತಿಯನ್ನು ಮೂಡಿಸುವ ತನ್ನ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗಿಲ್ಲ.

ವಿದ್ಯಾರ್ಥಿಗಳು ಆಕರ್ಷಕ ವಾತಾವರಣವನ್ನು ಸೃಷ್ಟಿಸಲು ಒಡಿಶಾ ಸರ್ಕಾರವು ಹಿಂದೆ ಉಳಿದಿದೆ. ಮಕ್ಕಳಿಗೆ ಆಸಕ್ತಿದಾಯಕ ರೀತಿಯಲ್ಲಿ ಕಲಿಸಲು ಸರಿಯಾದ ಕಟ್ಟಡಗಳು ಮತ್ತು ಕಲಿಕಾ ಸಾಮಗ್ರಿಗಳೊಂದಿಗೆ ಇತರ ಪ್ರದೇಶಗಳಲ್ಲಿ ಶಾಲೆಗಳನ್ನು ಸಿದ್ಧಪಡಿಸುತ್ತಿದ್ದರೆ, ಧೂಲಿಪದರ್‌ನಂತಹ ಸೂಕ್ಷ್ಮ ಗ್ರಾಮದಲ್ಲಿರುವ ಶಾಲೆಯು ಒಡಿಯಾ ಭಾಷೆಯನ್ನು ಉತ್ತೇಜಿಸುವ ದಿಕ್ಕಿನಲ್ಲಿ ಅಸಹಾಯಕವಾಗಿದೆ.

ಒಡಿಯಾ ಭಾಷೆಯಲ್ಲಿ ಮಾತನಾಡಿದರೆ, ದೂರ ಓಡುವ ಮಕ್ಕಳು: ಶಾಲೆಯನ್ನು ಒಡಿಶಾ ಸರ್ಕಾರ ನಡೆಸುತ್ತಿರುವುದರಿಂದ ಗ್ರಾಮಕ್ಕೆ ಆಂಧ್ರ ಸರ್ಕಾರದಿಂದ ವಿದ್ಯುತ್ ನೀಡಲಾಗಿದೆ. ಆದರೆ ಸಂಪರ್ಕದ ಕೊರತೆಯಿಂದ ವಿದ್ಯುತ್ ಆನ್ ಮಾಡಲು ಸಾಧ್ಯವಾಗಿಲ್ಲ. ಈ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದರೂ, ವಿದ್ಯುತ್​ ದೀಪಗಳು ಮಾತ್ರ ಬೆಳಗಲಿಲ್ಲ. ಎರಡು ರಾಜ್ಯಗಳ ನಡುವಿನ ಸಂಘರ್ಷವು ಒಡಿಯಾ ಭಾಷೆಯ ಹರಡುವಿಕೆಗೆ ಕಡಿವಾಣ ಹಾಕಿದೆ. ಒಡಿಯಾ ಶಾಲೆಯ ಶಿಕ್ಷಕರನ್ನು ಹೊರತುಪಡಿಸಿ, ಇಡೀ ಗ್ರಾಮದಲ್ಲಿ ಯಾರೂ ಕೂಡಾ ಒಡಿಯಾ ಪದವನ್ನು ಬಳಸುವುದಿಲ್ಲ. ನೀವು ಒಡಿಯಾ ಭಾಷೆಯಲ್ಲಿ ಮಾತನಾಡಿದರೆ, ಮಕ್ಕಳಿಂದ ಹಿಡಿದು ವಯಸ್ಕರವಗಿನವರು ದೂರ ಓಡಿ ಹೋಗುತ್ತಾರೆ.

ಪ್ರಸ್ತುತ ಬಿಜು ಪಕ್ಕಾ ಮನೆಯನ್ನು ಒಡಿಶಾ ಸರ್ಕಾರ ನಿರ್ಮಿಸುತ್ತಿದೆ. ಈ ಗ್ರಾಮದಲ್ಲಿ ಆಂಧ್ರಪ್ರದೇಶದಿಂದ ಯಾವುದೇ ಮನೆ ನೀಡಿಲ್ಲ. ಆದರೆ, ಫಲಾನುಭವಿಯು ಒಡಿಯಾ ಭಾಷೆಯನ್ನು ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹೊಸದಾಗಿ ನಿರ್ಮಿಸಿದ ಮನೆಯಲ್ಲಿ ''ಬಿಜು ಪಕ್ಕಾ ಮನೆ'' ಎಂದು ಬರೆಯಲಾಗಿದೆ. ಆದರೆ, ಗ್ರಾಮಸ್ಥರಿಗೆ ಅದೇನು ಎಂಬುದೇ ಅರ್ಥವಾಗಿಲ್ಲ. ಒಡಿಶಾಗೆ ಜನರನ್ನು ಆಕರ್ಷಿಸಲು ಒಡಿಶಾ ಸರ್ಕಾರವು ಮನೆಗಳನ್ನು ನಿರ್ಮಿಸುತ್ತಿದೆ. ಆದರೆ, ಶಾಲೆಗೆ ಕಾಂಕ್ರೀಟ್ ಕಟ್ಟಡ ಮತ್ತು ಶಿಕ್ಷಕರಿಗೆ ಮನೆಗಳನ್ನು ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ.

ಶಿಕ್ಷಕ ಪ್ರೀದಿತಾರಾ ಸಮಲ್ ಅಭಿಪ್ರಾಯ: ಒಡಿಯಾ ಭಾಷೆಯನ್ನು ಅರ್ಥಮಾಡಿಕೊಳ್ಳುವ ಗ್ರಾಮದ ಏಕೈಕ ಶಿಕ್ಷಕ ಪ್ರೀದಿತಾರಾ ಸಮಲ್ ಮಾತನಾಡಿ, ಶಾಲೆಯಿಂದ ಒಡಿಯಾ ಭಾಷೆಯನ್ನು ಕಲಿಸಲು ಸಹಾಯ ಮಾಡುತ್ತದೆ. ತಮಗೆ ಮನೆ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿದರೆ, ಗ್ರಾಮದಲ್ಲಿ ವಾಸಿಸುವ ಬಯಕೆಯನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ದೃಶ್ಯ-ಶ್ರಾವ್ಯ ಮೂಲಕ ಮಕ್ಕಳಿಗೆ ಒಡಿಯಾದಲ್ಲಿ ಕಲಿಸಿದರೆ, ಮಕ್ಕಳು ಈ ಶಾಲೆಯತ್ತ ಆಕರ್ಷಿತರಾಗಿ ಒಡಿಯಾ ಭಾಷೆಯತ್ತ ಸೆಳೆಯಲು ಸಹಕಾರಿಯಾಗುತ್ತದೆ ಎಂಬುದು ಸಮಲ್ ಅವರ ಆಶಯ.

ಇದನ್ನೂ ಓದಿ: 'ಚಂದಮಾಮ'ನ ಸ್ಪರ್ಶಿಸಲು ಭಾರತದ ಕಾತರ: ಇಸ್ರೋ ಮಾಜಿ ವಿಜ್ಞಾನಿ ಮನೀಶ್​ ಪುರೋಹಿತ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.