ETV Bharat / bharat

ಧರ್ಮ ನಿಂದನೆ ಪ್ರಕರಣದ ಆರೋಪಿ ಹತ್ಯೆ ಕೇಸ್: ಮೂವರು ಶೂಟರ್​ಗಳನ್ನು ಬಂಧಿಸಿದ ಪೊಲೀಸರು

author img

By

Published : Nov 11, 2022, 5:11 PM IST

Updated : Nov 11, 2022, 5:27 PM IST

ಧರ್ಮನಿಂದನೆ ಪ್ರಕರಣದ ಆರೋಪಿ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಹತ್ಯೆ ಪ್ರಕರಣದ ಮೂವರು ಶೂಟರ್​ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

dera-follower-pradeep-murder-case-delhi-police-arrested-three-shooters-after-encounter
ಧರ್ಮನಿಂದನೆ ಪ್ರಕರಣದ ಆರೋಪಿ ಹತ್ಯೆ ಕೇಸ್: ಮೂವರು ಶೂಟರ್​ಗಳನ್ನು ಬಂಧಿಸಿದ ಪೊಲೀಸರು

ಫರೀದ್​ಕೋಟ್ (ಪಂಜಾಬ್): ಪಂಜಾಬ್​​ನಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಎಂಬುವವರನ್ನು ಗುರುವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣದ ಆರು ಜನ ಶೂಟರ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ. ಶುಕ್ರವಾರ ಆರೋಪಿಗಳ ಬಂಧನದ ವೇಳೆ ಪೊಲೀಸರೊಂದಿಗೆ ಎನ್‌ಕೌಂಟರ್ ನಡೆಸಲಾಗಿದೆ. ಆದರೂ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗುರು ಗ್ರಂಥ ಸಾಹಿಬ್​ಗೆ ಅಗೌರವ ತೋರಿದ ಆರೋಪವನ್ನು ಕೊಲೆಯಾದ ಪ್ರದೀಪ್ ಸಿಂಗ್ ಎದುರಿಸುತ್ತಿದ್ದ. ಸದ್ಯ ಜಾಮೀನಿನಲ್ಲಿ ಹೊರ ಬಂದಿದ್ದ ಪ್ರದೀಪ್​ನನ್ನು​ ಗುರುವಾರ ಬೆಳಗ್ಗೆ ಕೊಲೆ ಮಾಡಲಾಗಿದೆ. ಫರೀದ್‌ಕೋಟ್‌ನಲ್ಲಿ ತಮ್ಮ ಡೈರಿಯಲ್ಲಿದ್ದಾಗ ಪ್ರದೀಪ್ ಸಿಂಗ್ ಮೇಲೆ ಆರು ಜನ ಶೂಟರ್​​ಗಳು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಪ್ರದೀಪ್ ಮೇಲೆ 60 ಗುಂಡು ಹಾರಿಸಲಾಗಿದೆ ಎಂದು ಶಂಕಿಸಲಾಗಿದೆ. ಇಡೀ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈ ಕೊಲೆಯ ಬೆನ್ನಲ್ಲೇ ಕಾರ್ಯಪ್ರವೃತರಾದ ಪೊಲೀಸರು, ಆರೋಪಗಳನ್ನು ಪತ್ತೆ ಹಚ್ಚಿದ್ದಾರೆ. ಆರು ಶೂಟರ್‌ಗಳ ಪೈಕಿ ನಾಲ್ವರು ಹರಿಯಾಣದವರು ಮತ್ತು ಇಬ್ಬರು ಪಂಜಾಬ್‌ನವರು ಎಂದು ಹೇಳಲಾಗಿದೆ. ಅಲ್ಲದೇ, ಈ ಶಂಕಿತರೆಲ್ಲರೂ ಗ್ಯಾಂಗ್​ಸ್ಟರ್​​ ಲಾರೆನ್ಸ್ ಬಿಷ್ಣೋಯ್ ಗುಂಪಿಗೆ ಸೇರಿದವರು ಎನ್ನಲಾಗಿದೆ.

  • #UPDATE | Punjab police intelligence unit & Delhi police counter-intelligence unit have identified all the six shooters & accused pertaining to the killing of Dera Sacha Sauda follower Pradeep Singh in Faridkot yesterday. Further raids underway: Sources pic.twitter.com/jNSmSZGDGe

    — ANI (@ANI) November 11, 2022 " class="align-text-top noRightClick twitterSection" data=" ">

ಬಂಧನಕ್ಕೆ ತೆರಳಿದಾಗ ಎನ್​ಕೌಂಟರ್​: ಪ್ರದೀಪ್ ಸಿಂಗ್ ಕೊಲೆ ಪ್ರಕರಣದ ಆರೋಪಿಗಳನ್ನು ಗುರುತಿಸಿರುವ ಬಗ್ಗೆ ಪಂಜಾಬ್ ಪೊಲೀಸ್ ಇಲಾಖೆ ಗುಪ್ತಚರ ಮತ್ತು ದೆಹಲಿ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗ ಖಚಿತಪಡಿಸಿದೆ. ಹಂತಕರ ಗುರುತು ಪತ್ತೆಯಾದ ತಕ್ಷಣವೇ ಪೊಲೀಸರು ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿ, ಆರೋಪಿಗಳ ಮೇಲೆ ದಾಳಿ ಮಾಡಿದ್ದಾರೆ.

ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಪಟಿಯಾಲಾದ ಬಕ್ಷಿವಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೆಹಲಿ ಪೊಲೀಸ್ ತಂಡ ದಾಳಿ ನಡೆಸಿದ್ದು, ಆರು ಜನ ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದ ವೇಳೆ ಪೊಲೀಸರೊಂದಿಗೆ ಎನ್‌ಕೌಂಟರ್ ಸಹ ನಡೆದಿದೆ. ಆದರೂ, ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲ 6 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ಬಂಧಿತ ಎಲ್ಲ ಮೂವರನ್ನು ಹರಿಯಾಣದ ನಿವಾಸಿಗಳೆಂದು ಪೊಲೀಸರು ಗುರುತಿಸಿದ್ದು, ಅವರಲ್ಲಿ ಇಬ್ಬರು ರೋಹ್ಟಕ್ ಮತ್ತು ಒಬ್ಬರು ಭಿವಾನಿ ನಿವಾಸಿ ಎಂದು ಪತ್ತೆ ಹಚ್ಚಲಾಗಿದೆ. ಹರಿಯಾಣದ ಮತ್ತೊಬ್ಬ ಆರೋಪಿ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಸದ್ಯ ತಲೆ ಮರೆಸಿಕೊಂಡಿದ್ದಾನೆ. ಈತ ಈಗಾಗಲೇ ಜೈಲಿನಲ್ಲಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್​ನ ಸಹವರ್ತಿಎಂದು ತಿಳಿದು ಬಂದಿದೆ.

ಪ್ರದೀಪ್​ ಕೊಲೆ ಹೊಣೆ ಹೊತ್ತ ಗ್ಯಾಂಗ್​ಸ್ಟರ್: ಇತ್ತ, ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಕೊಲೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ತಂಡದ ಮತ್ತೊಬ್ಬ ಗ್ಯಾಂಗ್​ಸ್ಟರ್ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾರೆ. ಧರ್ಮ ನಿಂದನೆಯ ಆರೋಪಿ ಪ್ರದೀಪ್ ಸಿಂಗ್ ಹತ್ಯೆಗೆ ನಾನು ಹೊಣೆಗಾರನಾಗಿದ್ದೇನೆ. ನ್ಯಾಯಕ್ಕಾಗಿ ಮೂರು ಸರ್ಕಾರಗಳ ಅವಧಿಗಳಲ್ಲಿ 7 ವರ್ಷಗಳ ಕಾಲ ಎದುರು ನೋಡಿದ್ದೆವು. ನಾವು ಇಂದು ನಮ್ಮ ನ್ಯಾಯವನ್ನು ಮಾಡಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗ್ಯಾಂಗ್​ಸ್ಟರ್ ಗೋಲ್ಡಿ ಬ್ರಾರ್ ಫೋಸ್ಟ್​ ಹಾಕಿದ್ದಾರೆ.

ಏನಿದು ಧರ್ಮ ನಿಂದನೆ ಪ್ರಕರಣ?: 2015 ರಲ್ಲಿ ಗುರು ಗ್ರಂಥ ಸಾಹಿಬ್​ ಅನ್ನು ಅಪವಿತ್ರಗೊಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಬರ್ಗರಿ ಗ್ರಾಮದ ಗುರುದ್ವಾರ ಸಾಹಿಬ್‌ನಿಂದ ಗುರು ಗ್ರಂಥ ಸಾಹಿಬ್‌ನ ಪವಿತ್ರ ಚಿತ್ರವನ್ನು ಕದ್ದು, ಭಾಗಗಳನ್ನು ಹರಿದು ಹಾಕಿದ ಆರೋಪ ಇದೆ. ಇದಾದ ಬಳಿಕ ಸಿಖ್ ಸಮುದಾಯ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿತ್ತು.

ಈ ಧರ್ಮನಿಂದನೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿಯಾಗಿದ್ದ ಪ್ರದೀಪ್ ಸಿಂಗ್ 63ನೇ ಆರೋಪಿಯಾಗಿದ್ದರು. ಪ್ರದೀಪ್ ಜಾಮೀನಿನ ಮೇಲೆ ಹೊರಬಂದ ನಂತರ ಭದ್ರತೆ ಸಹ ಒದಗಿಸಲಾಗಿತ್ತು. ಇದೇ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿಯಾಗಿದ್ದ ಮಹೇಂದ್ರಪಾಲ್ ಬಿಟ್ಟು ಕೂಡ 2019ರ ಜೂನ್ 22ರಂದು ಜೈಲಿನಲ್ಲೇ ಹತ್ಯೆಯಾಗಿದ್ದರು.

ಇದನ್ನೂ ಓದಿ: ಜೆಎನ್‌ಯು ಕ್ಯಾಂಪಸ್‌ನಲ್ಲಿ ಗುಂಪು ಘರ್ಷಣೆ: ಎರಡು ಎಫ್‌ಐಆರ್‌ ದಾಖಲು

Last Updated :Nov 11, 2022, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.