ETV Bharat / bharat

ಅಲೋಪತಿ -ಆಯುರ್ವೇದದ ಚರ್ಚೆ ನಿಷ್ಪ್ರಯೋಜಕ : ನೀತಿ ಆಯೋಗದ ಸದಸ್ಯ ಸಾರಸ್ವತ್​ ಹೇಳಿಕೆ

author img

By

Published : Jun 1, 2021, 10:20 PM IST

ಅಲೋಪತಿ ಮತ್ತು ಆಯುರ್ವೇದದ ಬಗ್ಗೆ ಯೋಗ ಗುರು ರಾಮದೇವ್ ಅವರ ಕಾಮೆಂಟ್‌ಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕೋವಿಡ್​ ಸೋಂಕುಗಳಿಗೆ ಚಿಕಿತ್ಸೆ ನೀಡುವಲ್ಲಿ ಅಲೋಪತಿ ಔಷಧಿಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದೆ..

ವಿ ಕೆ ಸರಸ್ವತ್​
ವಿ ಕೆ ಸರಸ್ವತ್​

ನವದೆಹಲಿ : ಅಲೋಪತಿ ಮತ್ತು ಆಯುರ್ವೇದದ ಬಗ್ಗೆ ಚರ್ಚೆಯಲ್ಲಿ ವಾಸ್ತವವಾಗಿ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ, ಎರಡೂ ವಿಭಿನ್ನ ಮತ್ತು ಉಪಯುಕ್ತ ಔಷಧ ವ್ಯವಸ್ಥೆಗಳಾಗಿವೆ ಎಂದು ಖ್ಯಾತ ವಿಜ್ಞಾನಿ ಮತ್ತು ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಹೇಳಿದರು.

ಪತಂಜಲಿ ಆಯುರ್ವೇದದ ಸಂಶೋಧನೆಯೊಂದಿಗೆ ಔಷಧವು ಸಂಪರ್ಕ ಹೊಂದಿದೆ ಎಂಬ ವರದಿಗಳ ಬಗ್ಗೆ ಮಾತನಾಡಿದ ಅವರು, ಡಿಆರ್‌ಡಿಒ ಆ್ಯಂಟಿ-ಕೋವಿಡ್ ಔಷಧದ ಮತ್ತು ಪತಂಜಲಿ ಆಯುರ್ವೇದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲೋಪತಿ ಮತ್ತು ಆಯುರ್ವೇದದ ಬಗ್ಗೆ ಯೋಗ ಗುರು ರಾಮದೇವ್ ಅವರ ಕಾಮೆಂಟ್‌ಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕೋವಿಡ್​ ಸೋಂಕುಗಳಿಗೆ ಚಿಕಿತ್ಸೆ ನೀಡುವಲ್ಲಿ ಅಲೋಪತಿ ಔಷಧಿಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದೆ.

ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ಔಷಧಿ ವ್ಯವಸ್ಥೆಯಿದೆ. ಜನರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವಲ್ಲಿ ಆಯುರ್ವೇದ ಔಷಧವು ಕಾರಣವಾಗಿದೆ ಎಂದು ಹೇಳಿದರು.

"ಆಯುರ್ವೇದ ಮತ್ತು ಅಲೋಪತಿ, ಅವು ಎರಡು ಔಷಧದ ಹೊಳೆಗಳು ಮತ್ತು ಅವು ಒಟ್ಟಿಗೆ ಸಾಗುತ್ತದೆ. ಒಂದಕ್ಕೊಂದು ನಿರ್ದಿಷ್ಟ ಪಾತ್ರ ಹೊಂದಿದೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.