ETV Bharat / bharat

ನಟಿ ಜೂಹಿ ಚಾವ್ಲಾರ 5 ಜಿ ಪ್ರಕರಣದ ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್​

author img

By

Published : Dec 23, 2021, 4:49 PM IST

5ಜಿ ತಂತ್ರಜ್ಞಾನ ಅಳವಡಿಕೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡಿದ್ದ ದೆಹಲಿ ಕೋರ್ಟ್​ ಏಕಸದಸ್ಯ ಪೀಠದ ಆದೇಶದ ವಿರುದ್ಧ ನಟಿ ಜೂಹಿ ಚಾವ್ಲಾ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠ ಜನವರಿ 25ಕ್ಕೆ ಮುಂದೂಡಿದೆ.

juhi chawla petition
ನಟಿ ಜೂಹಿ ಚಾವ್ಲಾ

ನವದೆಹಲಿ: 5ಜಿ ತಂತ್ರಜ್ಞಾನ ಅಳವಡಿಕೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡಿದ್ದ ದೆಹಲಿ ಕೋರ್ಟ್​ ಏಕಸದಸ್ಯ ಪೀಠದ ಆದೇಶದ ವಿರುದ್ಧ ನಟಿ ಜೂಹಿ ಚಾವ್ಲಾ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠ ಜನವರಿ 25 ಕ್ಕೆ ಮುಂದೂಡಿದೆ.

ನಟಿ ಜೂಹಿ ಚಾವ್ಲಾರ ಅರ್ಜಿಯ ಪರವಾಗಿ ವಕೀಲ ಸಲ್ಮಾನ್ ಖುರ್ಷಿದ್ ವಾದ ಮಂಡಿಸಿ, 5 ಜಿ ತಂತ್ರಜ್ಞಾನ ಅಳವಡಿಕೆಯಿಂದ ಮಾನವನ ಮೇಲಾಗುವ ಪರಿಣಾಮಗಳ ಕುರಿತು ನಟಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದು ಕೇವಲ ಪ್ರಚಾರಕ್ಕಾಗಿ ಹಾಕಿದ ಅರ್ಜಿಯಾಗಿದೆ ಎಂದು ಅರ್ಜಿ ತಿರಸ್ಕರಿಸಿ, 20 ಲಕ್ಷ ದಂಡವನ್ನು ಏಕಸದಸ್ಯ ಪೀಠ ವಿಧಿಸಿದೆ. ಕೋರ್ಟ್​ಗೆ ದಂಡದ ಶುಲ್ಕವನ್ನು ಪಾವತಿಸಲು ಸೂಚಿಸಿದೆ ಎಂದು ಕೋರ್ಟ್​ಗೆ ತಿಳಿಸಿದರು.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ 140 ರೂ. ಏರಿಕೆ: ಗ್ರಾಹಕರಿಕೆ ಶಾಕ್​

ಬಳಿಕ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠ ಅರ್ಜಿಯ ಹೆಚ್ಚಿನ ವಿಚಾರಣೆಗಾಗಿ ಜನವರಿ 25 ರಂದು ಗಡುವು ನೀಡಿ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.