ETV Bharat / bharat

ದೆಹಲಿ ಕೋರ್ಟ್​ ಜಡ್ಜ್​ ವೇಣುಗೋಪಾಲ್ ಕೋವಿಡ್​ಗೆ ಬಲಿ

author img

By

Published : Apr 19, 2021, 4:49 PM IST

ದೆಹಲಿ ಸಾಕತ್ ನ್ಯಾಯಾಲಯದ ನ್ಯಾಯಾಧೀಶ ಕೋವಾಯ್ ವೇಣುಗೋಪಾಲ್ ಸೋಮವಾರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Kovai Venugopal
ಕೋವಾಯ್ ವೇಣುಗೋಪಾಲ್ ಕೋವಿಡ್​ಗೆ ಬಲಿ

ನವದೆಹಲಿ: ಕೆಲವು ದಿನಗಳ ಹಿಂದೆ ಕೋವಿಡ್​ ಸೋಂಕಿಗೆ ಒಳಗಾಗಿದ್ದ ದೆಹಲಿ ಸಾಕೆತ್​ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಕೋವಾಯ್ ವೇಣುಗೋಪಾಲ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಮಧ್ಯೆ ದೆಹಲಿಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, 25,462 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಟೆಸ್ಟ್​​ ಮಾಡಿಸುವ ಪ್ರತೀ ಮೂವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್​ ಬರುತ್ತಿದೆ.

ರಾಜಧಾನಿಯಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ರಾತ್ರಿ 10 ರಿಂದ ಆರು ದಿನಗಳ ಲಾಕ್​​ಡೌನ್ ಘೋಷಿಸಿದ್ದಾರೆ.

ಇದನ್ನೂ ಓದಿ:ದೆಹಲಿಯಲ್ಲಿ ಏಕಾಏಕಿ ಲಾಕ್​ಡೌನ್​ ಘೋಷಣೆ: ಮದ್ಯಕೊಳ್ಳಲು ಸಾಲುಗಟ್ಟಿ ನಿಂತ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.