ETV Bharat / bharat

2022-23ರ ಮೊದಲ ತ್ರೈಮಾಸಿಕದಲ್ಲಿ ನಗರ ನಿರುದ್ಯೋಗ ದರ ಇಳಿಕೆ

author img

By

Published : May 30, 2023, 11:40 AM IST

ಕೋವಿಡ್​ ಬಳಿಕ ಉದ್ಯೋಗ ದರದಲ್ಲಿ ಚೇತರಿಕೆ ಕಂಡು ಬರುತ್ತಿದೆ. ನಗರದಲ್ಲಿ ನಿರುದ್ಯೋಗ ಪ್ರಮಾಣ ಶೇ 6.8ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

A decline in urban unemployment rates in the first quarter of 2022-23
A decline in urban unemployment rates in the first quarter of 2022-23

ಬೆಂಗಳೂರು: ಭಾರತದ ನಗರ ನಿರುದ್ಯೋಗ ದರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 6.8 ರಷ್ಟು ಕಡಿಮೆಯಾಗಿದೆ. ಕಳೆದ ಐದು ವರ್ಷದಲ್ಲಿಯೇ ಇದು ಕಡಿಮೆ ದರವಾಗಿದ್ದು, ಕಳೆದ ಮೊದಲ ತ್ರೈಮಾಸಿಕದಲ್ಲಿ ನಿರುದ್ಯೋಗ ದರ ಶೇ 7.2 ರಷ್ಟಿತ್ತು ಎಂದು ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಜಾರಿ ನಿರ್ದೇಶನಾಲಯ ಸಚಿವಾಲಯದ ವರದಿ ತಿಳಿಸಿದೆ. ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್​ಎಫ್​ಎಸ್​​) ಬಳಸಿಕೊಂಡು ನಗರ ಪ್ರದೇಶಗಳ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಿಎಲ್​ಎಫ್​ಎಸ್​ 2018-19ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದು ಬಂದಾಗಿನಿಂದ ದಾಖಲಾದ ಕಡಿಮೆ ದರ ಇದಾಗಿದೆ ಎಂದು ತಿಳಿಸಿದೆ. ಸಮೀಕ್ಷೆ ಅನುಸಾರ, ಒಬ್ಬ ವ್ಯಕ್ತಿ ವಾರದಲ್ಲಿ ಅಂದರೆ ಏಳು ದಿನದಲ್ಲಿ ಯಾವುದೇ ದಿನದ ಒಂದು ಗಂಟೆ ಕೆಲಸ ಮಾಡಿದರೆ, ಆತನನ್ನು ಉದ್ಯೋಗಿ ಎಂದು ಸಮೀಕ್ಷೆ ಎಂದು ಗುರುತಿಸಿದೆ. ವಾರದಲ್ಲಿ ಒಂದು ಗಂಟೆಯೂ ಕೆಲಸ ಮಾಡದ ವ್ಯಕ್ತಿ ನಿರುದ್ಯೋಗಿ ಎಂದು ಗುರುತಿಸಲಾಗಿದೆ.

ಉದ್ಯೋಗ ಕಂಡು ಕೊಳ್ಳುವಲ್ಲಿ ಮುಂದಾದ ಜನ: ಮಾರ್ಚ್​ ತ್ರೈಮಾಸಿಕದ 2022-23 ನಗರದ ಉದ್ಯೋಗಕ್ಕೆ ಮಾತ್ರ ಇಳಿಕೆ ಕಂಡು ಬಂದಿಲ್ಲ. ಇದು ನಿರುದ್ಯೋಗ ಕುಸಿತವೂ ತೋರಿಸಿದೆ. ಇದು ಸಕಾರಾತ್ಮಕ ಟ್ರೆಂಡ್​ ಕೆಲವೇ ಜನರು ಉದ್ಯೋಗ ಕೇಳುತ್ತಿದ್ದಾರೆ ಎಂದು ತೋರಿಸಿಲ್ಲ. ಬದಲಾಗಿ ಉದ್ಯೋಗ ನೋಡುತ್ತಿರುವರ ಸಂಖ್ಯೆ ಅಂದರೆ ಕಾರ್ಮಿಕ ಬಲ ಭಾಗಿದರ ದರ (ಎಲ್​ಎಫ್​ಪಿಆರ್​) ಕೂಡ ಎಲ್ಲಾ ತ್ರೈಮಾಸಿಕಗಳಿಗೆ ಹೋಲಿಕೆ ಮಾಡಿದರೆ ಹೆಚ್ಚಿದೆ ಎಂದು ತೋರಿಸಿದೆ. 2022- 23ರಲ್ಲಿ ದೇಶದ ನಗರ ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದ ಜನರು ಉದ್ಯೋಗ ಕಂಡು ಕೊಂಡಿದ್ದಾರೆ. ಎಲ್​ಎಫ್​ಪಿಆರ್ ದರ ಶೇ 38.1 ರಷ್ಟಿದೆ ಎಂದು ವರದಿ ಹೇಳಿದೆ.

