ETV Bharat / bharat

ಪಟಾಕಿ ಸಿಡಿದು ವ್ಯಕ್ತಿಗೆ ಶಾಶ್ವತ ಅಂಧತ್ವ: ಅಪರಾಧಿಗೆ 6 ತಿಂಗಳು ಜೈಲು ಶಿಕ್ಷೆ

author img

By

Published : Nov 17, 2021, 7:49 PM IST

2013ರಲ್ಲಿ ದೀಪಾವಳಿ ಹಬ್ಬದಂದು ನವೀನ್​ಕುಮಾರ್​ ಎಂಬುವವರು ತಮ್ಮ ಮನೆಯ ಮುಂದೆ ರಾಕೆಟ್​ ಪಟಾಕಿ ಸಿಡಿಸುವಾಗ ಪಕ್ಕದ ಮನೆಯ ವ್ಯಕ್ತಿಯ ಬಲಗಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಇದರಿಂದ ಆ ವ್ಯಕ್ತಿ ಶಾಶ್ವತ ಅಂಧತ್ವಕ್ಕೆ ಒಳಗಾಗಿದ್ದರು.

firecracker injury
6 ತಿಂಗಳು ಜೈಲು ಶಿಕ್ಷೆ

ನವದೆಹಲಿ: ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವಾಗ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೊಬ್ಬನ ಕಣ್ಣಿಗೆ ಗಾಯ ಮಾಡಿ ಶಾಶ್ವತ ಅಂಧತ್ವ ಉಂಟು ಮಾಡಿದ ಅಪರಾಧಿಗೆ ದೆಹಲಿ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

2013ರಲ್ಲಿ ದೀಪಾವಳಿ ಹಬ್ಬದಂದು ನವೀನ್​ಕುಮಾರ್​ ಎಂಬುವವರು ತಮ್ಮ ಮನೆಯ ಮುಂದೆ ರಾಕೆಟ್​ ಪಟಾಕಿ ಸಿಡಿಸುವಾಗ ಪಕ್ಕದ ಮನೆಯ ವ್ಯಕ್ತಿಯ ಬಲಗಣ್ಣಿಗೆ ತೀವ್ರವಾಗಿ ಗಾಯವಾಗಿತ್ತು. ಇದರಿಂದ ಆ ವ್ಯಕ್ತಿ ಶಾಶ್ವತ ಅಂಧತ್ವಕ್ಕೆ ಒಳಗಾಗಿದ್ದರು.

ಇದರಿಂದ ನೊಂದು ನವೀನ್​ಕುಮಾರ್​ ವಿರುದ್ಧ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದರು. ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ನವೀನ್​ಕುಮಾರ್​ ಅಪರಾಧಿ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿ ನವೀನ್​ಕುಮಾರ್​ ದೆಹಲಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಕಣ್ಣಿಗೆ ಹಾನಿ ಮಾಡಿದ್ದು ಸಾಬೀತಾದ ಕಾರಣ ಆಪಾದಿತನನ್ನು ಅಪರಾಧಿ ಎಂದು ಪರಿಗಣಿಸಿ, ಅಪರಾಧಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.