ಶಿಕ್ಷಿತ ಯುವ ಜನರಲ್ಲಿ ನಿರುದ್ಯೋಗ ದರ ಹೆಚ್ಚಿದೆ. ಇದು ಕಡಿಮೆಯಾಗಿದ್ದರೆ ಕಾರ್ಮಿಕರ ಜನಸಂಖ್ಯೆ ಅನುಪಾತದಲ್ಲಿ ಕುಸಿತ ಕಾಣದಿದ್ದರೂ ಅದು ಉತ್ತಮ ಸೂಚನೆಯಾಗಿದೆ ಎಂದು ಅಜೀಂ ಪ್ರೇಮ್​ ಜೀ ಯುನಿವರ್ಸಿಟಿ ಅರ್ಥಶಾಸ್ತ್ರ ಶಿಕ್ಷಕ ಅಮಿತ್​ ಬೋಸ್ಲೆ ತಿಳಿಸಿದ್ದಾರೆ. ಕೆಲಸಕ್ಕೆ ವೇತನ ಇಲ್ಲದಿರುವುದರಿಂದ ಸಾಮಾನ್ಯವಾಗಿ ಮಹಿಳೆಯರ ಕೆಲಸದಲ್ಲಿ ಕಾರ್ಮಿಕರ ಜನಸಂಖ್ಯೆ ಅನುಪಾತ (ಡಬ್ಲ್ಯೂಪಿಆರ್​) ಹೆಚ್ಚುತ್ತದೆ.

ಪುರುಷರಲ್ಲಿ ಕಡಿಮೆ ನಿರುದ್ಯೋಗ: ಈ ನಿರುದ್ಯೋಗ ದರ ಪುರುಷರಕ್ಕಿ ಕಡಿಮೆಯಾಗಿದೆ. ಇದು ಶೇ ಕಳೆದ ಅಕ್ಟೋಬರ್​ ಡಿಸೆಂಬರ್​ಗೆ (6.0) ಹೋಲಿಕೆ ಮಾಡಿದರೆ ಈ ಮಾರ್ಚ್​ನಲ್ಲಿ 50 ಬೇಸಿಸ್​ ಪಾಯಿಂಟ್​ನಷ್ಟು ಕಡಿಮೆಯಾಗಿದೆ. ಇನ್ನು ಮಹಿಳೆಯರಲ್ಲೂ ಇದು ಶೇ 9.6 ರಷ್ಟಿಂದ ಶೇ 9.2ಕ್ಕೆ ಕುಸಿತಗೊಂಡಿದೆ ಎಂದು ವರದಿ ತಿಳಿಸಿದೆ. ಕೋವಿಡ್​ನಿಂದಾಗಿ ವಿಧಿಸಿದ್ದ ಕಠಿಣ ಲಾಕ್​ಡೌನ್​ನಿಂದಾಗಿ ನಿರುದ್ಯೋಗ ದರ ಹೆಚ್ಚಿದ್ದು, ಈ ಹಿಂದಿನ ವರದಿಯಲ್ಲಿ ಸ್ಪಷ್ಟವಾಗಿದೆ. ಇದೀಗ ದೇಶಾದ್ಯಂತ ಉದ್ಯೋಗ ಪರಿಸ್ಥಿತಿ ಸುಧಾರಣೆ ಕಂಡಿದ್ದು, ಒಟ್ಟಾರೆ ಆರ್ಥಿಕ ಸ್ಥಿತಿ ಚೇತರಿಕೆ ಹಾದಿ ಕಾಣುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಂಚೆ ಇಲಾಖೆಯ 12,828 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.